ಹಾವೇರಿ: ಕೊರೋನಾ ಸಾಂಕ್ರಾಮಿಕ ಸೋಂಕಾಗಿದ್ದು,ಕೊರೊನಾ ಸೋಂಕು ಬಂದಿದೆ ಎಂದು ಹೇಳಲು ಯಾರೂ ಮುಜುಗರಪಡುವುದಾಗಲೀ ನಾಚಿಕೆ ಪಡುವುದಾಗಲೀ ಮಾಡಬಾರದು ಎಂದಯ ಕೃಷಿ ಸಚಿವರೂ ಆಗಿರುವ ಹಿರೇಕೆರೂರು ಮತಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.

ಹಿರೇಕೆರೂರು ಮತಕ್ಷೇತ್ರದ ವರಹ ಗ್ರಾಮದಲ್ಲಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟ, ಮೋಹನ್ ಮರಿಗೌಡರ್ (ವಕಿಲರು),  ದಾನಪ್ಪ ಹುಲ್ಲಣ್ಣನವರ ಹಾಗೂ ಬಸಪ್ಪ ಹನುಮಂತಪ್ಪ ನಂದಿಹಳ್ಳಿ ಇವರ ಕುಟುಂಬಗಳಿಗೆ ವೈಯಕ್ತಿಕವಾಗಿ ತಲಾ 50 ಸಾವಿರ ರೂಪಾಯಿಗಳ  ಸಹಾಯಧನ ನೀಡಿದರು. ಹಾಗೂ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಬಿ.ಸಿ.ಪಾಟೀಲ್,ಸೋಂಕಿಗೆ ನಾಚಿಕೆಯಾಗಲೀ ಅಂಜಿಕೆಯಾಗಲೀ ಇರುವುದಿಲ್ಲ.ಜಾಗೃತಿ, ಕಾಳಜಿ,ಸ್ವಚ್ಛತೆಯ ಜೊತೆಗೆ ಸಾಮಾಜಿಕ ಅಂತರ ಮುಖ್ಯ.ಸೋಂಕನ್ನು ತಡೆಯಲು ಇನ್ನೊಬ್ಬರಿಗೆ ಪಸರಿಸದಂತೆ ನೋಡಿಕೊಳ್ಳಬೇಕು.ಈ ಬಗ್ಗೆ ಸ್ವಯಂ ಜಾಗೃತಿ ಜೊತೆಗೆ ಎಲ್ಲರಿಗೂ ಜಾಗೃತಿ ಮೂಡಿಸಬೇಕೇ ವಿನಹ: ಸೋಂಕಿನ ಲಕ್ಷಣಗಳು ಕಂಡುಬಂದರೆ ಹೆದರಿಯೋ ಭಯಬಿದ್ದೋ ಅಥವಾ ಇನ್ಯಾವುದೋ ಮೌಢ್ಯವನ್ನು ನಂಬಿ ಸುಮ್ಮನೆ ಇರುವುದಿಲ್ಲ‌.ಸೋಂಕಿಗೆ ಸೂಕ್ತ ಚಿಕಿತ್ಸೆ ಪಡೆಯಲು ಸೋಂಕು ಬಂದಿದೆಯೆಂದು ಹೇಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಯಾವುದೇ ಕಾರಣಕ್ಕೂ ಹಿಂದೇಟು ಹಾಕಬಾರದು. ನನ್ನ ಕ್ಷೇತ್ರದ ಜನತೆಯ ಜೊತೆಗೆ ನಾನು ಸದಾ ಇದ್ದೇ ಇರುತ್ತೇನೆ ಎಂದು ಬಿ‌.ಸಿ.ಪಾಟೀಲ್ ಸ್ಫೂರ್ತಿಯ ಮಾತುಗಳನ್ನಾಡಿದರು.

Leave a Reply

Your email address will not be published. Required fields are marked *

You May Also Like

ಪವಾಡ ಪುರುಷ ಕಲ್ಲಾಪೂರ ಬಸವಣ್ಣ ಜಾತ್ರೆಗೆ ತೆರಳುವ ಭಕ್ತರಿಗೆ ಅನ್ನ ಸಂತರ್ಪಣೆ.

ಉತ್ತರಪ್ರಭ ಸುದ್ದಿ ನರಗುಂದ: ತಾಲೂಕಿನ ಕಲ್ಲಾಪೂರ ಗ್ರಾಮದ ಪವಾಡ ಪುರುಷ ಬಸವಣ್ಣ ಜಾತ್ರೆಯ ನಿಮಿತ್ಯ ಪಾದಯಾತ್ರೆ…

ಅಂಕಗಳಿಕೆಯ ವಿಷಯ ಜ್ಞಾನದಿಂದ ಮಾತ್ರ ಶಿಕ್ಷಣ ಪರಿಪೂರ್ಣವಾಗುವುದಿಲ್ಲ

ಸ್ಕೌಟ್ಸ್ ಮತ್ತು ಗೈಡ್ಸಗಳು ಸನ್ನಡತೆ, ಸದ್ಭಾವನೆ, ಶಿಸ್ತು ಮತ್ತು ಸೇವಾ ಮನೋಭಾವದಂಥ ಶಿಕ್ಷಣ ಪಡೆದು ಭಾರತೀಯ ಸಂಪನ್ಮೂಲ ವ್ಯಕ್ತಿಗಳಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ವಿಚಾರ ಎಂದು ಸ್ಕೌಟ್ಸ್ ಮತ್ತು ಗೈಡ್ಸ ತಾಲೂಕಾಧ್ಯಕ್ಷ ಶೀಥಲ ಬಾಗಮಾರ ಹೇಳಿದರು.

ಗದಗ ಜಿಲ್ಲೆಯ ಪಶುವೈದ್ಯರ ಕೊರತೆ ಕುರಿತು ಪರಿಷತ್ತಿನಲ್ಲಿ ಪ್ರತಿಧ್ವನಿ

ಜಿಲ್ಲೆಯಲ್ಲಿ ಪಶು ಚಿಕಿತ್ಸಾಲಯಕ್ಕೆ ವೈದ್ಯರ ಕೊರತೆಯಿದ್ದು, ಖಾಲಿ ಹುದ್ದೆ ಭರ್ತಿಗೆ ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ.ಸಂಕನೂರ ಕೋರಿದರು.

ಕೋವಿಶೀಲ್ಡ್ ಎರಡನೇ ಡೋಸ್ ಪಡೆದ ಡಿಸಿ

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಭಾನುವಾರ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಎರಡನೇ ಡೋಸ್ ಪಡೆದಿದ್ದಾರೆ. 28 ದಿನಗಳ ಹಿಂದೆ ಮೊದಲ ಡೋಸ್ ಪಡೆದಿದ್ದ ಅವರು, ಇದೀಗ ಎರಡನೇ ಡೋಸ್ ಪಡೆದುಕೊಂಡಿದ್ದಾರೆ.