ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಚೀನಾ ವಿಚಾರದಲ್ಲಿ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದ್ದಾರೆ. ಹದಿನೈದು ನಿಮಿಷದಲ್ಲಿ ಚೀನಾದ ಸೈನಿಕರನ್ನು ಹೊರಹಾಕುವ ಹೇಳಿಕೆ ನೀಡುತ್ತಾರೆ ಇದು ಹಾಸ್ಯಾಸ್ಪದ ಹೇಳಿಕೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದರು.

ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರ ಪಕ್ಷದ ನಾಯಕರೇ ಅವರ ಹೇಳಿಕೆ ಕೇಳಿ ನಗುತ್ತಾರೆ, ಅಕ್ಸಯ್ ಚೀನಾ ಮೊದಲು ನಮ್ಮ ಬಾರ್ಡರ್ ಆಗಿರಲಿಲ್ಲ, ಕಾಂಗ್ರೆಸ್ ಆಡಳಿತದಲ್ಲಿ ರಾಜೀವ್ ಗಾಂಧಿ ಚೀನಾ ಜೊತೆ ಹಲವು ಒಪ್ಪಂದ ಮಾಡಿಕೊಂಡಿದ್ದರು.

ಕಾಂಗ್ರೆಸ್‌ಗೆ ಸಂವಿಧಾನದ ಮೂಲ ಆಶಯದ ಮೇಲೆ ನಂಬಿಕೆಯಿಲ್ಲ. ಕಾಂಗ್ರೆಸ್ ಸತತವಾಗಿ ಪ್ರಜಾಪ್ರಭುತ್ವದ ಅವಹೇಳನ ಮಾಡುವ ಪ್ರವೃತ್ತಿ ಮುಂದುವರೆಸಿಕೊAಡು ಬಂದಿದೆ. ಸಂಸತ್ ಅಧಿವೇಶನದಲ್ಲಿ ಡೆಪ್ಯೂಟಿ ಸ್ಪೀಕರ್ ಮೇಲೆ ಹಲ್ಲೆಮಾಡಿ ತಡೆಯುವ ಯತ್ನ ನಡೆಯಿತು. ಕಾಂಗ್ರೆಸ್ ದೀರ್ಘ ಕಾಲ ಆಡಳಿತ ನಡೆಸಿದವರು ಯಾವುದೇ ಬದಲಾವಣೆ ತರಲು ಆಗಲಿಲ್ಲ. ಕಾಂಗ್ರೆಸ್‌ಗೆ ಅಧಿಕಾರ ಇಲ್ಲದೆ ಬದುಕುವುದು ಗೊತ್ತಿಲ್ಲ ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *

You May Also Like

ಮಾನವೀಯತೆ ಸಂದೇಶ ವೇದಿಕೆ ವತಿಯಿಂದ ತಹಶೀಲ್ದಾರ್ ಹಾಗು ಪಿಎಸ್ಐ  ಧನ್ಯತಯ ಸಮರ್ಪಣೆ

ಉತ್ತರಪ್ರಭ ಸಿಂದಗಿ: ಅಖಿಲ ಭಾರತ ಸಂದೇಶ ವೇದಿಕೆ ಸಿಂದಗಿ ತಾಲೂಕಿನ ಘಟಕದ ವತಿಯಿಂದ ಬೇಸಿಗೆ ಕಾಲದಲ್ಲಿ…

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಗೈದ ಬಾಲೆ ಸೃುಷ್ಟಿ ಜಾಧವ

ಉತ್ತರಪ್ರಭವಿಜಯಪುರ: ಅವಳಿಗೆ ಅಜ್ಜಿಯಂದರೆ ಪ್ರಾಣ. ಕಾಕಾ ಎಂದರೆ ಎಲ್ಲಿಲ್ಲದ ಪ್ರೀತಿ. ಈ ಅಕ್ಕರೆಯ ಸಿಹಿ ಸಿಂಚನದ…