ಬೆಂಗಳೂರು: ಚಂದನವದಲ್ಲಿ ಹೊಸಬರ ಸಿನಿಮಾಗಳು ಸಾಕಷ್ಟು ನಿರೀಕ್ಷೆ ಮೂಡಿಸುತ್ತಿವೆ. ಇದರ ಜೊತೆಗೆ, ಸಿನಿಮಾಗಳಲ್ಲಿ ಹೊಸಹೊಸ ಪ್ರಯೋಗಗಳನ್ನು ನಡೆಸುವ ನಿರ್ದೇಶಕರಿಗೆ ಕನ್ನಡ ಚಿತ್ರರಂಗ ಕಾಲಕಾಲಕ್ಕೆ ವೇದಿಕೆ ಒದಗಿಸುತ್ತಿದೆ.

ಇದೀಗ ಅದರ ಮುಂದುವರೆದ ಭಾಗವಾಗಿ ಸ್ಯಾಂಡಲ್ ವುಡ್ ನಲ್ಲಿ ಹೊಸ ನಿರ್ದೇಶಕ ಕಗ್ಗತ್ತಲಿನ ಮಳೆಯಲ್ಲಿ ಹೆಜ್ಜೆಯ ಗುರುತುಗಳನ್ನು ಬಿಚ್ಚಿಡಲು ಸಿದ್ಧವಾಗಿದ್ದಾರೆ.

ಕರ್ಮ-ಧರ್ಮಗಳ ನಡುವಿನ ಸಂರ್ಘಷದ ಹೊಸ ರೂಪದ ಟೀಸರ್ ಜೊತೆಗೆ ನಿರ್ದೇಶಕ ಅಂಬರೀಷ್ ಸದ್ದುಮಾಡುತ್ತಿದ್ದಾರೆ. ಹೊಸ  ಆಯಾಮದ ಕಥೆಯನ್ನು ಹೇಳಲು ಹೊರಟ ಅಂಬರೀಶ್ ಯತ್ನಿಸಿರುವುದು ಅವರು ಬಿಡುಗಡೆ ಮಾಡಿರುವ ಟೀಸರ್ ಮೂಲಕ ಗೊತ್ತಾಗಿದೆ.

ಕಾಲಾಂತಕ ಸಿನಿಮಾದಲ್ಲಿ ಕಥೆಯೇ ಮುಖ್ಯ ಪಾತ್ರ. ನಾಯಕ – ನಾಯಕಿಗಿಂತ ಕಾಲಾಂತಕ ಎನ್ನುವ ಬುಕ್ ಇಲ್ಲಿ ಸಿನಿಮಾ ಕಥೆಯ  ಜೀವಾಳ ಎನ್ನುವುದು ಅಂಬರೀಷ್ ಅವರ ಹೇಳಿಕೆ.

ನಿರ್ಮಾಪಕ ಶಾಂತ ಕುಮಾರ್ ನಿರ್ಮಿಸಿರುವ ಎರಡನೇ ಸಿನಿಮಾ. ಇದಕ್ಕೂ ಮುನ್ನ ಅವರು ರಂಗ್ ಬಿ ರಂಗಿ ಸಿನಿಮಾವನ್ನು ಸ್ಯಾಂಡಲ್ ವುಡ್ ಗೆ ಕೊಟ್ಟಿದ್ದರು. ಗೌರಿ ಗಣೇಶ ಹಬ್ಬದ ಪ್ರಯುಕ್ತ ಕಾಲಾಂತಕ ಚಿತ್ರತಂಡ ನಾಡಿನ ಸಮಸ್ತ ಜನತೆಗೆ ಶುಭಕೋರಿದೆ.

ಎಲ್ಲಾ ಆತ್ಮೀಯರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಕೋರೋನ ಮಹಾಮಾರಿ ಚಿತ್ರರಂಗ ಮತ್ತು ಚಿತ್ರ ಕರ್ಮಿಗಳ ಮೇಲೆ ಬಹಳ ಪರಿಣಾಮ ಬೀರಿದೆ. ವರ್ಷಾನುವರ್ಷಗಳ ಕಾಲ ಹಸಿವು, ನಿದ್ದೆ, ಅವಮಾನಗಳ ಮಧ್ಯೆ ಕಟ್ಟಿಕೊಂಡಂತಹ ಕನಸುಗಳಿಗೆ ದೊಡ್ಡ ಮಾರಕವಾಗಿ ನಿಂತಿದೆ. 

“ಕಾಲಾಂತಕ” ಸಿನಿಮಾ ನಮ್ಮ ಕನಸಿನ ಕೂಸು… ಕಾಲದ ಆತಂಕವಿಲ್ಲದೆ ಕಾಲಾಂತಕ ನಿಮ್ಮ ಮುಂದೆ ಅತಿ ಶೀಘ್ರದಲ್ಲಿ ಬರುವ ಸಿದ್ಧತೆ ನಡೆಯುತ್ತಿದೆ.. ನಿಮ್ಮ ಪ್ರೀತಿ ಪ್ರೋತ್ಸಾಹ ಸಿನಿ ಕರ್ಮಿಗಳ ಮೇಲೆ ಸದಾ ಹಾಗೆ ಇರಲಿ… ಎಂದು ಚಿತ್ರ ತಂಡ ಹೇಳಿಕೊಂಡಿದೆ.

Leave a Reply

Your email address will not be published.

You May Also Like

ನಟ ಸುಶಾಂತ್ ಸಿಂಗ್ ಲಾಸ್ಟ್ ಪಿಕ್ಚರ್ ಟ್ರೈಲರ್: ಬದುಕು-ಸಾವಿನ ತಲ್ಲಣದ ಕಹಾನಿ

‘ಯಾವಾಗ ಹುಟ್ಟಬೇಕು, ಯಾವಾಗ ಸಾಯಬೇಕು ಎಂದು ನಿರ್ಧರಿಸುವುದು ನಮ್ ಕೈಲಿಲ್ಲ. ಆದರೆ, ಹೇಗೆ ಬದುಕಬೇಕು ಎಂದು…

ರಾಜವೀರಮದಕರಿ ನಾಯಕ ಚಿತ್ರಿಕರಣಕ್ಕೆ ಸಿದ್ಧತೆ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಜ ವೀರಮದಕರಿ ನಾಯಕ ಸಿನಿಮಾ ಮತ್ತೆ ಆಗಸ್ಟ್ ನಲ್ಲಿ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಕೊರೋನಾದಿಂದಾಗಿ ಸಿನಿಮಾ ಚಿತ್ರಿಕರಣ ಅರ್ಧಕ್ಕೇ ಸ್ಥಗಿತಗೊಂಡಿತ್ತು. ಆಗಸ್ಟ್ ಅಷ್ಟೊತ್ತಿಗೆ ಚಿತ್ರಿಕರಣಕ್ಕೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿಂದ ಚಿತ್ರತಂಡ ಚಿತ್ರಿಕರಣದ ತಯಾರಿ ನಡೆಸಿದೆ. ಕೊರೊನಾ ಕಾರಣದಿಂದ ಹಲವು ಮುಂಜಾಗೃತ ಕ್ರಮಗಳ ಮೂಲಕ ಸರ್ಕಾರ‌ ಚಿತ್ರಿಕರಣಕ್ಕೆ ಅನುಮತಿ ನೀಡಿದರೆ ಚಿತ್ರಿಕರಣ ಆರಂಭಿಸುವ ತಯಾರಿಯಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಇದ್ದಾರೆ.

ವೈಯಕ್ತಿಕ ಸೌಂದರ್ಯ ವರ್ಧಕಕ್ಕೆ ಹೊಸ ಬ್ರ್ಯಾಂಡ್ ಬಿಡುಗಡೆ ಮಾಡಿದ ಸಲ್ಮಾನ್ ಖಾನ್

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ FRSH ಹೆಸರಿನ ವೈಯಕ್ತಿಕ ಸೌಂದರ್ಯ ಬ್ರಾಂಡ್ ಬಿಡುಗಡೆ ಮಾಡಿದ್ದಾರೆ. ವೈಯಕ್ತಿಕ ಉಡುಪು, ದೇಹದಾರ್ಡ್ಯ ಸಲಕರಣೆ, ಜಿಮ್ ಮತ್ತು ಈ-ಸೈಕಲ್ ಬಿಡುಗಡೆಯ ನಂತರ ಇದೀಗ ಹೊಸ ಬ್ರಾಂಡ್ ಪರಿಚಯಿಸಿದ್ದಾರೆ.