ದೆಹಲಿ/ಬೆಂಗಳೂರು: ಇದೇ ಜೂನ್ 30ರಂದು ಅವಧಿ ಮುಕ್ತಾಯವಾಗಲಿರುವ 7 ವಿಧಾನಪರಿಷತ್ ಸ್ಥಾನಗಳಿಗೆ ಜೂನ್ 29ರಂದು ಚುನಾವಣೆ ನಡೆಯಲಿದೆ. ಈ ವಿಷಯವನ್ನು ಚುನಾವಣಾ ಆಯೋಗ ಘೋಷಿಸಿದೆ.

ಜೂನ್ 30, 2020ರಂದು ಕರ್ನಾಟಕದ ನಜೀರ್ ಅಹ್ಮದ್, ಜಯಮ್ಮ, ಎನ್ ಎಸ್ ಬೋಸರಾಜು, ಹೆಚ್.ಎಂ.ರೇವಣ್ಣ, ಟಿ.ಎ.ಶರವಣ ಮತ್ತು ಡಿ.ಯು.ಮಲ್ಲಿಕಾರ್ಜುನ್ ಅವರ ವಿಧಾನ ಪರಿಷತ್ ಅವಧಿ ಅಂತ್ಯವಾಗಲಿದೆ.


ದಿನಾಂಕ 11/06/2020ರಂದು ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳಲಿದೆ. 18ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ, 19 ನಾಮಪತ್ರಗಳ ಪರಿಶೀಲನೆ, 22ರಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನಾಂಕವನ್ನು ನಿಗದಿಮಾಡಲಾಗಿದೆ. 29ರಂದು ಮತದಾನ ನಡೆಯಲಿದೆ. ಅಂದೇ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆ ಮಾಡುವುದಾಗಿ ಆಯೋಗ ಅಧಿಸೂಚನೆ ಹೊರಡಿಸಿದೆ.

Leave a Reply

Your email address will not be published.

You May Also Like

ರಾಯಣ್ಣ ಮೂರ್ತಿಗೆ ಅವಮಾನ: ರಾಯಣ್ಣ ಯುವಶಕ್ತಿ ವೇದಿಕೆ ಖಂಡನೆ

ಬೆಳಗಾವಿ ಜಿಲ್ಲೆ ಪೀರಣವಾಡಿ ಗ್ರಾಮದಲ್ಲಿ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣನ ಮೂರ್ತಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ಸಂಗೋಳ್ಳಿ ರಾಯಣ್ಣ ಯುವಶಕ್ತಿ ವೇದಿಕೆ ಲಕ್ಷ್ಮೇಶ್ವರ ತಾಲೂಕ ಘಟಕದ ವತಿಯಿಂದ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಗದಗ ಜಿಲ್ಲೆಯಲ್ಲಿಂದು 6 ಕಂಟೇನ್ ಮೆಂಟ್ ಪ್ರದೇಶ ನಿರ್ಭಂಧ ತೆರವು

ಗದಗ: ಜಿಲ್ಲೆಯ ಗದಗ ತಾಲ್ಲೂಕಿನ ಅಸುಂಡಿ ಗ್ರಾಮದ ವಾರ್ಡ ನಂ. 2ರ ಸಿದ್ದಲಿಂಗನಗೌಡಾ ಪಾಟೀಲ ಬಡಾವಣೆ…

ಶಿವಾಜಿ ಮಹಾರಾಜರ ಜಯಂತಿ ಆಚರಿಸಲು ಷರತ್ತು ಬದ್ದ ಅನುಮತಿ

ಉತ್ತರಪ್ರಭ ಗದಗ:ದಿನಾಂಕ: 19.02.2022 ರಂದು ಶಿವಾಜಿ ಮಹಾರಾಜರ ಜಯಂತಿಯನ್ನು ಮುನ್ಸಿಪಲ್ ಹೈ-ಸ್ಕೂಲ್ ಮೈದಾನದಲ್ಲಿ ಆಚರಿಸಲು ಷರತ್ತು…

ಸಿಡಿ ಪ್ರಕರಣ ಬಿಜೆಪಿ ಪಕ್ಷಕ್ಕೆ ಮೈನಸ್ ಆಗಲ್ಲ : ಡಿಸಿಎಂ ಕಾರಜೋಳ

ಸುರೇಶ್ ಅಂಗಡಿ ಅಕಾಲಿಕ ನಿಧನದಿಂದ ಬೆಳಗಾವಿ ಲೋಕಸಭೆಗೆ ಉಪ ಚುನಾವಣೆ ನಡೆಯುತ್ತಿದೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಗೆಲ್ಲಲಿದ್ದಾರೆ ಎಂದರು.