ಮುಂಡರಗಿ: ಸಾಧೆನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸಾಧಿಸಬೇಕು ಎನ್ನುವ ಛಲವೊಂದಿದ್ದರೆ, ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಅಗರಬತ್ತಿ ಮಾರುವ ಕುಟುಂಬವೊಂದವರ ಕುವರನ ಕಥೆ ತಾಜಾ ಉದಾಹರಣೆ.

ಸಾಧನೆ ಮಾಡಲು ಸತತವಾದ ಪ್ರಯತ್ನ ಬೇಕು. ಜೊತೆಗೆ ತಾಳ್ಮೆ ಬೇಕು. ಈ ನಿಟ್ಟಿನಲ್ಲಿ ಮುಂಡರಗಿ ಪಟ್ಟಣದ ಸಾಗರ್ ಎನ್ನುವ ಯುವಕನ ಸಾಧನೆಯ ಹಾದಿಯ ಕಥೆ ಮಾತ್ರ ಪ್ರತಿಯೊಬ್ಬ ಯುವಕರಿಗೆ ಸ್ಪೂರ್ತಿದಾಯಕ.

ಇತ್ತಿಚೆಗೆ ಪ್ರಕಟವಾದ ಪಿಎಸ್ಐ ಪರೀಕ್ಷೆ ಫಲಿತಾಂಶದಲ್ಲಿ ಸಾಗರ್ ರಾಜ್ಯಕ್ಕೆ 173ನೇ ರ‌್ಯಾಂಕ್ ಪಡೆಯುವ ಮೂಲಕ ಬಡತನದಲ್ಲಿ ಅರಳಿದ ಗುಲಾಬಿಯಾಗಿದ್ದಾನೆ.

ಕನ್ನಡ ಮಾದ್ಯಮದಲ್ಲಿ ಓದು

ಸಾಗರ್, ಕನ್ನಡ ಮಾಧ್ಯಮದಲ್ಲಿಯೇ ಪ್ರಾಥಮಿಕ, ಪ್ರೌಢ, ಹಾಗೂ ಪದವಿ ಶಿಕ್ಷಣವನ್ನು ಪಡೆದಿದ್ದಾನೆ. ಯಾವುದೇ ಕೋಚಿಂಗ್ ಇಲ್ಲದೆ ಸತತ ಪರಿಶ್ರಮದಿಂದ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿರುವುದು ವಿಶೇಷವೇ ಸರಿ.

ಆನ್ ಲೈನ್ ಶಿಕ್ಷಣವೇ ಆಧಾರ

ಆನ್ ಲೈನ್ ಮೂಲಕ ಪಠ್ಯ ಪುಸ್ತಕ ಹಾಗೂ ಹಳೆ ಪ್ರಶ್ನೆಪತ್ರಿಕೆಯನ್ನು ಮೊಬೈಲ್ ಸಹಾಯದಿಂದ ತಗೆದುಕೊಂಡು ನಿರಂತವಾಗಿ ಅಭ್ಯಾಸಮಾಡಿ ಪಿಎಸ್ಐ ಹುದ್ದೆಯ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಇವರು ಮೊದಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕೆಲ ತಿಂಗಳ ಕಾರ್ಯ ನಿರ್ವಹಿಸಿದ್ದಾರೆ.

ಅಗರಬತ್ತಿ ಮಾರಾಟವೇ ಕುಟುಂಬಕ್ಕೆ ಆಧಾರ

ಸಾಗರ್ ಕುಟುಂಬಕ್ಕೆ ಅಗರಬತ್ತಿ ವ್ಯಾಪಾರವೇ ಮೂಲ ವೃತ್ತಿ. ಕುಟುಂಬದ ಜೊತೆಗೆ ತಾನೂ ಕೂಡ ಅಗರಬತ್ತಿ ತಯಾರಿಕೆಯ ಕಾಯಕದಲ್ಲಿ ಸಾಗರ್ ಕೈ ಜೋಡಿಸುತ್ತಿದ್ದ. ಬಡತನದ ಬೇಗೆಯಲ್ಲಿಯೇ ಛಲ ಬಿಡದೇ ಓದಿದ ಪರಿಣಾಮ ಈಗ ಪಿಎಸ್ಐ ಆಗಿ ಆಯ್ಕೆಯಾಗುವಂತೆ ಮಾಡಿತು. ಈ ಮೂಲಕ ಮುಂಡರಗಿ ಜನರಿಂದ ಸಾಗರ್ ಸೈ ಎನಿಸಿಕೊಂಡಿದ್ದಾರೆ.

ತಂದೆ ವಾಸುಜಿ ತಾಯಿ ಲಕ್ಷ್ಮೀ ಅವರು ಕೂಡ ಮಗನ ಬಗ್ಗೆ ಅಪಾರ ಕನಸು ಕಟ್ಟಿಕೊಂಡಿದ್ದರು. ಆದರೆ ಈಗ ಮಗನ ಸಾಧನೆಯಿಂದ ತಂದೆ-ತಾಯಿ, ಕುಟುಂಬಸ್ಥರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಸಾಗರ ಸಾಧನೆಯ ಹಾದಿ ಹೀಗೆ ಸಾಗಲಿ ಎಂಬುದು ಉತ್ತರಪ್ರಭದ ಹಾರೈಕೆ.

Leave a Reply

Your email address will not be published. Required fields are marked *

You May Also Like

ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ನಿಯಮಕ್ಕೆ ಆಕ್ಷೇಪಣೆ

ಶಿಕ್ಷಕರ ವರ್ಗಾವಣಾ ಕಾಯ್ದೆಯನ್ನು ಸಂಪೂರ್ಣ ಶಿಕ್ಷಕ ಸ್ನೇಹಿ ವರ್ಗಾವಣಾ ಕಾಯ್ದೆಯಾಗಿ ರೂಪಗೊಳ್ಳಬೇಕಾದರೆ ಕೆಲವು ಅಂಶಗಳನ್ನು ಅಳವಡಿಸಿಕೊಂಡು ಅಂತಿಮ ನಿಯಮಗಳನ್ನು ಹಾಗೂ ಮಾರ್ಗಸೂಚಿಗಳನ್ನು ಪ್ರಕಟಿಸಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಈ ಕುರಿತು ಇಂದು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.

ಬೇರೆ ರಾಜ್ಯ, ದೇಶಗಳಿಂದ ಆಗಮಿಸಿದ ಕನ್ನಡಿಗರು!

ಆಪರೇಷನ್ ವಂದೇ ಭಾರತ್ ಮೆಗಾ ಏರ್‌ಲಿಫ್ಟ್ ಮೂಲಕ ಬೇರೆ ಬೇರೆ ರಾಜ್ಯಗಳಿಂದ ಮತ್ತು ವಿದೇಶಗಳಿಂದ ಕನ್ನಡಿಗರು ಮರಳುತ್ತಿದ್ದು, ನಗರಕ್ಕೆ ಇಂದು 326 ಜನ ಕನ್ನಡಿಗರು ಆಗಮಿಸಿದ್ದಾರೆ.

ನಿಮ್ಮೊಡನಿದ್ದೂ ನಿಮ್ಮಂತಾಗದೆ

ಪ್ರಸ್ತುತ ಸಂದರ್ಭದಲ್ಲಿ ನಿಸಾರ್ ಅಹ್ಮದ್ ಅವರು ರಚಿಸಿದ ನಿಮ್ಮೊಡನಿದ್ದೂ ನಿಮ್ಮಂತಾಗದೆ ಎನ್ನುವ ಕವನ ಇಂದಿನ ದಿನಮಾನಗಳಲ್ಲಿ ವಾಸ್ತವಕ್ಕೆ ಹತ್ತಿರವಾಗಿದ್ದು, ನಮ್ಮನ್ನಗಲಿದ ಸಾಹಿತಿ ಕೆ.ಎಸ್.ನಿಸಾರ್ ಅಹ್ಮದ್ ಅವರಿಗೆ ‘ಉತ್ತರ ಪ್ರಭ’ದ ನುಡಿ ನಮನ…

ಪ್ಯಾಕೇಜ್ ಟೆಂಡರ್ ರದ್ದುಗೊಳಿಸುವಂತೆ ಒತ್ತಾಯ

ವರದಿ: ವಿಠಲ ಕೆಳೂತ್ಮಸ್ಕಿ: ಪ್ಯಾಕೇಜ್ ಟೆಂಂಡರ್ ರದ್ದುಗೊಳಿಸಿ ಭ್ರಷ್ಟವಾರ ತಡೆಯುವಂತೆ ಒತ್ತಾಯಿಸಿ ಇಲ್ಲಿನ ಗುತ್ತಿಗೆದಾರ ಸಂಘದ…