ಕಲಬುರಗಿ: ಸರಕಾರ ಸಿದ್ರಾಮಯ್ಯ ಬೀಳಿಸಿದ್ದು ಅಂತ ನನ್ನನ್ನು ಆರೋಪಿಸುತ್ತಾರೆ. ಆದರೆ ನಾನು ಯಾವತ್ತು ಅಂತಹ ಕೆಲಸ ಮಾಡಿಲ್ಲ. ಕುಣಿಯಲು ಬಾರದವರು ನೆಲ ಡೊಂಕು ಎನ್ನುವಂತಿದೆ ನನ್ನನ್ನು ಆರೋಪಿಸುವವರ ಮಾತು. ನಾನು ಯಾವತ್ತೂ ಹಿರೋ ವಿಲನ್ ಅಲ್ಲವೇ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಹಿಂದಿನ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸರ್ಕಾರ ಬೀಳಿಸುವಲ್ಲಿ ಸಿದ್ರಾಮಯ್ಯ ಪಾತ್ರದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನನ್ನನ್ನು ಸುಮ್ಮನೆ ಕೆಣಕಬೇಡಿ ಎಂಬ ಎಚ್ಡಿಕೆ ಹೇಳಿಕೆಗೆ ನಸುನಕ್ಕ ಸಿದ್ರಾಮಯ್ಯ ಸುಮ್ಮಸುಮ್ಮನೆ ನಾನು ಯಾರನ್ನೂ ಕೆಣಕುವುದಿಲ್ಲ ಎಂದರು.

ನನ್ನ ಮೇಲೆ ಟೀಕೆ ಮಾಡಿದ್ದಕ್ಕೆ ನಾನು ಉತ್ತರ ಕೊಡುತ್ತೇನೆ. ಆ ಉತ್ತರದಿಂದ ಅವರಿಗೆ ಮುಜುಗರವಾಗುವದಾದರೆ ನಾನೇನು ಮಾಡಲಿ ಎಂದರು.

ಶಾಸಕರ ಕಷ್ಟ-ಸುಖ ಆಲಿಸಿ ಅವರ ವಿಶ್ವಾಸ ಗಳಿಸಬೇಕಿರುವುದು ಸಿಎಂ ಕೆಲಸ ಅಲ್ಲವೇ? ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಕುಳಿತು ಆಡಳಿತ ನಡೆಸಿದರೆ ಇದು ಸಾಧ್ಯವೇ? ಇದನ್ನೇ ನಾನು ಹೇಳಿದ್ದಕ್ಕೆ ವಿಲನ್ ಅಂತಾರೆ ನಾನು ಯಾವತ್ತಿಗೂ ವಿಲನ್ ಅಲ್ಲವೇ ಅಲ್ಲ. ನನ್ನದೇನಿದ್ದರೂ ಹೀರೋ ಪಾತ್ರ..  ನನ್ನ ಬಗ್ಗೆ ಜನ ಏನಂತಾರೆ ನೀವೇ ಕೇಳಿ ಎಂದು ಹೇಳಿದರು.

Leave a Reply

Your email address will not be published. Required fields are marked *

You May Also Like

ಮುಳಗುಂದ ಅರ್ಬನ್ ಬ್ಯಾಂಕ ಚುನಾವಣೆ 7 ನಾಮಪತ್ರ ಸಲ್ಲಿಕೆ

ಮುಳಗುಂದ : ಇಲ್ಲಿನ ದಿ.ಮುಳಗುಂದ ಅರ್ಬನ್ ಸೌಹಾರ್ದ ಕೋ-ಆಪ್ ಬ್ಯಾಂಕನ ನಿರ್ದೇಶಕ ಮಂಡಳಿಯ 2 ಸ್ಥಾನಗಳಿಗೆ…

ಗುಲಾಬ ನಬಿ ಆಜಾದರ ನಿರ್ಣಯ ಕೋಮುವಾದಿ ಶಕ್ತಿಗೆ ಬಲ ತಂದಂತಾಗಿದೆ: ಎಚ್ ಕೆ ಪಾಟೀಲ

ಉತ್ತರಪ್ರಭಗದಗ: ಕಾಂಗ್ರೆಸ್ ಪಕ್ಷವು ಭಾರತ್ ಜೋಡೋ ಎಂಬ ರ್ಯಾಲಿಯ ಮೂಲಕ ಕೋಮುವಾದಿ ಶಕ್ತಿಗಳಿಗೆ ಶಡ್ಡು ಹೋಡೆದು…

ಸಂಪುಟ ವಿಸ್ತರಣೆಯೋ? ಪುನಾರಚನೆಯೋ? ಎರ್ಡ್ಮೂರು ದಿನದಲ್ಲಿ ತೀರ್ಮಾನ ಅಂದ್ರು ಸಿಎಂ

ಬಹುನಿರೀಕ್ಷಿತ ಮುಖ್ಯಮಂತ್ರಿಗಳ ದೆಹಲಿ ಪ್ರವಾಸದ ಫಲಿತಾಂಶ ಹೊರಬೀಳಲು ಇನ್ನೆರೆಡು ದಿನ ಕಾಯಬೇಕು ಎಂದು ಹೇಳಲಾಗುತ್ತಿದೆ.

ರಾಜ್ಯ ವಿಧಾನಪರಿಷತ್ ಚುನಾವಣೆಗೆ ಮುಹೂರ್ತ ನಿಗದಿ

ದೆಹಲಿ/ಬೆಂಗಳೂರು: ಇದೇ ಜೂನ್ 30ರಂದು ಅವಧಿ ಮುಕ್ತಾಯವಾಗಲಿರುವ 7 ವಿಧಾನಪರಿಷತ್ ಸ್ಥಾನಗಳಿಗೆ ಜೂನ್ 29ರಂದು ಚುನಾವಣೆ ನಡೆಯಲಿದೆ. ಈ ವಿಷಯವನ್ನು ಚುನಾವಣಾ ಆಯೋಗ ಘೋಷಿಸಿದೆ.