ಚೆನ್ನೈ : ಆನ್ ಲೈನ್ ಜೂಜಾಟದಿಂದಾಗಿ ಸದ್ಯ ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಗ್ಯಾಂಬ್ಲಿಂಗ್ ಅನ್ನು ಉತ್ತೇಜಿಸುತ್ತಿರುವ ಜಾಹಿರಾತುಗಳಲ್ಲಿ ನಟಿಸಿರುವ ಸೆಲೆಬ್ರಿಟಿಗಳಿಗೆ ನೊಟೀಸ್ ನೀಡಲಾಗಿದೆ.  

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಭಾರತೀಯ ಕ್ರಿಕೆಟ್  ತಂಡದ ನಾಯಕ ವಿರಾಟ್ ಕೊಹ್ಲಿ, ನಟ ಪ್ರಕಾಶ್ ರಾಜ್, ರಾಣಾ ಮತ್ತು ತಮನ್ನಾ ಭಾಟಿಯಾಗೆ ಮದ್ರಾಸ್ ಹೈಕೋರ್ಟ್ ನೊಟೀಸ್ ನೀಡಿದೆ.

ಅಲ್ಲದೇ, ನ. 19ರೊಳಗೆ ಉತ್ತರಿಸುವಂತೆ ಸೂಚಿಸಿದೆ. ತಮಿಳುನಾಡಿನಲ್ಲಿ ಜೂಜಾಟದಿಂದಾಗಿ ಸಾಲ ಹೆಚ್ಚಾಗಿ 9 ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚೆನ್ನೈ ಮೂಲದ ವ್ಯಕ್ತಿ, ಆನ್‌ ಲೈನ್‌ ಜೂಜಾಟದಿಂದ ಯುವಕರು ದಾರಿ ತಪ್ಪುತ್ತಿದ್ದಾರೆ. ಈ ಕಾರಣದಿಂದ ಇಂತಹ ಆಪ್‌ಗಳನ್ನು ರದ್ದು ಮಾಡಬೇಕೆಂದು ಅರ್ಜಿ ಸಲ್ಲಿಸಿದ್ದರು.

ಯುವಕರನ್ನು ಮನಸ್ಸನ್ನು ಆನ್‌ ಲೈನ್‌ ಜೂಜಾಟಕ್ಕೆ ಸೆಳೆಯಲು ಕ್ರಿಕೆಟ್ ಖ್ಯಾತನಾಮ ಹಾಗೂ ನಟ, ನಟಿಯರು ಬಳಕೆಯಾಗುತ್ತಿದ್ದಾರೆ ಎಂದು ಹೇಳಿದ್ದರು. 

Leave a Reply

Your email address will not be published. Required fields are marked *

You May Also Like

ಸೇಡು ತೀರಿಸಿಕೊಳ್ಳುವುದರ ಮೂಲಕ ಗೆಲುವಿನ ಲಯ ಕಂಡುಕೊಂಡ ಚೆನ್ನೈ!

ದುಬೈ : ಆರ್ ಸಿಬಿ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಂಟು ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. ಈ ಮೂಲಕ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ಗೆ ಸುಲಭ ಮೊತ್ತದ ಗುರಿ ನೀಡಿದ ಹೈದರಾಬಾದ್!

ಶಾರ್ಜಾ : ಮನೀಶ್ ಪಾಂಡೆ ಅವರ ಅರ್ಧಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತಾ…

ಭರ್ಜರಿ ಫಾರ್ಮ್ ಗೆ ಮರಳಿದ ತಂಡದ ಸ್ಟಾರ್ ಆಟಗಾರರಿಗೆ ಗಿಫ್ಟ್ ನೀಡಿದ ಪ್ರೀತಿ ಜಿಂಟಾ!

ದುಬೈ : ಪ್ರಾರಂಭದಲ್ಲಿ ಸೋಲಿನಿಂದ ಕಂಗೆಟ್ಟಿದ್ದ ಪಂಜಾಬ್ ತಂಡ ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಭರ್ಜರಿ ಫಾರ್ಮ್ ಗೆ ಮರಳಿದೆ. ಅಲ್ಲದೇ, ಕಳೆದ ಮೂರು ಪಂದ್ಯಗಳನ್ನು ಗೆದ್ದು ಬೀಗಿದೆ. ಹೀಗಾಗಿ ತಂಡದ ಮಾಲಕರಾದ ಪ್ರೀತಿ ಜಿಂಟಾ ಅವರು ತಂಡದ ನಾಯಕ ಹಾಗೂ ಗೇಲ್ ಗೆ ಉಡುಗೊರೆ ನೀಡಿದ್ದಾರೆ.

ಸತತ ಸೋಲಿನಿಂದ ಬಳಲುತ್ತಿರುವ ಧೋನಿ ಕಾಲೇಳೆಯುತ್ತಿರುವ ನೆಟ್ಟಿಗರು!

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಅವರ ಕಾಲೆಳೆಯುವ ಕಾರ್ಯವನ್ನು ನೆಟ್ಟಿಗರು ಮಾಡುತ್ತಿದ್ದಾರೆ.