ದುಬೈ: ಪ್ರಾರಂಭದಲ್ಲಿ ಸೋಲಿನಿಂದ ಕಂಗೆಟ್ಟಿದ್ದ ಪಂಜಾಬ್ ತಂಡ ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಭರ್ಜರಿ ಫಾರ್ಮ್ ಗೆ ಮರಳಿದೆ. ಅಲ್ಲದೇ, ಕಳೆದ ಮೂರು ಪಂದ್ಯಗಳನ್ನು ಗೆದ್ದು ಬೀಗಿದೆ. ಹೀಗಾಗಿ ತಂಡದ ಮಾಲಕರಾದ ಪ್ರೀತಿ ಜಿಂಟಾ ಅವರು ತಂಡದ ನಾಯಕ ಹಾಗೂ ಗೇಲ್ ಗೆ ಉಡುಗೊರೆ ನೀಡಿದ್ದಾರೆ.

ಕ್ರಿಸ್ ಗೇಲ್ ಪಂಜಾಬ್ ತಂಡಕ್ಕೆ ಎಂಟ್ರಿ ಕೊಟ್ಟ ವಿಶೇಷ ಎನ್ನುವಂತೆ ತಂಡ ಫ್ರಾಮ್ ಗೆ ಬಂದಿದೆ. ತಂಡ ಹ್ಯಾಟ್ರಿಕ್ ಗೆಲುವು ಪಡೆದಿದೆ. ಈ ಮೂಲಕ ತಂಡ ಪ್ಲೇ ಆಫ್ ರೇಸ್‍ ಗೂ ಎಂಟ್ರಿ ಕೊಟ್ಟಿದ್ದು, 5ನೇ ಸ್ಥಾನ ಪಡೆದುಕೊಂಡಿದೆ.

ಸತತ ಗೆಲುವು ಪಡೆದಿರುವುದರೊಂದಿಗೆ ಸಂತಸದಲ್ಲಿರುವ ಪಂಜಾಬ್ ತಂಡದ ಪ್ರೀತಿ ಜಿಂಟಾ, ಆಟಗಾರರಿಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. ನಾಯಕ ಕೆಎಲ್ ರಾಹುಲ್, ಗೇಲ್, ಶೆಲ್ಡನ್ ಕಾಟ್ರೆಲ್, ಶಮಿ, ಮ್ಯಾಕ್ಸ್ ವೇಲ್ ಸೇರಿದಂತೆ ಕೆಲವು ಆಟಗಾರರಿಗೆ ಗಿಫ್ಟ್ ನೀಡಿದ್ದಾರೆ.

ಪಂಜಾಬ್ ತಂಡವು ಸದ್ಯ ಪ್ಲೇ ಆಫ್ ತಲುಪಲು ಉಳಿದಿರುವ 4 ಪಂದ್ಯಗಳಲ್ಲಿ ಗೆಲುವು ಪಡೆಯಬೇಕಿದೆ. ಪ್ಲೇ ಆಫ್ ತಲುಪುವುದು ಕಷ್ಟ ಸಾಧ್ಯ ಎಂಬ ಸಂದರ್ಭದಲ್ಲಿಯೇ ಅಚ್ಚರಿಯ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಅಲ್ಲದೇ, ಪಟ್ಟಿಯಲ್ಲಿ ಅಗ್ರ ಸ್ಥಾನ ಇರುವ ಮೂರು ತಂಡಗಳನ್ನು ಪಂಜಾಬ್ ಸೋಲಿಸಿದೆ. ಬೆಂಗಳೂರು, ಮುಂಬಯಿ ಹಾಗೂ ದೆಹಲಿ ತಂಡವನ್ನು ಸೋಲಿಸಿ ಈಗ ಆತ್ಮವಿಶ್ವಾಸದಲ್ಲಿ ತೇಲುತ್ತಿದೆ. ಡೆಲ್ಲಿ ವಿರುದ್ಧ ಗೆಲುವಿನ ಬಳಿಕ ಪಂಜಾಬ್ ತಂಡದ ಆಟಗಾರರು, ತರಬೇತಿ ಸಿಬ್ಬಂದಿ, ಮ್ಯಾನೇಜ್ಮೆಂಟಟ್ ಹ್ಯಾಟ್ರಿಕ್ ಗೆಲುವಿನ ಸಂಭ್ರಮ ಆಚರಿಸಿದ್ದಾರೆ. 

ಈಗ ಅಂಕ ಪಟ್ಟಿಯಲ್ಲಿ 8 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿ ಇರುವ ಪಂಜಾಬ್, ಇನ್ನೂ ನಾಲ್ಕು ಪಂದ್ಯಗಳನ್ನು ಆಡಬೇಕಿದೆ. ಅಲ್ಲದೇ, ಇನ್ನೂಳಿದ ಪಂದ್ಯಗಳಲ್ಲಿಯೂ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ಒಂದೊಮ್ಮೆ ಒಂದು ಪಂದ್ಯದಲ್ಲಿ ಸೋಲುಂಡರೆ ಉಳಿದ ತಂಡಗಳ ನೆಟ್ ರನ್ ರೇಟ್ ಅನ್ವಯ ಪ್ಲೇ ಆಫ್ ತಲುಪುವ ಅವಕಾಶವಿದೆ. ಈಗಾಗಲೇ ದೆಹಲಿ, ಮುಂಬಯಿ ಹಾಗೂ ಬೆಂಗಳೂರು ತಂಡಗಳು ಫ್ಲೇ ಆಫ್ ಪ್ರವೇಶ ಮಾಡುವುದು ಬಹುತೇಕ ಖಚಿತವಾಗಿದ್ದು, ಕೋಲ್ಕತ್ತಾ, ರಾಜಸ್ಥಾನ, ಹೈದರಾಬಾದ್ ತಂಡಗಳು ಪ್ಲೇ ಆಫ್ ರೇಸ್ ನಲ್ಲಿವೆ. ಅಲ್ಲದೇ, ಈ ತಂಡಗಳು ಪ್ಲೇ ಆಫ್ ತಲುಪುವುದು ಕೂಡ ಬಹುತೇಕ ಖಚಿತವಾಗಿದೆ. 

Leave a Reply

Your email address will not be published. Required fields are marked *

You May Also Like

ಧೋನಿ ನಿವೃತ್ತಿ ಘೋಷಿಸುವ ಸಿದ್ಧತೆಯಲ್ಲಿದ್ದಾರೆಯೇ?

ಅಬುಧಾಬಿ : ಮ್ಯಾಚ್ ವಿನ್ನರ್ ಧೋನಿ ಐಪಿಎಲ್ ಗೂ ನಿವೃತ್ತಿ ಘೋಷಿಸಲಿದ್ದಾರೆಯೇ ಎಂಬ ಸಂಶಯ ಮೂಡುತ್ತಿದೆ. ಹಾಗಂತ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಪಂಜಾಬ್ ತಂಡ ಮಣಿಸಿ ಐತಿಹಾಸಿಕ ಗೆಲುವು ಸಾಧಿಸಿದ ರಾಜಸ್ಥಾನ್!

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ್ ಇಲವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಐತಿಹಾಸಿಕ ಗೆಲುವನ್ನು ರಾಜಸ್ಥಾನ್ ರಾಯಲ್ಸ್ ದಾಖಲಿಸಿದೆ.

ಧೋನಿ ವಿರುದ್ಧ ಮೂರು ಸಿಕ್ಸರ್ ಸಿಡಿಸುವ ಮೂಲಕ ಅಕ್ಷರ್ ಸೇಡು ತೀರಿಸಿಕೊಂಡರೆ?

ಶಾರ್ಜಾ : ಚೆನ್ನೈ ಸೂಪರ್ ಕಿಂಗ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಆಟಗಾರ ಅಕ್ಷರ್ ಪಟೇಲ್ ಕೊನೆಯ ಓವರ್ ನಲ್ಲಿ ಮೂರು ಸಿಕ್ಸರ್ ಸಿಡಿಸುವ ಮೂಲಕ ಧೋನಿ ವಿರುದ್ಧದ ಸೇಡು ತೀರಿಸಿಕೊಂಡಿದ್ದಾರೆ. ಈ ಮೂಲಕ ತಂಡಕ್ಕೂ ಜಯ ತಂದು ಕೊಟ್ಟಿದ್ದಾರೆ.

ಕಿಂಗ್ ಕೊಹ್ಲಿ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅಭಿಮಾನಿಗಳು!

ಶಾರ್ಜಾ : ಇಂದಿನ ಪಂದ್ಯಕ್ಕೂ ಮೊದಲು ಮೈದಾನದಲ್ಲಿ ಕೊಹ್ಲಿ ಡ್ಯಾನ್ಸ್ ಮಾಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.