2019ರ ಜುಲೈ 8ರಂದು ಮಹಾರಾಷ್ಟ್ರ ಬಿಟ್ಟ ಈ ಟ್ರಕ್ 2020ರ ಜುಲೈ 19ರಂದು ಕೇರಳ ತಲುಪಿದೆ.

ತಿರುವನಂತಪುರಂ: ‘ಎಷ್ಟೊತ್ತೋ ಬರಾದು? ನಡಕೊಂಡ್ ಬರಾಕ್ ಹತ್ತೀಯನು?’ ಅಂತೀವಲ್ಲ ಹಂಗಾತಿದು. ಕೇರಳದಲ್ಲಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಬೃಹತ್ ಯಂತ್ರವೊಂದನ್ನು ಮಹಾರಾಷ್ಟ್ರದ ನಾಸಿಕ್ ನಲ್ಲಿ ತಯಾರಿಸಲಾಯಿತು.

ಅದರ ತೂಕ, ಎತ್ತರ ಮತ್ತು ಅಗಲದ ಕಾರಣದಿಂದ ಅದನ್ನು ಕೇರಳಕ್ಕೆ ಸಾಗಿಸುವುದೇ ಇಂದು ದೊಡ್ಡ ಸವಾಲಾಗಿತ್ತು. ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಸೂಕ್ಷ್ಮ ಭಾಗಗಳನ್ನು ಒಳಗೊಂಡಿದ್ದರಿಂದ ಹುಷಾರಾಗಿ ಮತ್ತು ನಾಜೂಕಾಗಿ ಅದನ್ನು ಸಾಗಿಸಿ ತರಲಾಗಿದೆ.

70 ಟನ್ ತೂಕ, 7.5 ಮೀ ಎತ್ತರ ಮತ್ತು 6.65 ಮೀಟರ್ ಅಗಲದ ಈ ಬೃಹತ್ ಯಂತ್ರ ಅಂತೂ ಕೇರಳದ ತಿರುವನಂತಪುರ ತಲುಪಿದೆ. 74 ಚಕ್ರಗಳ ಈ ವೊಲ್ವೊ ಟ್ರಕ್ ಸುಮಾರು 1,700 ಕಿಮೀ ಪ್ರಯಾಣಿಸಿದೆ.

ಇದು ‘ಏರೋಸ್ಪೇಸ್ ಹಾರಿಜಂಟಲ್ ಆಟೊಕ್ಲೇವ್’ ಯಂತ್ರವಾಗಿದ್ದು, ಹಗುರ ಪದಾರ್ಥಗಳ ಉತ್ಪಾದನೆಯಲ್ಲಿ ಇದನ್ನು ಬಳಸುತ್ತಾರೆ. ದಿನಕ್ಕೆ 5 ಕಿ.ಮೀ ಪ್ರಯಾಣ ಮಾಡುತ್ತ ನಾಲ್ಕು ರಾಜ್ಯಗಳನ್ನು ಹಾಯ್ದು ತಿರುವನಂತಪುರ ತಲುಪಿದ ಈ ಯಂತ್ರವನ್ನು ಈಗ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಸಂಸ್ಥೆಗೆ ತಲುಪಿಸುವ ಕೆಲಸ ನಡೆದಿದೆ. ಈ ಯಂತ್ರದ ಸಾಗಾಣಿಕೆಗೆ 32 ಸ್ಟಾಫ್ ಒಂದು ವರ್ಷ ಬೆವರು ಹರಿಸಿದ್ದಾರೆ! ಈಗ ಅದನ್ನು 2 ಆಕ್ಸೆಲ್ ಬಳಕೆಯಾಗುವ ಪುಲ್ಲಿಂಗ್ ತಂತ್ರಜ್ಞಾನ ಬಳಸಿ ಕೆಳಕ್ಕೆ ಇಳಿಸಿ ಸ್ಥಾಪಿಸಲಾಗುತ್ತದೆ.

Leave a Reply

Your email address will not be published. Required fields are marked *

You May Also Like

ಕೊರೊನಾ ಹಿನ್ನೆಲೆ : ಆ.31ರವರೆಗೆ ಪರಿಹಾರ ಸಾಮಗ್ರಿಗಳ ಆಮದಿನ ಮೇಲಿನ ತೆರಿಗೆ ವಿನಾಯಿತಿ ವಿಸ್ತರಣೆ

ನವದೆಹಲಿ: ಜಿಎಸ್‌ಟಿ ಕೌನ್ಸಿಲ್ ತನ್ನ ಸಭೆಯಲ್ಲಿ ಕೊರೊನಾ ವೈರಸ್ ಪರಿಹಾರ ಸಾಮಗ್ರಿಗಳ ಆಮದಿಗೆ ಆಗಸ್ಟ್ 31ರವರೆಗೆ ತೆರಿಗೆ ವಿನಾಯಿತಿ ನೀಡಲು ನಿರ್ಧರಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಘೋಷಿಸಿದರು. ರಾಜ್ಯ ಹಣಕಾಸು ಸಚಿವರನ್ನು ಒಳಗೊಂಡ 43ನೇ ಜಿಎಸ್ಟಿ ಕೌನ್ಸಿಲ್ ಸಭೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಯಿತು. ಕೌನ್ಸಿಲ್ ಸುಮಾರು ಎಂಟು ತಿಂಗಳಲ್ಲಿ ಮೊದಲ ಬಾರಿಗೆ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ರೂಪಾಂತರ ಕೊರೋನಾ ಹಿನ್ನೆಲೆ : ಭಾರತಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

ಕೋವಿಡ್-19 ನ ರೂಪಾಂತರಗಳು ಪ್ರಸಾರವಾದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಅಂತಾರಾಷ್ಟ್ರೀಯ ಆಗಮನಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸೋಮವಾರದಿಂದ ಮಾರ್ಗಸೂಚಿ ಜಾರಿಗೆ ಬರಲಿದೆ.

ಆಗಸ್ಟ್ 15ಕ್ಕೆ ದೇಶಕ್ಕೆ ಕೊರೋನಾ ಮೆಡಿಸಿನ್ ಸಿಗುತ್ತಾ?

ಕೊರೋನಾ ಲಸಿಕೆ ಉತ್ಪಾದನೆ ಹೇಗೆ? ದೆಹಲಿ: ಜುಲೈ 3 ಶುಕ್ರವಾರದಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್…

ನೀಟ್ ಫಲಿತಾಂಶದ ಯಡವಟ್ಟು, ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ!

ನವದೆಹಲಿ : ನೀಟ್ ನ ಯಡವಟ್ಟಿನಿಂದಾಗಿ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.