ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ ಯುವರಾಜ್ ಖಾತೆಯಿಂದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮಧ್ಯಾಹ್ನ ತುರ್ತು ಸುದ್ದಿಗೋಷ್ಠಿ ನಡೆಸಿದ ರಾಧಿಕಾ, ಯುವರಾಜ್ ಕಡೆಯಿಂದ ನಮಗೆ ಯಾವುದೇ ಹಣ ಬಂದಿಲ್ಲ, ತಮ್ಮ ಮೇಲಿನ ಆರೋಪ ಶುದ್ಧ ಸುಳ್ಳು ಎಂದು ಪ್ರತಿಕ್ರಿಯಿಸಿದರು.

ಯುವರಾಜ್ ಹಾಗೂ ತಮಗೂ ಬಹಳ ವರ್ಷದಿಂದ ಪರಿಚಯವಿದೆ. ಐತಿಹಾಸಿಕ ಸಿನಿಮಾ ನಿರ್ಮಾಣ ಮಾಡುವುದಕ್ಕೆ ನಾನು ಅವರು ಮಾತನಾಡಿದ್ದೇವು. ಆದರೆ, ಅವರು ಎರಡು ಬ್ಯಾನರ್‌ನಲ್ಲಿ ಸಿನಿಮಾ ಮಾಡುವುದಾಗಿ ಹೇಳಿದ ಕಾರಣ ನಾನು ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಸಿನಿಮಾ ನಿಂತುಹೋಯಿತು. ಇನ್ನೂ ದೊಡ್ಡ ದೊಡ್ಡವರಿಗೇ ಯುವರಾಜ್ ಅವರು ಯಾಮಾರಿಸಿದ್ದಾರೆ. ಇನ್ನೂ ನನಗೆ ಯಾಮಾರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ನಾನು ಯಾರಿಗೂ ಮೋಸ ಮಾಡಿಲ್ಲ. ಬದಲಿಗೆ ನನಗೆ ಮೋಸ ಮಾಡಿರುವವರು ಬಹಳಷ್ಟು ಜನರಿದ್ದಾರೆ ಎಂದರು.

ಯುವರಾಜ್ ಕಷ್ಟದ ಸಮಯದಲ್ಲಿ ನಮ್ಮ ತಂದೆಯವರು, ಅವರಿಗೆ ಸಹಾಯ ಮಾಡಿದ್ದರು. ಹಲವು ದಿನಗಳ ಬಳಿಕ ನಮ್ಮನ್ನು ಭೇಟಿಯಾಗಿ ಯುವರಾಜ್ ಸಿನಿಮಾ ಪ್ರಪೋಸಲ್ ಇಟ್ಟಿದ್ದರು ಎಂದು ತಿಳಿಸಿದರು.

ಯುವರಾಜ್ ನಮ್ಮ ಕುಟುಂಬದ ಬಗ್ಗೆ ಭವಿಷ್ಯ ಹೇಳಿದ್ದರು. ನನ್ನ 16ನೇ ವಯಸ್ಸಿನಲ್ಲಿ ನನ್ನ ಜೀವನದಲ್ಲಿ ಆಗಲಿರುವ ಅನೇಕ ಬದಲಾವಣೆಗಳ ಬಗ್ಗೆ, ನನಗೆ ಹೆಣ್ಣು ಮಗುವಾಗುವ ಬಗ್ಗೆ ಕೂಡ ಆತ ಹೇಳಿದ್ದ. ಹೀಗಾಗಿ ಆತ ಸಿನಿಮಾ ನಿರ್ಮಾಣ ಮಾಡಬೇಕು ಅಂತ ಹೇಳಿದ್ದ ವೇಳೆಯಲ್ಲಿ ಒಪ್ಪಿಕೊಂಡಿದ್ದೇವು ಎಂದು ಹೇಳಿದರು.

ನಾನು ಎಲ್ಲೂ ಓಡಿ ಹೋಗಿಲ್ಲ, ಬೆಂಗಳೂರಿನಲ್ಲಿ ಇದ್ದೇನೆ. ನನ್ನ ಸಹೋದರ ಕೂಡ ಹಣಕಾಸಿನ ಸಂಬಂಧ ಹೊಂದಿಲ್ಲ. ಇದಲ್ಲದೇ ಯುವರಾಜ್ ಅವರೇ ನಮ್ಮನ್ನು ಭೇಟಿ ಮಾಡಿದರೇ ಹೊರತು ನಾವು ಅವರನ್ನು ಹುಡುಕಿಕೊಂಡು ಹೋಗಿ ಸಿನಿಮಾ ಮಾಡುವಂತೆ ಮನವಿ ಮಾಡಿಕೊಂಡಿಲ್ಲ ಎಂದು ಹೇಳಿದರು.

ನನ್ನ ಮೇಲಿನ ಆರೋಪಗಳನ್ನು ನಾನು ಎದುರಿಸಲು ಸಿದ್ದವಾಗಿದ್ದು, ನನ್ನ ತಾಯಿ ಇದರಿಂದ ತೀವ್ರವಾಗಿ ನೊಂದುಕೊಂಡಿದ್ದಾರೆ. ಆದರೆ, ಇದನ್ನು ನಾವು ಸಮರ್ಥವಾಗಿ ನಿಭಾಯಿಸುವೆ ಎಂದರು.

Leave a Reply

Your email address will not be published. Required fields are marked *

You May Also Like

ಪ್ರೇಮಕಥೆಯ ಸಲಿಗೆ ಸಿಂಗಲ್ ಸಾಂಗ್ ಚಂದನ್ ಶೆಟ್ಟಿ ಡ್ಯಾನ್ಸ್

ಬೆಂಗಳೂರು: ಪ್ರೇಮಿಯೊಬ್ಬ ಪ್ರೀತಿಯಿಂದ ಆಗ ಬದಲಾವಣೆಯನ್ನು ಚಂದನ್ ಶೆಟ್ಟಿ ಲವ್ ಸಾಂಗ್ ಒಂದರಲ್ಲಿ ಬಿಂಬಿಸಿದ್ದಾರೆ. ಈ ಮೂಲಕ ಆಲ್ಬಂ ಸಾಂಗ್ ನಲ್ಲಿ ಚಂದನ್ ಶೆಟ್ಟಿ ಹೊಸ ಪ್ರಯೋಗ ಮಾಡಿದ್ದಾರೆ. ಸಲಿಗೆ ಹೆಸರಿನ ಸಿಂಗಲ್ ಆಲ್ಬಂ ಅನ್ನು ಚಂದನ್ ಶೆಟ್ಟಿ ಮೇ 28 ರಂದು ಬಿಡುಗಡೆ ಮಾಡಿದ್ದಾರೆ. ಕೆನಡಾದಲ್ಲಿ ಚಿತ್ರೀಕರಿಸಿದ ಹಾಡನ್ನು ತಾವೇ ಶೂಟ್ ಮಾಡಿದ್ದಲ್ಲದೇ ಚೆನ್ನಾಗಿ ನೃತ್ಯ ಮಾಡಿದ್ದಾರೆ ಚಂದನ್ ಶೆಟ್ಟಿ.

ಬಹು ದಿನಗಳ ನಂತರ ಚಂದನವನಕ್ಕೆ ಪ್ರಭುದೇವ್ ಕಾಲಿಡುವರೇ?

ಬೆಂಗಳೂರು : ಶಿವಣ್ಣ ಅವರೊಂದಿಗೆ ಪ್ರಭುದೇವ್ ಚಂದನವನದಲ್ಲಿ ಸದ್ದು ಮಾಡಲು ತಯಾರಿ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ನಟ ಸಲ್ಮಾನ್ ಖಾನ್ ಈ ರೀತಿ ಮಾಡಿದ್ದು ಸತ್ಯವೇ? ಸರಿಯೇ?

ಮುಂಬಯಿ : ಕೊರೊನಾದ ಅಬ್ಬರದ ನಡುವೆ ಬಾಲಿವುಡ್ ನ ಒಂದೊಂದೆ ಮುಖಗಳು ಅನಾವರಣಕ್ಕೆ ಬರುತ್ತಿವೆ. ಯುವ ನಟ ಸುಶಾಂತ್‌ ಸಿಂಗ್‌ ರಜಪೂತ್‌ ನಿಧನದ ನಂತರ ಅನೇಕ ಸತ್ಯಗಳು ಹೊರ ಬರುತ್ತಿವೆ. ಪಕ್ಷಪಾತ, ಗುಂಪುಗಾರಿಕೆ, ಕೀಳು ರಾಜಕೀಯದ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.

ಚಿರಂಜೀವಿ ಸರ್ಜಾ ನೆನೆದು ಭಾವನಾತ್ಮಕವಾಗಿ ಟ್ವೀಟ್ ಮಾಡಿದ ಮೇಘನಾ..!

ಬೆಂಗಳೂರು: ಇತ್ತಿಚೆಗಷ್ಟೆ ನಿಧನ ಹೊಂದಿದ ನಟ ಚಿರಂಜೀವಿ ಸರ್ಜಾ ಬಹುಬೇಗ ಮರೆಯುವಂತಹ ನಟನಲ್ಲ. ಅದರಲ್ಲೂ 10…