ಮುಳಗುಂದ : ಸಮೀಪದ ಹೊಸೂರ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಯಂಗ್ ಸ್ಟಾರ್ ವತಿಯಿಂದ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿಗಳನ್ನ ಇದೇ ಫೆ. 12 ರಂದು ಮಹಾಂತೇಶಗೌಡ ಗೌಡರ ಅವರ ಹೊಲದಲ್ಲಿ ಸಿದ್ದಗೊಳಿಸಿದ ಮೈದಾನದಲ್ಲಿ ಏರ್ಪಡಿಸಲಾಗಿದೆ. ಎಂದು ಸಮಿತಿ ಸದಸ್ಯ ಬಸವರಾಜ ಬಂಡಿವಡ್ಡರ ತಿಳಿಸಿದರು.

ಈ ಕುರಿತು ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಕಾಗೋಷ್ಠಿಯಲ್ಲಿ ಮಾತನಾಡಿದರು. ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ದೃಷ್ಠಿಯಿಂದ ಈ ಬಾರಿ ಪ್ರೋ ಕಬಡ್ಡಿ ಹಮ್ಮಿಕೊಳ್ಳಲಾಗಿದೆ. ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 40 ರಿಂದ 50 ತಂಡಗಳು ಭಾಗವಹಿಸುವ ನೀರಿಕ್ಷೆ ಇದೆ. ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ, ಸುಸಜ್ಜಿತ ಮೈದಾನ ಹಾಗೂ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗುವದು. ಭಾಗವಹಿಸುವ ತಂಡಗಳು 501 ರೂ ಪ್ರವೇಶ ಶುಲ್ಕ ತುಂಬಿ ಪಂದ್ಯಾವಳಿಯ ನಿಯಮಗಳಿಗೆ ಬದ್ದರಾಗಿ ಭಾಗವಹಿಸಬೇಕು. ಎಂದು ತಿಳಿಸಿದರು.

ಫೆ. 12 ರಂದು ಸಂಜೆ 5 ಕ್ಕೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಭಯ್ಯ ದೇಸಾಯಿಮಠ,ತಾಪಂ ಸದಸ್ಯೆ ಸಾವಿತ್ರಮ್ಮ ಸುಂಕದ, ಪ.ಪಂ ಸದಸ್ಯರಾದ ಬಸವರಾಜ ಹಾರೋಗೇರಿ, ಎಸ್.ಸಿ.ಬಡ್ನಿ ಸೇರಿದಂತೆ ಗ್ರಾಂದ ಹಿರಿಯರು ಪಾಲ್ಗೊಳ್ಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9482930613, 9980736177 ಸಂಪರ್ಕಿಸಿ ಎಂದರು.

ಈ ಸಂದರ್ಭದಲ್ಲಿ ಅಶೋಕ ಅಂಗಡಿ, ಚೇತನ ದೇಶಪಾಂಡೆ, ಪ್ರಕಾಶ ಹೊಂಬಣ್ಣವರ, ತಾಜುದ್ದಿನ ಹೊಂಬಳ, ಪಪಂ ಸದಸ್ಯ ಬಸವರಾಜ ಹಾರೋಗೇರಿ,ಮಹಾದೇವಪ್ಪ ಗಡಾದ, ಚನ್ನಪ್ಪ ಹುಲ್ಲೂರ, ರಮೇಶ ಮ್ಯಾಗೇರಿ, ಮಹಾದೇವಪ್ಪ ಹುಬ್ಬಳ್ಳಿ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *

You May Also Like

ಆನ್ ಲೈನ್ ಜೂಜಿನಿಂದ ಯುವಕರ ಆತ್ಮಹತ್ಯೆ – ಗಂಗೂಲಿ, ಕೊಹ್ಲಿಗೆ ನೊಟೀಸ್!

ಚೆನ್ನೈ : ಆನ್ ಲೈನ್ ಜೂಜಾಟದಿಂದಾಗಿ ಸದ್ಯ ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಗ್ಯಾಂಬ್ಲಿಂಗ್ ಅನ್ನು ಉತ್ತೇಜಿಸುತ್ತಿರುವ ಜಾಹಿರಾತುಗಳಲ್ಲಿ ನಟಿಸಿರುವ ಸೆಲೆಬ್ರಿಟಿಗಳಿಗೆ ನೊಟೀಸ್ ನೀಡಲಾಗಿದೆ.

ಆಸ್ಪತ್ರೆಗೆ ದಾಖಲಾದ ಭಾರತೀಯ ಕ್ರಿಕೆಟ್ ನ ದಂತಕಥೆ ಕಪಿಲ್ ದೇವ್!

ನವದೆಹಲಿ : ಭಾರತೀಯ ಕ್ರಿಕೆಟ್ ನ ದಂತಕಥೆ ಕಪಿಲ್ ದೇವ್(61) ಅವರಿಗೆ ಹೃದಯಘಾತವಾಗಿದ್ದು, ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಹೆಚ್ಚು ಸಂಭಾವನೆ ಪಡೆಯುವ 100 ಕ್ರಿಕೇಟಿಗರಲ್ಲಿ ಭಾರತೀಯ ಕ್ರೀಕೆಟಿಗ ಯಾರು?

ದೆಹಲಿ: 2020 ರ ಅತೀ ಹೆಚ್ಚು ಸಂಭಾವನೆ ಪಡೆಯುವ 100 ಕ್ರೀಡಾಪಟುಗಳಲ್ಲಿ ಫೋರ್ಬ್ಸ್ ನ ಏಕೈಕ…

ಧೋನಿ ನಿವೃತ್ತಿಯಾಗಲು ಇದೂ ಕಾರಣವಂತೆ!

ಕೊರೊನಾವೈರಸ್, ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಯ ನಿರ್ಧಾರ ತಾಳುವಂತೆ ಮಾಡಿತು ಎಂದು ಭಾರತದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಬೇಸರ ವ್ಯಕ್ತಪಡಿಸಿದ್ದಾರೆ.