ಬೆಂಗಳೂರು: ಆಪರೇಷನ್ ವಂದೇ ಭಾರತ್ ಮೆಗಾ ಏರ್‌ಲಿಫ್ಟ್ ಮೂಲಕ ಬೇರೆ ಬೇರೆ ರಾಜ್ಯಗಳಿಂದ ಮತ್ತು ವಿದೇಶಗಳಿಂದ ಕನ್ನಡಿಗರು ಮರಳುತ್ತಿದ್ದು, ನಗರಕ್ಕೆ ಇಂದು 326 ಜನ ಕನ್ನಡಿಗರು ಆಗಮಿಸಿದ್ದಾರೆ.

ವಿಶೇಷ ವಿಮಾನದ ಮೂಲಕ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳಗಿನ ಜಾವ 4.47ಕ್ಕೆ ಕನ್ನಡಿಗರು ಆಗಮಿಸಿದ್ದಾರೆ. ವಿಮಾನವು ಲಂಡನ್ ನಿಂಜ ದೆಹಲಿಗೆ ಬಂದು ಅಲ್ಲಿಂ ಬೆಂಗಳೂರಿಗೆ ಆಗಮಿಸಿದೆ.

ವೈದ್ಯರ ತಂಡ ವಿಮಾನ ನಿಲ್ದಾಣದಲ್ಲಿಯೇ ಎಲ್ಲರನ್ನು ಸಾಮಾಜಿಕ ಅಂತರದ ಮೂಲಕ ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಿದ್ದಾರೆ. ಸ್ಕ್ರೀನಿಂಗ್ ನಡೆಸಿದ ಬಳಿಕ ಒಂದೊಂದು ಬಸ್ಸಿನಲ್ಲಿ 20 ಜನ ಪ್ರಯಾಣಿಕರು, ಪೊಲೀಸರು, ವೈದ್ಯರನ್ನು ತಂಡಗಳಾಗಿ ವಿಂಗಡಣೆ ಮಾಡಲಾಗುತ್ತಿದೆ. ನಂತರ ಪೊಲೀಸರ ಭದ್ರತೆಯಲ್ಲಿ ನಗರದ ನಿಗದಿತ ಕ್ವಾರಂಟೈನ್ ಹೋಟೆಲ್ಗಿಳಿಗೆ ಕನ್ನಡಿಗರನ್ನು ಕಳಿಸಿಕೊಡಲಾಗುತ್ತದೆ.

ಬೆಂಗಳೂರು ಗ್ರಾಮಾಂತರ ಡಿಸಿ ರವೀಂದ್ರ, ಈಶಾನ್ಯ ವಲಯ ಡಿಸಿಪಿ ಭೀಮಾ ಶಂಕರ್ ಗೂಳೆದ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ.

ಹೊರ ರಾಜ್ಯದಲ್ಲಿರುವ 56 ಸಾವಿರ ಜನ ಕನ್ನಡಿಗರ ಪೈಕಿ, 4 ಸಾವಿರಕ್ಕೂ ಹೆಚ್ಚು ಕನ್ನಡಿಗರು ಶೀಘ್ರದಲ್ಲಿಯೇ ತವರಿಗೆ ಬರಲಿದ್ದಾರೆ. ವಿದ್ಯಾರ್ಥಿಗಳು, ಪ್ರವಾಸಿಗರು, ಉದ್ಯೋಗಕ್ಕೆ ತೆರಳಿದವರು ಈಗಾಗಲೇ ಆಯಾ ಜಿಲ್ಲೆ ಡಿಸಿ, ನೋಡಲ್ ಅಧಿಕಾರಿಗಳ ಬಳಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ವಿದೇಶದಿಂದ ತವರಿಗೆ ಬರುವುದಕ್ಕೆ ಸುಮಾರು 6.100 ಕನ್ನಡಿಗರು ಸಿದ್ಧರಿದ್ದಾರೆ. ಇವರು ಉಳಿದುಕೊಳ್ಳಲು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಹೊಟೇಲ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. 18 ಪಂಚತಾರಾ ಹೋಟೆಲ್, 25 ತ್ರಿ ಸ್ಟಾರ್ ಹೋಟೆಲ್ಗೇಳು ಬುಕ್ ಮಾಡಲಾಗಿದೆ.

Leave a Reply

Your email address will not be published. Required fields are marked *

You May Also Like

ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕನ್ನಡಿಗನ್ನು ರಕ್ಷಿಸಿದ ನಟ!

ಕೊರೊನಾ ಲಾಕ್ ಡೌನ್ ನಿಂದಾಗಿ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕರ್ನಾಟಕದ ನೂರಾರು ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ತಲುಪಿಸಲು ಬಾಲಿವುಡ್ ನಟ ಸೋನು ಸೂದ್ ಮುಖ್ಯ ಪಾತ್ರ ವಹಿಸಿದ್ದರು.

ಗುಜರಾತ್ ಬಿಜೆಪಿಗೆ ಶಾಕ್: ಕೈ ಶಾಸಕರು ರೆಸಾರ್ಟ್ ಗೆ ಶಿಫ್ಟ್..!

ಜೈಪುರ: ಗುಜರಾತ್ ಕಾಂಗ್ರೆಸ್ ನ ಕೆಲವು ಶಾಸಕರನ್ನು ಕಾಂಗ್ರೆಸ್ ರಾಜಸ್ಥಾನದ ಸಿರೋಹಿಯಲ್ಲಿರುವ ರೆಸಾರ್ಟ್ ಗೆ ಕರೆದೊಯ್ಯಲಾಗಿದೆ.…

ರೈತರು ಬೆಳೆಗೆ ಬೆಳೆ ಮಾರಾಟಕ್ಕೆ ಡಿಕೆಶಿ ಮನವಿ

ಬೆಂಗಳೂರು : ಕೊರೊನಾ ವೈರಸ್ ಹರಡುವ ಭೀತಿಯಿಂದಾಗಿ ಸದ್ಯ ಮೇ. 17ರ ವರೆಗೆ ಲಾಕ್ ಡೌನ್…

ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳಿಗೆ ಕೆಟಿಟಿಎಫ್ ನೋಂದಣಿ ಕಡ್ಡಾಯ

ಉತ್ತರಪ್ರಭ ಗದಗ: ಪ್ರವಾಸೋದ್ಯಮ ಇಲಾಖೆಯಿಂದ ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ ಕಾಯ್ದೆ-2015 ಜಾರಿಯಲ್ಲಿದ್ದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ…