ಕಲಬುರಗಿ: ಸರಕಾರ ಸಿದ್ರಾಮಯ್ಯ ಬೀಳಿಸಿದ್ದು ಅಂತ ನನ್ನನ್ನು ಆರೋಪಿಸುತ್ತಾರೆ. ಆದರೆ ನಾನು ಯಾವತ್ತು ಅಂತಹ ಕೆಲಸ ಮಾಡಿಲ್ಲ. ಕುಣಿಯಲು ಬಾರದವರು ನೆಲ ಡೊಂಕು ಎನ್ನುವಂತಿದೆ ನನ್ನನ್ನು ಆರೋಪಿಸುವವರ ಮಾತು. ನಾನು ಯಾವತ್ತೂ ಹಿರೋ ವಿಲನ್ ಅಲ್ಲವೇ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಹಿಂದಿನ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸರ್ಕಾರ ಬೀಳಿಸುವಲ್ಲಿ ಸಿದ್ರಾಮಯ್ಯ ಪಾತ್ರದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನನ್ನನ್ನು ಸುಮ್ಮನೆ ಕೆಣಕಬೇಡಿ ಎಂಬ ಎಚ್ಡಿಕೆ ಹೇಳಿಕೆಗೆ ನಸುನಕ್ಕ ಸಿದ್ರಾಮಯ್ಯ ಸುಮ್ಮಸುಮ್ಮನೆ ನಾನು ಯಾರನ್ನೂ ಕೆಣಕುವುದಿಲ್ಲ ಎಂದರು.

ನನ್ನ ಮೇಲೆ ಟೀಕೆ ಮಾಡಿದ್ದಕ್ಕೆ ನಾನು ಉತ್ತರ ಕೊಡುತ್ತೇನೆ. ಆ ಉತ್ತರದಿಂದ ಅವರಿಗೆ ಮುಜುಗರವಾಗುವದಾದರೆ ನಾನೇನು ಮಾಡಲಿ ಎಂದರು.

ಶಾಸಕರ ಕಷ್ಟ-ಸುಖ ಆಲಿಸಿ ಅವರ ವಿಶ್ವಾಸ ಗಳಿಸಬೇಕಿರುವುದು ಸಿಎಂ ಕೆಲಸ ಅಲ್ಲವೇ? ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಕುಳಿತು ಆಡಳಿತ ನಡೆಸಿದರೆ ಇದು ಸಾಧ್ಯವೇ? ಇದನ್ನೇ ನಾನು ಹೇಳಿದ್ದಕ್ಕೆ ವಿಲನ್ ಅಂತಾರೆ ನಾನು ಯಾವತ್ತಿಗೂ ವಿಲನ್ ಅಲ್ಲವೇ ಅಲ್ಲ. ನನ್ನದೇನಿದ್ದರೂ ಹೀರೋ ಪಾತ್ರ..  ನನ್ನ ಬಗ್ಗೆ ಜನ ಏನಂತಾರೆ ನೀವೇ ಕೇಳಿ ಎಂದು ಹೇಳಿದರು.

Leave a Reply

Your email address will not be published. Required fields are marked *

You May Also Like

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ಜ.28 ರಂದು ಮಸ್ಕಿಯಲ್ಲಿ ಪ್ರತಿಭಟನೆ.

ವರದಿ: ವಿಠಲ ಕೆಳೂತ್ ಮಸ್ಕಿ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಭಾವಚಿತ್ರಕ್ಕೆ ಅಪಮಾನ…

ನಿಗಮ-ಮಂಡಳಿ: ಉತ್ತರ ಕರ್ನಾಟಕಕ್ಕೆ ಸಿಂಹಪಾಲು

ಬೆಂಗಳೂರು, ಮೈಸೂರು, ರಾಮನಗರಕ್ಕೆ ಸೊನ್ನೆ ರಾಜ್ಯ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಈ ಸಂದರ್ಭದಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಸಂತೈಸುವ ಭಾಗವಾಗಿ 24 ಶಾಸಕರಿಗೆ ನಿಗಮ-ಮಂಡಳಿ ಗಿಫ್ಟ್ ನೀಡಲಾಗಿದೆ. ಯಾವುದೇ ಮುನ್ಸೂಚನೆ ಇಲ್ಲದೇ ಮುಖ್ಯಮಂತ್ರಿ ಯಡಿಯೂರಪ್ಪ 24 ನಿಗಮ-ಮಂಡಳಿಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಚಕಿತಗೊಳಿಸಿದ್ದಾರೆ.

ಎಸ್.ವಿ.ಸಂಕನೂರ್ ಅವರಿಗೆ ಎಮ್.ಎಲ್ಸಿ ಟಿಕೇಟ್ ಪಕ್ಕಾ

ರಾಜ್ಯದಲ್ಲಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ. ಪಶ್ಚಿಮ ಪದವಿಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮತ್ತೆ ಎರಡನೇ ಅವಧಿಗೆ ಎಸ್.ವಿ.ಸಂಕನೂರ್ ಅವರಿಗೆ ಬಿಜೆಪಿ ಕಣಕ್ಕಿಳಿಸುತ್ತಿದೆ.

ರಾಜ್ಯ ವಿಧಾನಪರಿಷತ್ ಚುನಾವಣೆಗೆ ಮುಹೂರ್ತ ನಿಗದಿ

ದೆಹಲಿ/ಬೆಂಗಳೂರು: ಇದೇ ಜೂನ್ 30ರಂದು ಅವಧಿ ಮುಕ್ತಾಯವಾಗಲಿರುವ 7 ವಿಧಾನಪರಿಷತ್ ಸ್ಥಾನಗಳಿಗೆ ಜೂನ್ 29ರಂದು ಚುನಾವಣೆ ನಡೆಯಲಿದೆ. ಈ ವಿಷಯವನ್ನು ಚುನಾವಣಾ ಆಯೋಗ ಘೋಷಿಸಿದೆ.