ನವದೆಹಲಿ: 2021 ರ ಆರಂಭದಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಜನವರಿ 2021 ರಿಂದ ಅನ್ವಯವಾಗುವಂತೆ, ತುಟ್ಟಿ ಭತ್ಯೆಯಲ್ಲಿ ಶೇ.4 ರಷ್ಟು ಏರಿಕೆ ಮಾಡುವುದಾಗಿ ವರದಿಗಳು ಹರಿದಾಡುತ್ತಿವೆ.

7ನೇ ಕೇಂದ್ರ ವೇತನಾ ಆಯೋಗದ ಶಿಫಾರಸಿನ ಆಧಾರದ ಮೇಲೆ ಈ ನಿರ್ಧಾರಕ್ಕೆ ಸರ್ಕಾರ ಬಂದಿದೆ. 2020ರ ಮಾರ್ಚ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಪುಟ ಸಭೆಯಲ್ಲಿ, ಜನವರಿ 2021 ರಿಂದ ಅನ್ವಯವಾಗುವಂತೆ ಈ ಹೆಚ್ಚಳವನ್ನು ತರಲು ನಿರ್ಧರಿಸಲಾಗಿತ್ತು. ಹಣದುಬ್ಬರವನ್ನು ಗಮನದಲ್ಲಿ ಇಟ್ಟುಕೊಂಡು ಮೂಲ ವೇತನದ ಶೇ.17 ರಷ್ಟು ಇರಲಿರುವ ತುಟ್ಟಿ ಭತ್ಯೆಯಲ್ಲಿ ಶೇ.4ರಷ್ಟು ಏರಿಕೆ ಮಾಡಲಾಗುವುದು. ಪಿಂಚಣಿದಾರರ ತುಟ್ಟಿ ನಿರಾಳತೆಯ ಮೇಲೂ ಸಹ ಈ ಕ್ರಮ ಅನ್ವಯವಾಗುತ್ತದೆ.

ದೇಶಾದ್ಯಂತ ಇರುವ 48.34 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 65.26 ಲಕ್ಷ ಪಿಂಚಣಿದಾರರು ಈ ಕ್ರಮದಿಂದ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಬೊಕ್ಕಸದ ಮೇಲೆ ಪ್ರತಿ ವರ್ಷ ಹೆಚ್ಚುವರಿಯಾಗಿ 12,510 ಕೋಟಿ ರೂಗಳ ಹೊರೆ ಬೀಳಲಿದೆ.

ಇದೇ ವೇಳೆ ಹಾಲಿ ಕೆಲಸದಲ್ಲಿರುವ ನೌಕರರು ಕರ್ತವ್ಯದ ಅವಧಿಯಲ್ಲಿ ಏನಾದರೂ ಅಪಘಾತ ಸಂಭವಿಸಿ ಅಂಗವೈಕಲ್ಯಕ್ಕೆ ತುತ್ತಾದಲ್ಲಿ ಅವರಿಗೆ ಅಂಗವೈಕಲ್ಯ ಪರಿಹಾರವನ್ನು ನೀಡಲು ಕಳೆದ ವಾರ ಮೋದಿ ಸರ್ಕಾರ ನಿರ್ಧರಿಸಿತ್ತು.

ಈ ಆದೇಶದಿಂದ ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆಗಳಾದ ಸಿಆರ್‌ಪಿಎಫ್, ಬಿಎಸ್‌ಎಫ್, ಸಿಐಎಸ್‌ಎಫ್‌ನ ಯೋಧರಿಗೆ ದೊಡ್ಡ ನಿರಾಳತೆ ಮೂಡಿದೆ.

Leave a Reply

Your email address will not be published. Required fields are marked *

You May Also Like

ಚೀನಾಕ್ಕೆ ಟಾಂಗ್ ನೀಡಿದ ಭಾರತ ಹಾಗೂ ಅಮೆರಿಕ!

ನವದೆಹಲಿ : ಭಾರತ ಹಾಗೂ ಅಮೆರಿಕದ ನಡುವೆ ಮಹತ್ತರವಾದ ರಕ್ಷಣಾ ಒಪ್ಪಂದಗಳಾಗಿವೆ. ಎರಡೂ ರಾಷ್ಟ್ರಗಳ ನಡುವೆ ಮಿಲಿಟರಿ ತಂತ್ರಜ್ಞಾನ, ವರ್ಗೀಕೃತ ಉಪಗ್ರಹ ದತ್ತಾಂಶ ಹಾಗೂ ಸೂಕ್ಷ್ಮ ಮಾಹಿತಿಗಳ ವಿನಿಮಯದ ಕುರಿತು 2+2 ಮಾತುಕತೆ ನಡೆದಿವೆ.

ಭಾರತೀಯ ಯೋಧರ ದಾಳಿಗೆ , ಹಿಜ್ಬುಲ್ ಮುಜಾಹಿದ್ದೀನ್ ಅತ್ಯುಗ್ರ ರಿಯಾಜ್ ನಾಯ್ಕೂ ಹತ

ಭಾರತದ ಶತ್ರು, ಹಿಜ್ಬುಲ್ ಮುಜಾಹಿದ್ದೀನ್ ಅತ್ಯುಗ್ರ ರಿಯಾಜ್ ನಾಯ್ಕೂನನ್ನು ಭದ್ರತಾ ಪಡೆ ಯೋಧರು ಮುಗಿಸಿದ್ದಾರೆ.

ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನಿಧನರಾಗಿದ್ದಾರೆ.

800 ಕಿ.ಮೀ ದೂರ ತೆರಳಿ ದೂರು ದಾಖಲಿಸಿದ ಅತ್ಯಾಚಾರ ಸಂತ್ರಸ್ತೆ!

ಅತ್ಯಾಚಾರಕ್ಕೆ ಒಳಗಾದ ಮಹಿಳೆಯೊಬ್ಬರು ಬರೋಬ್ಬರಿ 800 ಕಿ.ಮೀ ಪ್ರಯಾಣಿಸಿ ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.