ಲಕ್ಷ್ಮೇಶ್ವರ :ವಿಶ್ವ ಜೌಷಧಿ ತಜ್ಞರ ದಿನಾಚರಣೆ ಕಾರ್ಯಕ್ರಮ

ವಿಶ್ವ ಜೌಷಧಿ ತಜ್ಞರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಲಕ್ಷ್ಮೇಶ್ವರ ತಾಲೂಕು ನೋಂದಾಯಿತ ಜೌಷಧಿ ವ್ಯಾಸ್ಥಾರ ಸಂಘದವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೋವಿಡ ಜಾಗೃತಿ ಜಾಥಾಕ್ಕೆ ಸಿಪಿಐ ವಿಕಾಶ ಲಮಾಣಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಜೌಷಧಿ ವ್ಯಾಪಾರಸ್ಥರು ವೈದ್ಯರು ತಾಳ್ಮೆ ಕಳೆದುಕೊಳ್ಳದೆ ಕಾರ್ಯನಿರ್ವಹಿಸುವ ಮೂಲಕ ತಮ್ಮ ಸೇವೆಯ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ವೈದ್ಯಕೀಯ ಲೋಕದಲ್ಲಿ ಜೌಷಧಿ ತಜ್ಞರು ಹಾಗೂ ವೈದ್ಯರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಹೇಳಿದರು.

ಥೂ ನಿಮ್ಮ ಯೋಗ್ಯತೆಗಿಷ್ಟು ಬೆಂಕಿ ಹಾಕ!: ವೈದ್ಯಕೀಯ ಶಿಕ್ಷಣ ಸಚಿವರಿಗೆ ಮಹಿಳಾ ವೈದ್ಯೆಯ ತರಾಟೆ!

ಥೂ ನಿಮ್ಮ ಯೋಗ್ಯತೆಗಿಷ್ಟು ಬೆಂಕಿ ಹಾಕ. ಮೂವತ್ತು ಲಕ್ಷ ಪರಿಹಾರ ಕೊಟ್ಟು ಸಮಾಧಾನ ಮಾಡ್ತೀರೆನ್ರಿ. ನಿಮ್ಮದು ಒಂದು ಸರ್ಕಾರನೇನ್ರಿ? ಯಾರಿಗೆ ಬೇಕು ನಿಮ್ಮ ಹಣ ..? ಎಲ್ಲರೂ ಒಂದು ತಿಂಗಳ ಸಂಬಳ ಕೊಟ್ರೆ ಸಾಕು..! ಹಣಕೊಟ್ಟು ಸಮಾಧಾನ ಮಾಡ್ತಿರೇನ್ರೀ? ನನಗೆ ನಮ್ಮ ನಾಗೇಂದ್ರ ಬೇಕು.. ಇದು ಮಹಿಳಾ ವೈದ್ಯೆ ಒಬ್ಬರು ವೈದ್ಯಕೀಯ ಶಿಕ್ಷಣ ಸಚಿವರನ್ನು ತರಾಟೆಗೆ ತೆಗೆದುಕೊಂಡ ಪರಿ.