ಉತ್ತರಪ್ರಭ ಸುದ್ದಿ

ಗದಗ: ಕರ್ನಾಟಕ ಸ್ಫೋರ್ಟ್ಸ್ ಆ್ಯಂಡ್ ಎಜ್ಯುಕೇಶನ್ ಅಕ್ಯಾಡೆಮಿ ಗದಗ ಇವರ ವತಿಯಿಂದ ಕೆ. ಎಚ್. ಪಾಟೀಲ ಫುಟಬಾಲ್ ಲೀಗ್-2022 ಆಯೋಜಿಸಲಾಗಿದೆ. ಟೋರ್ನಿಯು ಗದಗ ಶಹರದ ಮುಳಗುಂದ ರಸ್ತೆಯ ಕನಕ ಭವನ ಹತ್ತಿರವಿರು ಫುಟ್‌ಬಾಲ್ ಮೈದಾನದಲ್ಲಿ ಆಯೋಜಿಸಲಾಗಿದ್ದು ದಿನಾಂಕ 23-7-2022 ಶನಿವಾರ ಸಾಯಂಕಾಲ 5-30 ಘಂಟೆಗೆ ಉದ್ಘಾಟನೆಗೊಳ್ಳುವುದು.

ಮಾಜಿ ಅಂತರಾಷ್ಟ್ರೀಯ ಫುಟ್‌ಬಾಲ್ ಆಟಗಾರರು ಹಾಗೂ ಕೆ.ಎಸ್.ಎಫ್.ಎ. ಬೆಂಗಳೂರು ಇವರ ಉಪಕಾರ್ಯದರ್ಶಿಗಳಾದ ಶ್ರೀ ಅಸ್ಲಂಖಾನ ಇವರು ಟೋರ್ನಿಯನ್ನು ಉದ್ಘಾಟಿಸುರುವರು. ಶಾಸಕ ಎಚ್. ಕೆ. ಪಾಟೀಲ ಅಧ್ಯಕ್ಷತೆಯನ್ನು ವಹಿಸುವರು. ಮುಖ್ಯ ಅತಿಥಿಗಳಾಗಿ ಜಿ. ಎಸ್. ಪಾಟೀಲ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ ಗದಗ, ಮಾಜಿ ಶಾಸಕ ಡಿ. ಆರ್. ಪಾಟೀಲ, ಮಾಜಿ ಶಾಸಕ ಜಿ. ಎಸ್. ಗಡ್ಡದೇವರಮಠ (ಶಿರಹಟ್ಟಿ), ಮಾಜಿ ಶಾಸಕ ಎಸ್. ಎಸ್. ಪಾಟೀಲ (ಮುಂಡರಗಿ), ಮಾಜಿ ಸಚಿವ ಬಿ. ಆರ್. ಯಾವಗಲ್ (ನರಗುಂದ), ಮಾಜಿ ಶಾಸಕ ಎಸ್. ಎನ್. ಪಾಟೀಲ (ಶಿರಹಟ್ಟಿ), ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ (ಶಿರಹಟ್ಟಿ), ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ (ಗದಗ) ಇವರುಗಳು ಆಗಮಿಸಲಿದ್ದು.

ಅತಿಥಿಗಳಾಗಿ ಎಲ್. ಡಿ. ಚಂದಾವರಿ ವಿರೋಧಪಕ್ಷದ ನಾಯಕರು ಗದಗ-ಬೆಟಗೇರಿ ನಗರಸಭೆ ಗದಗ, ಬರಕತಅಲಿ ಮುಲ್ಲಾ ವಿರೋಧಪಕ್ಷದ ಉಪನಾಯಕರು, ಗದಗ-ಬೆಟಗೇರಿ ನಗರಸಭೆ ಗದಗ, ಗುರಣ್ಣ ಬಳಗಾನೂರ ಅಧ್ಯಕ್ಷರು ಗದಗ-ಬೆಟಗೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ, ಪ್ರಭು ಬುರಬುರೆ ಮಾಜಿ ಅಧ್ಯಕ್ಷರು ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ಇವರುಗಳು ಉಪಸ್ಥಿತರಿರುವರು.

Leave a Reply

Your email address will not be published. Required fields are marked *

You May Also Like

ಗೋರ ಸೇನಾ ಸಂಘಟನೇ ವತಿಯಿಂದ ಪ್ರತಿಭಟನೆ- ಸಂಗೂರ ಸಕ್ಕರೆ ಕಾರ್ಖಾನೆ:ಲಾರಿ ಹಾಯ್ದು ಒರ್ವ ಕಾರ್ಮೀಕ ಸಾವೂ, ಇಬ್ಬರಿಗೆ ಗಂಭೀರ ಗಾಯ

ಉತ್ತರಪ್ರಭ ಸುದ್ದಿ ಹಾವೇರಿ: ಹಾವೇರಿ ಜಿಲ್ಲೆಯ ಸಂಗೂರ ಸಕ್ಕರೆ ಕಾರ್ಖಾನೆಯಲ್ಲಿ ದಿನಾಂಕ:09.01.2022 ರಾತ್ರಿ 2.00 ಗಂಟೆ…

ಬಸ್ ನಿಲ್ದಾಣದಲ್ಲಿ ಶೌಚಾಲಯ ಅವ್ಯವಸ್ಥೆ ಸಾರಿಗೆ ಅಧಿಕಾರಿ ತರಾಟೆಗೆ

ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ಅವ್ಯವಸ್ಥೆಯನ್ನು ಸಾರಿಗೆ ಇಲಾಖೆ ಸಂಚಾರಿ ನಿರೀಕ್ಷಕರಿಗೆ ತೋರಿಸುವ ಮೂಲತ ಜೈ ಭೀಮ ಆರ್ಮಿ ಸಂಘಟನೆ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ.

ಐಪಿಎಲ್ ಬೆಟ್ಟಿಂಗ್: ಗದಗನಲ್ಲಿ ಏಳು ಜನರ ಬಂಧನ

ಐಪಿಎಲ್ ಬೆಟ್ಟಿಂಗ್ ಗೆ ಸಂಬಂಧಿಸಿದಂತೆ ಪೊಲೀಸರು 7 ಜನರನ್ನು ಬಂಧಿಸಿದ ಘಟನೆ ಗದಗ ನಗರದಲ್ಲಿ ನಡೆದಿದೆ.