ಮೈಸೂರು: ಥೂ ನಿಮ್ಮ ಯೋಗ್ಯತೆಗಿಷ್ಟು ಬೆಂಕಿ ಹಾಕ. ಮೂವತ್ತು ಲಕ್ಷ ಪರಿಹಾರ ಕೊಟ್ಟು ಸಮಾಧಾನ ಮಾಡ್ತೀರೆನ್ರಿ. ನಿಮ್ಮದು ಒಂದು ಸರ್ಕಾರನೇನ್ರಿ? ಯಾರಿಗೆ ಬೇಕು ನಿಮ್ಮ ಹಣ ..? ಎಲ್ಲರೂ ಒಂದು ತಿಂಗಳ ಸಂಬಳ ಕೊಟ್ರೆ ಸಾಕು..! ಹಣಕೊಟ್ಟು ಸಮಾಧಾನ ಮಾಡ್ತಿರೇನ್ರೀ? ನನಗೆ ನಮ್ಮ ನಾಗೇಂದ್ರ ಬೇಕು.. ಇದು ಮಹಿಳಾ ವೈದ್ಯೆ ಒಬ್ಬರು ವೈದ್ಯಕೀಯ ಶಿಕ್ಷಣ ಸಚಿವರನ್ನು ತರಾಟೆಗೆ ತೆಗೆದುಕೊಂಡ ಪರಿ.

ಮೃತ ಡಾ.ನಾಗೇಂದ್ರ ಅಂತಿಮ ದರ್ಶನ ಪಡೆದ ನಂತರ ಸಚಿವ ಡಾ.ಕೆ.ಸುಧಾಕರ್ ಪ್ರತಿಭಟನಾ ನಿರತ ವೈದ್ಯರ ಭೇಟಿ ವೇಳೆ ಮಹಿಳಾ ವೈದ್ಯೆಯೊಬ್ಬರು ಸಚಿವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ವೈದ್ಯೆಯ ತರಾಟೆಗೆ ಸಚಿವ ಸುಧಾಕರ್ ಮಾತ್ರ ಮೌನಿಯಾಗಿದ್ದರು. ನಂಜನಗೂಡು ಟಿಹೆಚ್‌ಓ ಆತ್ಮಹತ್ಯೆ ಪ್ರಕರಣ ಖಂಡಿಸಿ ನಡೆದ ಪ್ರತಿಭಟನಾ ಸ್ಥಳಕ್ಕೆ ಸಚಿವ ಸುಧಾಕರ್ ಭೇಟಿ ವೇಳೆ ಈ ಘಟನೆ ನಡೆಯಿತು.  

Leave a Reply

Your email address will not be published. Required fields are marked *

You May Also Like

ಆರೋಗ್ಯ ಸೇತು ಮೊಬೈಲ್ ಆಪ್ ಸುರಕ್ಷಾ ಕವಚ: ಡಾ.ಕೆ.ಸುಧಾಕರ್

ಕೊರೋನ ವೈರಸ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ’ಆರೋಗ್ಯ ಸೇತು’ ಆ್ಯಪ್ ಸಹಕಾರಿಯಾಗಿದೆ. ಇನ್ನೂ ಹೆಚ್ಚು ವ್ಯಾಪಕವಾಗಿ ಇದನ್ನು ಜನರು ಬಳಸುವಂತಾಗಬೇಕು

ಶಾಲೆಗಳಿಗೆ ತಹಶಿಲ್ದಾರ ಸತೀಶ್ ಕೂಡಲಗಿ ಭೇಟಿ- ಕಾನೂನು ಸುವ್ಯವಸ್ಥೆ ಪರಿಶೀಲನೆ ಖುಷಿಯಿಂದ ಶಾಲೆಗೆ ಮರಳಿದ ಮಕ್ಕಳು

ಚಿತ್ರ ವರದಿ : ಗುಲಾಬಚಂದ ಜಾಧವಆಲಮಟ್ಟಿ : ಹಿಜಾಬ್- ಕೇಸರಿ ಜಟಾಪಟಿ ವಿವಾದದಿಂದ ಆತಂಕ ಸೃಷ್ಟಿಯಾಗಿ…

ನಿರುದ್ಯೋಗಿಗಳಿಗೆ ಭತ್ಯೆ ನೀಡಲು ಒತ್ತಾಯಿಸುತ್ತೇನೆ: ಕೆ.ಆರ್.ಎಸ್ ಅಬ್ಯರ್ಥಿ ಕಾಂಬಳೆ

ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ದೊರಕುವವರೆಗೆ ನಿರುದ್ಯೋಗ ಭತ್ಯೆ ನೀಡಲು ನಾನು ಒತ್ತಾಯಿಸುತ್ತೇನೆ ಎಂದು ಪಶ್ಚಿಮ ಪದವಿಧರ ಕ್ಷೇತ್ರದ ಕೆ.ಆರ್.ಎಸ್ ಅಬ್ಯರ್ಥಿ ಶಿವರಾಜ್ ಕಾಂಬಳೆ ಹೇಳಿದರು.