2019ರ ಜುಲೈ 8ರಂದು ಮಹಾರಾಷ್ಟ್ರ ಬಿಟ್ಟ ಈ ಟ್ರಕ್ 2020ರ ಜುಲೈ 19ರಂದು ಕೇರಳ ತಲುಪಿದೆ.

ತಿರುವನಂತಪುರಂ: ‘ಎಷ್ಟೊತ್ತೋ ಬರಾದು? ನಡಕೊಂಡ್ ಬರಾಕ್ ಹತ್ತೀಯನು?’ ಅಂತೀವಲ್ಲ ಹಂಗಾತಿದು. ಕೇರಳದಲ್ಲಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಬೃಹತ್ ಯಂತ್ರವೊಂದನ್ನು ಮಹಾರಾಷ್ಟ್ರದ ನಾಸಿಕ್ ನಲ್ಲಿ ತಯಾರಿಸಲಾಯಿತು.

ಅದರ ತೂಕ, ಎತ್ತರ ಮತ್ತು ಅಗಲದ ಕಾರಣದಿಂದ ಅದನ್ನು ಕೇರಳಕ್ಕೆ ಸಾಗಿಸುವುದೇ ಇಂದು ದೊಡ್ಡ ಸವಾಲಾಗಿತ್ತು. ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಸೂಕ್ಷ್ಮ ಭಾಗಗಳನ್ನು ಒಳಗೊಂಡಿದ್ದರಿಂದ ಹುಷಾರಾಗಿ ಮತ್ತು ನಾಜೂಕಾಗಿ ಅದನ್ನು ಸಾಗಿಸಿ ತರಲಾಗಿದೆ.

70 ಟನ್ ತೂಕ, 7.5 ಮೀ ಎತ್ತರ ಮತ್ತು 6.65 ಮೀಟರ್ ಅಗಲದ ಈ ಬೃಹತ್ ಯಂತ್ರ ಅಂತೂ ಕೇರಳದ ತಿರುವನಂತಪುರ ತಲುಪಿದೆ. 74 ಚಕ್ರಗಳ ಈ ವೊಲ್ವೊ ಟ್ರಕ್ ಸುಮಾರು 1,700 ಕಿಮೀ ಪ್ರಯಾಣಿಸಿದೆ.

ಇದು ‘ಏರೋಸ್ಪೇಸ್ ಹಾರಿಜಂಟಲ್ ಆಟೊಕ್ಲೇವ್’ ಯಂತ್ರವಾಗಿದ್ದು, ಹಗುರ ಪದಾರ್ಥಗಳ ಉತ್ಪಾದನೆಯಲ್ಲಿ ಇದನ್ನು ಬಳಸುತ್ತಾರೆ. ದಿನಕ್ಕೆ 5 ಕಿ.ಮೀ ಪ್ರಯಾಣ ಮಾಡುತ್ತ ನಾಲ್ಕು ರಾಜ್ಯಗಳನ್ನು ಹಾಯ್ದು ತಿರುವನಂತಪುರ ತಲುಪಿದ ಈ ಯಂತ್ರವನ್ನು ಈಗ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಸಂಸ್ಥೆಗೆ ತಲುಪಿಸುವ ಕೆಲಸ ನಡೆದಿದೆ. ಈ ಯಂತ್ರದ ಸಾಗಾಣಿಕೆಗೆ 32 ಸ್ಟಾಫ್ ಒಂದು ವರ್ಷ ಬೆವರು ಹರಿಸಿದ್ದಾರೆ! ಈಗ ಅದನ್ನು 2 ಆಕ್ಸೆಲ್ ಬಳಕೆಯಾಗುವ ಪುಲ್ಲಿಂಗ್ ತಂತ್ರಜ್ಞಾನ ಬಳಸಿ ಕೆಳಕ್ಕೆ ಇಳಿಸಿ ಸ್ಥಾಪಿಸಲಾಗುತ್ತದೆ.

Leave a Reply

Your email address will not be published. Required fields are marked *

You May Also Like

ಕೊರೊನಾ ಬಲಿ: ಜಾಗತಿಕ ಮಟ್ಟದಲ್ಲಿ ಸಾವಿನ ಸಂಖ್ಯೆ ಎಷ್ಟು ಗೊತ್ತಾ..?

ನ್ಯೂಯಾರ್ಕ್: ಜಾಗತಿಕ ಮಟ್ಟದಲ್ಲಿ ಕೊರೊನಾ ಭಾರೀ ವಿನಾಶಕ್ಕೆ ಕಾರಣವಾಗಿದೆ. ಜಗತ್ತಿನಲ್ಲಿ ಒಟ್ಟು 4.25 ಲಕ್ಷ ಜನ…

ರೋಣದ ‘ಕೆಜಿ ಬಾಸ್’ಗೆ ಟಿಕೆಟ್ ಬೇಕಾ ಎಂದ ರಾಜಾಹುಲಿ: ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ ಬಂಡಿ, ಯಡ್ಡಿ ಮಾತು..!

ಉತ್ತರಪ್ರಭ ಸುದ್ದಿಗದಗ: ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ನಿನ್ನೆ ನಡೆದ ಅದ್ಧೂರಿ ಸಮಾವೇಶ ಕೇಸರಿ ಪಾಳೆಯದಲ್ಲಿ ಹೊಸ…

ಬ್ರಿಟನ್‌ ವಿಮಾನಗಳಿಗೆ ಜನವರಿ 7ರ ವರೆಗೂ ನಿರ್ಬಂಧ..!

ಮತ್ತೆ ಬ್ರಿಟನ್‌ ವಿಮಾನಗಳಿಗೆ ಜನವರಿ 7ರ ವರೆಗೆ ಭಾರತ ನಿರ್ಬಂಧ ಹೇರಿದೆ. ಬ್ರಿಟನ್‌ ನಲ್ಲಿ ಹೊಸ ರೂಪಾಂತರಿ ವೈರಸ್‌ ಪತ್ತೆ ಹಿನ್ನೆಲೆ, ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಹಾವು ಬಿಟ್ಟು ಪತ್ನಿ ಕೊಲೆ ಮಾಡಿದ ಪತಿ!

ಕೊಲ್ಲಂ: ವ್ಯಕ್ತಿಯೊಬ್ಬ ತನ್ನ ಪತ್ನಿ ಮಲಗಿದ್ದಾಗ ನಾಗರಹಾವು ಬಿಟ್ಟು ಹತ್ಯೆ ಮಾಡಿದ ಭಯಾನಕ ಘಟನೆ ಕೇರಳದಲ್ಲಿ…