ಬೆಂಗಳೂರು : ಶಿವಣ್ಣ ಅವರೊಂದಿಗೆ ಪ್ರಭುದೇವ್ ಚಂದನವನದಲ್ಲಿ ಸದ್ದು ಮಾಡಲು ತಯಾರಿ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಶಿವರಾಜ್ ಕುಮಾರ್ ಹಾಗೂ ಯೋಗರಾಜ್ ಭಟ್ ಅವರ ಕಾಂಬಿನೇಶನ್ ನಲ್ಲಿ ಚಿತ್ರವೊಂದು ತಯಾರಾಗುತ್ತಿದ್ದು, ಈ ಚಿತ್ರದಲ್ಲಿ ಪ್ರಭುದೇವ್ ಕೂಡ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಅವರ ಅಭಿನಯದ ಕುರಿತು ಇನ್ನೂ ಅಂತಿಮ ಮಾತು ತಿಳಿದು ಬಂದಿಲ್ಲ. ಚಿತ್ರ ತಂಡ ಮಾತ್ರ ಪ್ರಭುದೇವ್ ಅಭಿನಯಿಸುವುದು ಬಹುತೇಕ ಖಚಿತವಾಗಲಿದೆ ಎಂದು ಹೇಳುತ್ತಿದೆ.

ಯೋಗರಾಜ್ ಭಟ್ ಅವರ ನಿರ್ದೇಶನ ಯಾವಾಗಲೂ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿರುತ್ತದೆ. ಯೋಗರಾಜ್ ಭಟ್ ಅವರ ನಿರ್ದೇಶನ ಹಾಗೂ ಹಾಡುಗಳಿಗೆ ಮಾರು ಹೋಗದ ಚಿತ್ರ ರಸಿಕರೇ ಇಲ್ಲ ಎಂಬ ಮಾತುಗಳು ಗಾಂಧಿನಗರದಲ್ಲಿ ಈಗಲೂ ಹಸಿಯಾಗಿಯೇ ಉಳಿದಿದೆ. ಸದ್ಯ ಗಾಳಿಪಟ – 2ರಲ್ಲಿ ಕೆಲಸ ಮಾಡುತ್ತಿರುವ ಯೋಗರಾಜ್ ಭಟ್, ಶಿವಣ್ಣ ಅವರಿಗಾಗಿ ಚಿತ್ರ ನಿರ್ಮಿಸುತ್ತಿದ್ದಾರೆ.

ಗಾಳಿಪಟ-2 ಚಿತ್ರೀಕರಣದ ಸಂದರ್ಭದಲ್ಲಿ ಯೋಗರಾಜ್ ಭಟ್ ಅವರು ಪ್ರಭುದೇವ್ ಅವರನ್ನು ಭೇಟಿ ಮಾಡಿದ್ದು ಸುದ್ದಿಯಾಗಿತ್ತು. ಈ ಸಂದರ್ಭದಲ್ಲಿ ಚಿತ್ರದ ಕುರಿತು ಮಾತನಾಡಿದ್ದಾರೆ ಎನ್ನಲಾಗಿದ್ದು, ಕಥೆಯನ್ನು ಕೂಡ ಪ್ರಭುದೇವ್ ಇಷ್ಟಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಅಭಿನಯಿಸಲು ಮಾತ್ರ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ.

ಇನ್ನೊಂದೆಡೆ ಶಿವಣ್ಣ ಭಜರಂಗಿ – 2ನಲ್ಲಿ ಬ್ಯೂಸಿಯಾಗಿದ್ದಾರೆ. ಅಷ್ಟೆ ಅಲ್ಲದೆ, ಶಿವರಾಜ್ ಕುಮಾರ್ ಅವರ ಕೈಯಲ್ಲಿ ಸಾಲು ಸಾಲು ಚಿತ್ರಗಳು ಕೂಡ ಇವೆ. ಆದರೆ, ಪ್ರಭುದೇವ ಅವರು ಅಭಿನಯಿಸಲು ಒಪ್ಪಿದ ಮೇಲೆ ಈ ಚಿತ್ರ ನಿರ್ಮಾಣವಾಗಲಿದೆಯೇ? ಅಥವಾ ಕಾಲ್ ಶೀಟ್ ನೋಡಿಕೊಂಡು ಶಿವಣ್ಣ, ಯೋಗರಾಜ್ ಭಟ್ ರೊಂದಿಗೆ ಕೈ ಜೋಡಿಸುತ್ತಾರೆಯೇ? ಕಾಯ್ದು ನೋಡಬೇಕಿದೆ.

Leave a Reply

Your email address will not be published. Required fields are marked *

You May Also Like

ಬೆಳ್ಳಿ ತೆರೆಯ ಕಾರ್ಮಿಕರಿಗೆ ವಿಶೇಷ ಕೊಡುಗೆ!

ಬೆಳ್ಳೆ ತೆರೆಯ ಹಿಂದೆ ದುಡಿದಿರುವ ಎಲ್ಲ ಕಾರ್ಮಿಕರಿಗೂ ಗೌರವ ಸಲ್ಲಿಸುವ ನಿಟ್ಟಿನಲ್ಲಿ ರಾಬರ್ಟ್ ಚಿತ್ರ ತಂಡ ಮೇಕಿಂಗ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ.

ಉಸಿರಾಟ ತೊಂದರೆಯಿಂದ ನಟ ಚಿರಂಜೀವಿ ಸರ್ಜಾ ಸಾವು..!

ನಟ ಚಿರಂಜೀವಿ ಸರ್ಜಾ ಉಸಿರಾಟದ ತೊಂದರೆ ಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದರು.

ಸೂಪರ್ ಸ್ಟಾರ್ ಚಿತ್ರ ತಂಡದ ಗಿಫ್ಟ್ ಏನು ಗೊತ್ತಾ?

ಸೂಪರ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅಭಿನಯದ ಚಿತ್ರಕ್ಕೆ ನಟ ಯಶ್ ಸಾಥ್ ನೀಡಿದ್ದಾರೆ. ನಿರಂಜನ್ ಅಭಿನಯದ ಸೂಪರ್ ಸ್ಟಾರ್ ಚಿತ್ರದ ಟೀಸರ್ ಗೆ ರಾಕಿಂಗ್ ಸ್ಟಾರ್ ಧ್ವನಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗಷ್ಟೇ ಸೂಪರ್ ಸ್ಟಾರ್ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿತ್ತು. ಈ ಸಮಾರಂಭದಲ್ಲಿ ನಟ ಉಪೇಂದ್ರ ಹಾಗೂ ಪ್ರಿಯಾಂಕ್ ಉಪೇಂದ್ರ ಭಾಗಿಯಾಗಿದ್ದರು.

ಕರಣ್ ಜೋಹರ್ ಗೆ ನೀಡಿದ ಪದ್ಮಶ್ರೀ ಪ್ರಶಸ್ತಿ ಹಿಂಪಡೆಯಲು ನಟಿ ಕಂಗನಾ ಹೇಳಿದ್ದೇಕೆ?

ಇತ್ತಿಚೆಗಷ್ಟೆ ಪದ್ಮಶ್ರೀ ಪ್ರಶಸ್ತಿ ಪಡೆದ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ವಿರುದ್ಧ ನಟಿ ಕಂಗನಾ ರಾಣಾವತ್ ಹಲವು ಆರೋಪ ಮಾಡಿದ್ದಾರೆ. ಹೀಗಾಗಿ ಕರಣ್ ಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದ್ದಾರೆ.