ವರದಿ: ವಿಠಲ ಕೆಳೂತ್
ಮಸ್ಕಿ: ಪ್ಯಾಕೇಜ್ ಟೆಂಂಡರ್ ರದ್ದುಗೊಳಿಸಿ ಭ್ರಷ್ಟವಾರ ತಡೆಯುವಂತೆ ಒತ್ತಾಯಿಸಿ ಇಲ್ಲಿನ ಗುತ್ತಿಗೆದಾರ ಸಂಘದ ಮುಖಂಡರು ಪತ್ರ ಚಳುವಳಿ ನಡೆಸಿದರು.

ಪಟ್ಟಣದ ಅಂಚೆ ಕಚೇರಿ ಮುಂಭಾಗದಲ್ಲಿ ಜಮಾವಣೆಹೊಂಡು ಸಿಎಂ ಬಸವರಾಜ ಬೊಮ್ಮಯಿ ಅವರಿಗೆ ಪತ್ರ ಬರೆದು ಅಂಚೆ ಪೆಟ್ಟಿಗೆಯಲ್ಲಿ ಹಾಕಿದರು.
ಬಳಿಕ ಗುತ್ತಿಗೆದಾರ ಸಂಘದ ತಾಲೂಕ ಅಧ್ಯಕ್ಷ ಬಲವಂತರಾಯಗೌಡ ಅವರು ಮಾತನಾಡಿ, ಪ್ಯಾಕೇಜ್ ಟೆಂಡರ್ ಹೆಚ್ಚಾಗಿ ಉಳ್ಳವರ ಪಾಲಾಗುತ್ತಿದೆ. ಸಣ್ಣ ಸಣ್ಣ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ಪ್ಯಾಕೇಜ್ ಟೆಂಡರ್ ರದ್ದುಗೊಳಿಸಿ ಭ್ರಷ್ಟಾಚಾರ ತಡೆಯಬೇಕೆಂದು ಪತ್ರ ಚಳುವಳಿ ಮೂಲಕ ಮನವಿ ಮಡಿದರು.
ಈ ಸಂದರ್ಭದಲ್ಲಿ ಶಿವಕುಮಾರ ಬುದ್ದಿನಿ, ಚಾಂದಪಾಶ ಶೇಡ್ಮೀ, ಬಸವರಾಜ ಉದ್ಬಾಳ,ಸಿದ್ದನಗೌಡ ನಾಗರಬೆಂಚಿ, ವೆಂಕನಗೌಡ, ಚಂದ್ರಶೇಖರ ನಾಯಕ, ಹುಲಗಪ್ಪ,ರಮೇಶ ನಾಯಕ, ಮೌನೇಶ ಸೇರಿದಂತೆ ಇನ್ನಿತರಿದ್ದರು.