ಉತ್ತರಪ್ರಭ
ಗದಗ: ಕಾಂಗ್ರೆಸ್ ಪಕ್ಷವು ಭಾರತ್ ಜೋಡೋ ಎಂಬ ರ್ಯಾಲಿಯ ಮೂಲಕ ಕೋಮುವಾದಿ ಶಕ್ತಿಗಳಿಗೆ ಶಡ್ಡು ಹೋಡೆದು ಪಕ್ಷದ ನಾಯಕ ರಾಹುಲ್ ಗಾಂಧಿ ಕಾರ್ಯಕ್ರಮ ನಡೆಸುತ್ತಿರುವಾಗ ಪಕ್ಷದ ಹಿರಿಯ ನಾಯಕ ಗುಲಾಬ್ ನಬಿ ಆಜಾದ್ ಕಾಂಗ್ರೆಸ್ ತೊರೆದಿದ್ದು ಕೋಮುವಾದಿ ಶಕ್ತಿಗಳಿಗೆ ಬಲ ತಂದಂತಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಚ್ ಕೆ ಪಾಟೀಲ ಹೇಳಿದರು.
ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು ನಮ್ಮ ಪಕ್ಷದಿಂದ ಭಾರತ್ ಜೋಡೋ ಕಾರ್ಯಕ್ರಮದ ಕುರಿತು ಸಭೆಗಳಲ್ಲಿ ಅವರು ಕೂಡಾ ಇದ್ದರು, ಭಾರತ ಜೋಡೋ ಕಾರ್ಯಕ್ರಮಕ್ಕೆ ಚಾಲನೆ ಕೂಡ ನೀಡುವಾಗ ಆಜಾದ್ ಅವರು ಇದ್ದರು. ಇದ್ದಿದ್ದಂಗೆ ಈಗ ಪತ್ರದಲ್ಲಿ ಮೊದಲು ಕಾಂಗ್ರೆಸ್ ಜೋಡೋ ಕಾರ್ಯಕ್ರಮ ಆಗ್ಲಿ ಅಂತಾ ಹೇಳಿ ಪಕ್ಷಕ್ಕೆ ರಾಜಿನಾಮೆ ನೀಡಿ ಜನ ದ್ರೋಹಿ ನಿರ್ಣಯ ತೆಗೆದುಕೊಂಡಿದ್ದಾರೆ ಎಂದರು.
ಗುಲಾಬ್ ನಬಿ ಆಜಾದರು ಈ ಮಾತನ್ನ ಮುಂಚಿತವಾಗಿಯೇ “ಕಾಂಗ್ರೆಸ್ ಜೋಡೋ” ಅಂತ ಹೇಳಬಹುದಿತ್ತು, ಕಾಂಗ್ರೆಸ್ ಹೋರಾಟದಲ್ಲಿದ್ದಾಗ ಬುದ್ಧನಿಗೆ ಜ್ಞಾನೋದಯ ಆದಂತೆ ಆಜಾದ್ ಅವರಿಗೆ ಜ್ಞಾನೋದಯವಾಗಿದೆ, ಪಕ್ಷದಲ್ಲಿ ಚಟುವಟಿಕೆ ಇಲ್ಲದ ಸಮಯದಲ್ಲಿ ಅಜಾದರು ಮಲಗಿಕೊಂಡಿದರು. ಈಗ ಪಕ್ಷ ಹೋರಾಟ ಮಾಡ್ತಿರುವಾಗ ಆಜಾದ್ ಅವರು ಜನ ದ್ರೋಹಿ ನಿರ್ಣಯ ತೆಗೆದುಕೊಂಡಿದ್ದಾರೆ. ದೆಹಲಿಯಿಂದ ಕನ್ಯಾಕುಮಾರಿ ವರೆಗೂ ದೊಡ್ಡ ಪ್ರಮಾಣದ ರ್ಯಾಲಿ ಮಾಡುತ್ತಿದ್ದೇವೆ. ಬೆಲೆ ಏರಿಕೆ ಸೇರಿದಂತೆ ರಾಷ್ಟ್ರದಲ್ಲಿ ಬೇರೆ ಬೇರೆ ಕಡೆ ಕೋಮುವಾದಿ ಶಕ್ತಿಗಳು ಪಕ್ಷ ಒಡೆಯುತ್ತಿವೆ. ಪ್ರಜಾಪ್ರಭುತ್ವವನ್ನ ಅಶಕ್ತಗೊಳಿಸುವುದು. ಜನರ ಮನಸ್ಸನ್ನ ಕೆಡಿಸುವುದು ಮಾಡ್ತಿವೆ. ಇದೇ ಸಂದರ್ಭದಲ್ಲಿ ಗುಲಾಬ ನಬಿ ಆಜಾದರ ರಾಜೀನಾಮೆ, ಪಕ್ಷವನ್ನ ಗಟ್ಟಿಗೊಳಿಸೋದಕ್ಕೆ ಕಾರಣವಾಗುತ್ತೆ ಎಂದರು.

ನಮ್ಮ ಪಕ್ಷದವರೇ ಆಗಿ ರಾಜೀನಾಮೆ ನೀಡಿವುದರ ಜೊತೆಗೆ ಪಕ್ಷದ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಆಪಾದನೆ ಮಾಡಿದ್ದಾರೆ. ಅವರ ರಾಜೀನಾಮೆ ಬಳಿಕವೂ ಕಾಂಗ್ರೆಸ್ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತಲೆ ಇರುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ವಾಸಣ್ಣ ಕುರಡಗಿ, ಮಾಜಿ ನಗರಸಭೆ ಅಧ್ಯಕ್ಷ ಬಿ ಬಿ ಅಸೂಟಿ, ಮಾಜಿ ನಗರಸಭೆ ಸದಸ್ಯ ಎಂ ಸಿ ಶೆಖ್, ವಿರೋಧ ಪಕ್ಷದ ಉಪನಾಯಕ ಬರ್ಕತ್ ಅಲಿ ಮುಲ್ಲಾ, ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೋಕ ಮಂದಾಲಿ ಮತ್ತಿತರರು ಇದ್ದರು.