ದಾವಣಗೆರೆ: ಬಸವಾಪಟ್ಟಣದ ಹಾಲಸ್ವಾಮಿ ಗವಿಮಠ ಮತ್ತು ರಾಂಪುರದ ಹಾಲಸ್ವಾಮಿ ಮಠದ ಶ್ರೀ ವಿಶ್ವಾರಾಧ್ಯ ಹಾಲಸ್ವಾಮಿಗಳು ಕಾಲವಶರಾಗಿದ್ದಾರೆ. ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರು ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಇಂದು ಕಾಲವಶರಾಗಿದ್ದಾರೆ ಎನ್ನಲಾಗಿದೆ.