ಮೈಸೂರು: ಥೂ ನಿಮ್ಮ ಯೋಗ್ಯತೆಗಿಷ್ಟು ಬೆಂಕಿ ಹಾಕ. ಮೂವತ್ತು ಲಕ್ಷ ಪರಿಹಾರ ಕೊಟ್ಟು ಸಮಾಧಾನ ಮಾಡ್ತೀರೆನ್ರಿ. ನಿಮ್ಮದು ಒಂದು ಸರ್ಕಾರನೇನ್ರಿ? ಯಾರಿಗೆ ಬೇಕು ನಿಮ್ಮ ಹಣ ..? ಎಲ್ಲರೂ ಒಂದು ತಿಂಗಳ ಸಂಬಳ ಕೊಟ್ರೆ ಸಾಕು..! ಹಣಕೊಟ್ಟು ಸಮಾಧಾನ ಮಾಡ್ತಿರೇನ್ರೀ? ನನಗೆ ನಮ್ಮ ನಾಗೇಂದ್ರ ಬೇಕು.. ಇದು ಮಹಿಳಾ ವೈದ್ಯೆ ಒಬ್ಬರು ವೈದ್ಯಕೀಯ ಶಿಕ್ಷಣ ಸಚಿವರನ್ನು ತರಾಟೆಗೆ ತೆಗೆದುಕೊಂಡ ಪರಿ.

ಮೃತ ಡಾ.ನಾಗೇಂದ್ರ ಅಂತಿಮ ದರ್ಶನ ಪಡೆದ ನಂತರ ಸಚಿವ ಡಾ.ಕೆ.ಸುಧಾಕರ್ ಪ್ರತಿಭಟನಾ ನಿರತ ವೈದ್ಯರ ಭೇಟಿ ವೇಳೆ ಮಹಿಳಾ ವೈದ್ಯೆಯೊಬ್ಬರು ಸಚಿವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ವೈದ್ಯೆಯ ತರಾಟೆಗೆ ಸಚಿವ ಸುಧಾಕರ್ ಮಾತ್ರ ಮೌನಿಯಾಗಿದ್ದರು. ನಂಜನಗೂಡು ಟಿಹೆಚ್‌ಓ ಆತ್ಮಹತ್ಯೆ ಪ್ರಕರಣ ಖಂಡಿಸಿ ನಡೆದ ಪ್ರತಿಭಟನಾ ಸ್ಥಳಕ್ಕೆ ಸಚಿವ ಸುಧಾಕರ್ ಭೇಟಿ ವೇಳೆ ಈ ಘಟನೆ ನಡೆಯಿತು.  

Leave a Reply

Your email address will not be published. Required fields are marked *

You May Also Like

ಶಿವಮೊಗ್ಗದಲ್ಲಿ ದಕ್ಷಿಣ ಆಫ್ರಿಕಾ ರೂಪಾಂತರ ವೈರಸ್ ಪತ್ತೆ

ಕೊರೊನಾ ವೈರಸ್ ಬೆನ್ನಲ್ಲೇ ಶಿವಮೊಗ್ಗದಲ್ಲಿ ದಕ್ಷಿಣ ಆಫ್ರಿಕಾ ರೂಪಾಂತರ ಕೊರೊನಾ ವೈರಸ್ ಪ್ರಕರಣವೊಂದು ದೃಢಪಟ್ಟಿದೆ.

ಗಳಿಕೆ ರಜೆ ನಗದಿಕರಣ ರದ್ದು!

ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ರದ್ದುಗೊಳಿಸುವ ಮೂಲಕ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಕೋವಿಡ್ ಹಿನ್ನೆಲೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವುದರಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.

ಪಡಿತರ ಚೀಟಿದಾರರಿಗೆ ರಾಗಿ, ಜೋಳ, ತೊಗರಿ, ಹೆಸರುಕಾಳು ವಿತರಣೆ

ಪಡಿತರ ಚೀಟಿದಾರರಿಗೆ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಇನ್ಮುಂದೆ ರಾಗಿ, ಜೋಳ, ತೊಗರಿ ಹಾಗೂ ಹೆಸರು ಕಾಳುಗಳನ್ನು ಖರೀದಿಸಿ ನ್ಯಾಯಬೆಲೆ ಅಂಗಡಿ ಮೂಲಕ ವಿತರಿಸಲು ಕ್ರಮಕೈಗೊಳ್ಳಲು ಸರ್ಕಾರ ಮುಂದಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ವಿ. ಕತ್ತಿ ತಿಳಿಸಿದ್ದಾರೆ.

ಕೆಲೂರ : ಸಚಿವ ಶ್ರೀರಾಮುಲು ಅವರಿಂದ ಮೃತರ ಕುಟುಂಬಕ್ಕೆ ವೈಯಕ್ತಿಕ 2ಲಕ್ಷ ಪರಿಹಾರ

ಉತ್ತರಪ್ರಭ ಗದಗ: ಮುಂಡರಗಿ ತಾಲೂಕ ಕೆಲೂರು ಗ್ರಾಮದ ನಿರ್ಮಲಾ ಪಾಟೀಲ ವಾರದ ಹಿಂದೆ ಅರಣ್ಯಾಧಿಕಾರಿಗಳ ಕಿರುಕುಳದಿಂದ…