ಆನ್ ಲೈನ್ ಜೂಜಿನಿಂದ ಯುವಕರ ಆತ್ಮಹತ್ಯೆ – ಗಂಗೂಲಿ, ಕೊಹ್ಲಿಗೆ ನೊಟೀಸ್!

ಚೆನ್ನೈ : ಆನ್ ಲೈನ್ ಜೂಜಾಟದಿಂದಾಗಿ ಸದ್ಯ ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಗ್ಯಾಂಬ್ಲಿಂಗ್ ಅನ್ನು ಉತ್ತೇಜಿಸುತ್ತಿರುವ ಜಾಹಿರಾತುಗಳಲ್ಲಿ ನಟಿಸಿರುವ ಸೆಲೆಬ್ರಿಟಿಗಳಿಗೆ ನೊಟೀಸ್ ನೀಡಲಾಗಿದೆ.  

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಭಾರತೀಯ ಕ್ರಿಕೆಟ್  ತಂಡದ ನಾಯಕ ವಿರಾಟ್ ಕೊಹ್ಲಿ, ನಟ ಪ್ರಕಾಶ್ ರಾಜ್, ರಾಣಾ ಮತ್ತು ತಮನ್ನಾ ಭಾಟಿಯಾಗೆ ಮದ್ರಾಸ್ ಹೈಕೋರ್ಟ್ ನೊಟೀಸ್ ನೀಡಿದೆ.

ಅಲ್ಲದೇ, ನ. 19ರೊಳಗೆ ಉತ್ತರಿಸುವಂತೆ ಸೂಚಿಸಿದೆ. ತಮಿಳುನಾಡಿನಲ್ಲಿ ಜೂಜಾಟದಿಂದಾಗಿ ಸಾಲ ಹೆಚ್ಚಾಗಿ 9 ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚೆನ್ನೈ ಮೂಲದ ವ್ಯಕ್ತಿ, ಆನ್‌ ಲೈನ್‌ ಜೂಜಾಟದಿಂದ ಯುವಕರು ದಾರಿ ತಪ್ಪುತ್ತಿದ್ದಾರೆ. ಈ ಕಾರಣದಿಂದ ಇಂತಹ ಆಪ್‌ಗಳನ್ನು ರದ್ದು ಮಾಡಬೇಕೆಂದು ಅರ್ಜಿ ಸಲ್ಲಿಸಿದ್ದರು.

ಯುವಕರನ್ನು ಮನಸ್ಸನ್ನು ಆನ್‌ ಲೈನ್‌ ಜೂಜಾಟಕ್ಕೆ ಸೆಳೆಯಲು ಕ್ರಿಕೆಟ್ ಖ್ಯಾತನಾಮ ಹಾಗೂ ನಟ, ನಟಿಯರು ಬಳಕೆಯಾಗುತ್ತಿದ್ದಾರೆ ಎಂದು ಹೇಳಿದ್ದರು. 

Exit mobile version