ಮುಂಬಯಿ: ಬಾಲಿವುಡ್ ಮತ್ತು ಕ್ರಿಕೆಟ್ ನಂಟು ತೀರಾ ಹಳೆಯದು. ಅದಕ್ಕೆ ಇತ್ತೀಚೆಗೆ ಮತ್ತೊಂದು ಕೊಂಡಿ ಬೆಸೆದವರು ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ತಾರೆ ಅನುಷ್ಕಾ ಶರ್ಮಾ. ಇಬ್ಬರೂ ದಾಂಪತ್ಯಕ್ಕೆ ಕಾಲಿಟ್ಟಿದ್ದು ಹಳೆಯ ಸುದ್ದಿ. ಆದರೆ ಇದೀಗ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾಗೆ ವಿಚ್ಛೇದನ ನೀಡಬೇಕು ಎಂದು ಪಟ್ಟು ಹಿಡಿಯಲಾಗಿದೆ. ಅಷ್ಟಕ್ಕು ಇದರ ಹಿಂದಿನ ಕಥೆ ಏನು ಅಂತಾ ನೀವೇ ನೋಡಿ.

ಇವರಿಬ್ಬರ ಕಥೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ನಂದಕಿಶೋರ್ ಗುರ್ಜರ್. ಉತ್ತರಪ್ರದೇಶದ ಗಾಜಿಯಾಬಾದ್ ನ ಲೋನಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದು ಈತ ಶಾಸಕನಾಗಿ ಕೂಡ ಆಯ್ಕೆಯಾಗಿದ್ದಾನೆ. ಇದಕ್ಕೂ ಅನುಷ್ಕಾ ವಿಚ್ಛೇದನಕ್ಕೂ ಏನಪ್ಪಾ ಸಂಬಂಧ ಅಂತಾ ನಿಮ್ಗೆಲ್ಲಾ ತಲೆ ಕೆಡೋದು ಸಹಜ. ಯಾಕೆಂದರೆ, ವಿರಾಟ್ ಕೊಹ್ಲಿ ಇದುವರೆಗೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಕುರಿತು ಅಗತ್ಯ ಬಿದ್ದಾಗೆಲ್ಲ ಬೆಂಬಲಿಸಿರುವ ದೇಶದ ಕ್ರಿಕೆಟಿಗ.

ಇನ್ನು ನಟಿ ಅನುಷ್ಕಾ ಕೂಡ ನವಾಜುದ್ದೀನ್ ಸಿದ್ದಿಖಿ, ನಾಸಿರುದ್ದೀನ್ ಶಾ, ನಾನಾ ಪಾಟೇಕರ್, ಇರ್ಫಾನ್ ಖಾನ್, ಶಬಾನಾ ಅಜ್ಮಿಯಂತೆ ಆಡಳಿತಾರೂಢ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿಲ್ಲ. ಹಾಗಿದ್ದರೂ ಇದೇನು ಸಮಾಚಾರ ಅನ್ನೋ ಪ್ರಶ್ನೆ ಕಾಡೋದು ಸಹಜ.

ಇಲ್ಲಿ ನಿಜಕ್ಕೂ ಆಗಿದ್ದಿಷ್ಟು. ಇತ್ತೀಚೆಗೆ  ಅಮೆಜಾನ್ ಪ್ರೈಮ್ ನಲ್ಲಿ ‘ಪಾತಾಳ್ ಲೋಕ್’ ವೆಬ್ ಸೀರೀಸ್ ಪ್ರಸಾರವಾಗ್ತಿದೆ. ಇದರ ವಿರುದ್ಧ ಈ ನಂದಕಿಶೋರ್ ಗುರ್ಜರ್ ಒಂದು ಕಂಪ್ಲೆಂಟ್ ಗುಜರಾಯಿಸಿದ್ದಾರೆ. ಅದರಲ್ಲಿ ಸನಾತನ ಧರ್ಮದ (ಹಿಂದೂ), ಪಕ್ಷಗಳ (ಬಿಜೆಪಿ) ನಿಂದನೆಯಾಗಿದೆ. ಪಾತಾಳ್ ಲೋಕ್ ನಲ್ಲಿ ರಾಷ್ಟ್ರದ್ರೋಹದ ಸಂಗತಿಗಳಿವೆ ಎಂಬ ಆರೋಪಗಳನ್ನು ಹೊರಿಸಲಾಗಿದೆ. 

ಅದಕ್ಕೂ ಅನುಷ್ಕಾ ವಿಚ್ಛೇದನಕ್ಕೂ ಸಂಬಂಧ ಏನಪ್ಪಾ ಅಂತೀರಾ? ಈ ಪಾತಾಳ್ ಲೋಕ್ ಗೂ ಅನುಷ್ಕಾ ಅವರಿಗೂ ಸಂಬಂಧ ಇದೆ. ಈ ವೆಬ್ ಸೀರೀಸ್ ನಿರ್ಮಾಣ ಮಾಡಿರೋದೇ ಬಾಲಿವುಡ್ ನಟಿ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ. ಇದೇ ಕಾರಣಕ್ಕೆ ಇವರಿಬ್ಬರೂ ವಿಚ್ಛೇದನ ತಗೋಬೇಕು ಅನ್ನೋದು ಬಿಜೆಪಿ ಶಾಸಕನ ಒತ್ತಾಯ.

ಇದಕ್ಕೆಲ್ಲ ಮೂಲ ಕಾರಣ ಅನುಷ್ಕಾ ಶರ್ಮಾ ಅವರು ತಮ್ಮ ಪ್ರೊಡಕ್ಷನ್ ನಲ್ಲಿ ಆರಂಭಿಸಿರುವ ಮತ್ತು ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರವಾಗುತ್ತಿರುವ ಪಾತಾಳ್ ಲೋಕ್ ವೆಬ್ ಸೀರೀಸ್. ಈ ಸರಣಿ ಕುರಿತು ಕೆಲವರು ಪ್ರಶಂಸೆ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ತಕರಾರು ತೆಗೆದಿದ್ದಾರೆ. ವೆಬ್ ಸರಣಿಯಲ್ಲಿ ಗಾಜಿಯಾಬಾದ್ ನ ರಾಜ್ಯಸಭಾ ಸದಸ್ಯ ಅನಿಲ್ ಅಗರವಾಲ್ ಭಾವಚಿತ್ರವನ್ನು ಅವರ ಅನುಮತಿ ಇಲ್ಲದೆ ಬಳಸಿಕೊಳ್ಳಲಾಗಿದೆ. ಈಗಾಗಲೇ ಈ ಸರಣಿ ವಿಷಯದ ಸಂಬಂಧ ಅನುಷ್ಕಾ ಶರ್ಮ ವಿರುದ್ಧ ದೂರನ್ನೂ ನೀಡಲಾಗಿದೆ.

ವಿರಾಟ್ ಕೊಹ್ಲಿ ದೇಶಭಕ್ತ. ಅವರು ದೇಶಕ್ಕಾಗಿ ಆಟವಾಡುತ್ತಾರೆ. ಅವರು ಅನುಷ್ಕಾ ಅವರಿಗೆ ಶೀಘ್ರದಲ್ಲೇ ತಲಾಖ್ ನೀಡಬೇಕು. ನಿಸ್ಸಂಶಯವಾಗಿ ಇದರಲ್ಲಿ ವಿರಾಟ್ ಅವರ ಪಾತ್ರವಿಲ್ಲ. ಇಂತಹ ಸಮಸ್ಯೆಗಳಲ್ಲಿ ಅವರೆಂದೂ ಶಾಮೀಲಾಗುವುದಿಲ್ಲ ಎಂದು ನಂದಕಿಶೋರ್ ವಿರಾಟ್ ಪರ ಬ್ಯಾಟ್ ಬೀಸಿದ್ದಾರೆ. 

ಪಾತಾಳ ಲೋಕ್ ವೆಬ್ ಸೀರೀಸ್ ಮಾಡುವ ಮೂಲಕ ಅನುಷ್ಕಾ ರಾಷ್ಟ್ರದ್ರೋಹ ಎಸಗಿದ್ದಾರೆ. ಆದ್ದರಿಂದ ಅವರ ಮೇಲೆ ತನಿಖೆಯಾಗಬೇಕು. ಪಾತಾಳ ಲೋಕ್ ವೆಬ್ ಸೀರೀಸ್ ನಲ್ಲಿ ಬಾಲಕೃಷ್ಣ ವಾಜಪೇಯಿ ಹೆಸರಿನ ಅಪರಾಧಿಯ ಜೊತೆಗೆ ನನಗೆ ಮತ್ತು ಬಿಜೆಪಿಯ ಇತರ ನಾಯಕರೊಂದಿಗೆ ಸಂಬಂಧ ಇರುವಂತೆ ಫೋಟೋಗಳನ್ನು ತೋರಿಸಲಾಗಿದೆ. ನಾನು ಸದ್ಯಕ್ಕೆ ಬಿಜೆಪಿಯ ಶಾಸಕನಾಗಿದ್ದೇನೆ ಮತ್ತು ನನ್ನ ಅನುಮತಿ ಇಲ್ಲದೆ ನನ್ನ ಫೋಟೋಗಳನ್ನು ಬಳಸಿಕೊಳ್ಳಲಾಗಿದೆ. ಧರ್ಮ ಮತ್ತು ಜಾತಿಗಳನ್ನು ಅವಹೇಳನಕಾರಿಯಾಗಿ ಚಿತ್ರಿಸುವ ಮೂಲಕ ಇದರಲ್ಲಿ ರಾಷ್ಟ್ರದ್ರೋಹ ಎಸಗಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇನ್ನು ವಿರುಷ್ಕಾ ನಡುವೆ ವಿಚ್ಛೇದನದ ಪ್ರಸ್ತಾಪ ಇಟ್ಟಿರೋ ವ್ಯಕ್ತಿಯ ಇತಿಹಾಸ ಕರಾಳವಾಗಿದೆ. ಬಿಜೆಪಿಯ ಶಾಸಕ ನಂದಕಿಶೋರ್ ಗುರ್ಜರ್ ಕ್ರಿಮಿನಲ್ ಕೇಸುಗಳ ರಾಶಿಗಳನ್ನೇ ಹೊದ್ದು ಮಲಗಿದ್ದಾರೆ. ಐಪಿಸಿ ಸೆಕ್ಷನ್ 147, 148, 149 ಕೇಸುಗಳು ದಾಖಲಾಗಿವೆ.

ಇಷ್ಟು ದಿನಗಳ ಕಾಲ ಖಾಯಂ ಆಗಿ ಮಾರಕಾಸ್ತ್ರಗಳೊಡನೆ ಗಲಭೆ ಮಡೆಸುವುದು ಮೊದಲಾದ ಕೇಸುಗಳು ಇವರ ಮೇಲೆ ದಾಖಲಾಗಿವೆ. ಈ ಹಿಂದೆ ಇವರು ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಸಾರ್ವಜನಿಕವಾಗಿ ಹಲ್ಲೆಗೈದು ಕುಖ್ಯಾತರಾಗಿದ್ದರು. ಅನಂತರ ತನ್ನ ಕುಕೃತ್ಯದ ಮೇಲೆ ಕೇಸ್ ದಾಖಲಿಸಿದ್ದ ಪೊಲೀಸರ ವಿರುದ್ಧ ತಮ್ಮದೇ ಪಕ್ಷದ ವಿರುದ್ಧ ವಿಧಾನಸಭೆಯಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದರು.

Leave a Reply

Your email address will not be published. Required fields are marked *

You May Also Like

ಎಚ್.ಎಸ್.ವೆಂಕಟಾಪೂರದ ನೀರಿನ ಬವಣೆ ನೀಗುವುದು ಯಾವಾಗ..?

ಅದು ಆ ತಾಲೂಕಿನ ಕಟ್ಟಕಡೆಯ ಗ್ರಾಮ. ಆ ತಾಲೂಕಿನಲ್ಲಿ ಆ ಗ್ರಾಮ ಇದ್ರೂ ವಿಧಾನ ಸಭಾ ಕ್ಷೇತ್ರ ಮಾತ್ರ ಬೇರೆಯದೆ. ಎಲ್ಲಿಯ ತಾಲೂಕು, ಎಲ್ಲಿಯ ವಿಧಾನಸಭಾ ಕ್ಷೇತ್ರ, ಎಲ್ಲಿಯ ಆ ಗ್ರಾಮ ಎನ್ನುವಂತಾಗಿದೆ.

ಅಮೆರಿಕದಲ್ಲಿ ಕೆಲಸ ಹುಡುಕುವುದು ಇನ್ನು ಕನಸು ಮಾತ್ರನಾ?

ವಾಷಿಂಗ್ಟನ್‌: ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಚ್‌-1ಬಿ, ಎಲ್‌-1 ವೀಸಾ ಮತ್ತು ಇತರೆ…

ಕೊರೋನಾ ಚಿಕಿತ್ಸೆಗೆ ಆಶಾದಾಯಕ ಆಯುರ್ವೇದ ಮಾತ್ರೆ?

ಬೆಂಗಳೂರು: ಕೋವಿಡ್-19 ಸೋಂಕಿನಿಂದ ಗುಣಪಡಿಸಲು ಬೆಂಗಳೂರಿನ ಆಯುರ್ವೇದ ವೈದ್ಯರೊಬ್ಬರು ಸಣ್ಣದೊಂದು ಹೆಜ್ಜೆ ಇಟ್ಟಿದ್ದಾರೆ. ಭೌಮ್ಯ ಮತ್ತು…

ಶಿಕ್ಷಕರ ಅಗತ್ಯ ಸೇವೆ ಈಗ ಆನಲೈನ್ ವ್ಯಾಪ್ತಿಯಲ್ಲಿ: ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಸೂಚಿ ಲೇಪಿಸಿದ ಶಿಕ್ಷಣ ಸಚಿವರು,ಅಧಿಕಾರಿಗಳು

ಉತ್ತರಪ್ರಭ ಸುದ್ದಿಆಲಮಟ್ಟಿ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಶಿಕ್ಷಕರ ಅಗತ್ಯ 17 ಸೇವೆಗಳನ್ನು ಆನ್…