ಹೈದರಾಬಾದ್: ಯಾಕೋ ಇವತ್ ಬಿರಿಯಾನಿ ಬೇಡ ಜೀವಕ್ಕ ಕೊಂಚ ನಿರಾಶೆಯಾಗೈತಿ ನೋಡ್ರಿ. ಆನ್ ಲೈನ್ ನ್ಯಾಗ್ ಬಿರಿಯಾನಿ ಬುಕ್ ಮಾಡಿದ ಮ್ಯಾಲೆ ಮನಿಗ್ ಬಂದ್ ಬಿರಿಯಾನ್ ಪ್ಯಾಕೇಟ್ ಬಿಚ್ಚಿ ಗಡದ್ ಆಗಿ ತಿಂದ್ರಾತು, ಅಂತ ಹೊಂಟ ವ್ಯಕ್ತಿಗೆ ಅದ್ಯಾಕೋ ಸಿಟ್ ಬಂದೈತಿ ನೋಡ್ರಿ.

ಆನ್ಲೈಿನ್ ಮೂಲಕ ಆರ್ಡರ್ ಮಾಡಿ ತರಿಸಿಕೊಂಡ ಬಿರಿಯಾನಿಯೊಳಗ ಲೆಗ್ ಪೀಸ್ ಇರಲಿಲ್ಲ ಅನ್ನೋಕಾರಣಕ್ಕ, ವ್ಯಕ್ತಿಯೊಬ್ಬ ಟ್ವಿಟ್ಟರ್ ನ್ಯಾಗ ತನಗಾದ ಅನ್ಯಾಯ ಹೇಳಿಕೊಂಡು ಮಂತ್ರಿಗಳಿಗೆ ಟ್ಯಾಗ್ ಮಾಡಿದ ಘಟನೆ ನಡದೈತಿ. ಮಂತ್ರಿ ಕೆ.ಟಿ.ರಾಮರಾವ್ ಅವರನ್ನು ಟ್ಯಾಗ್ ಮಾಡಿ ದೂರು ನೀಡ್ಯಾನ. ತೊಟಕುರಿ ರಘುಪತಿ ಎಂಬಾತ ಆರ್ಡರ್ ಮಾಡಿ ತರಿಸಿಕೊಂಡ ಬಿರಿಯಾನಿ ಬಗ್ಗೆ ಟ್ವಿಟ್ಟರ್ ನ್ಯಾಗ್ ಬ್ಯಾಸರಾ ವ್ಯಕ್ತಪಡಿಸ್ಯಾನ. ಆನ್ ಲೈನ್ ನ್ಯಾಗ ಬಂದು ಬಿರಿಯಾನಿಯ ಛಲೋ ಇರಲಿಲ್ಲ ಅನ್ನೋದು ತೊಟಕುರಿಯ ತಕರಾರು.

ಆರ್ಡರ್ ಮಾಡಿದ್ ಬಿರಿಯಾನಿಯೊಳಗ ಹೆಚ್ಚು ಮಸಾಲಿ ಇತ್ತಂತ. ಇನ್ನ ಹೆಚ್ಚಿನ ಲೆಗ್ ಪೀಸ್ ಇರಲಿಲ್ಲ ಅಂತ ಬಿರಿಯಾನಿ ಫೋಟೋ ಹಾಕಿ ಜೊಮ್ಯಾಟೋ ಬಗ್ಗೆ ಬ್ಯಾಸರಾ ಮಾಡಿಕೊಂಡು ಟ್ವೀಟ್ ಮಾಡ್ಯಾನ.

ಇದನ್ನೆಲ್ಲ ಟ್ವಿಟ್ಟರ್ ಪೋಸ್ಟ್ ನ್ಯಾಗ ತೆಲಂಗಾಣದ ನಗರಾಭಿವೃದ್ಧಿ ಸಚಿವ ಕೆ.ಟಿ.ರಾಮರಾವ್ ಅವರಿಗೆ ಟ್ಯಾಗ್ ಮಾಡ್ಯಾರ.

ಟ್ವಿಟ್ಟರ್ನಗಲ್ಲಿ ಕೋವಿಡ್ ಸಂಬಂಧಿ ಅಹವಾಲುಗಳನ್ನ ಪರಿಶೀಲಿಸಿ ಅದಕ್ಕೆ ನೆರವು ನೀಡೋ ಕೆಲ್ಸಾ ಮಾಡ್ತಿದ್ದ ಕೆಟಿಆರ್, ಅದಕ್ಕ ಪ್ರತಿಕ್ರಿಯೇ ಕೊಟ್ಟಾರ. ಹೌದು ಬಿರಿಯಾನಿ ನೀವು ತರಿಸಿ ನಂಗ್ಯಾಕ್ ಟ್ಯಾಗ್ ಮಾಡಿ ಅಂತ ಕೇಳ್ಯಾರ. ಏನರಾ ಆಗ್ಲಿ ಬಿರಿಯಾನಿ ಕಥಿ ಮಂತ್ರಿಗಳನ್ನ ಹಾಗೂ ಸಂಸದರನ್ನ ಚರ್ಚೆಗೆ ಎಳೆದು ತಂದೈತಿ. ಬಿರಿಯಾನಿ ಪ್ರಿಯನ ಕಿತಾಪತಿ ಕೊರೊನಾ ಕಾರಣದಿಂದ ತಲಿ ಚಿಟ್ ಹಿಡಿದ್ ಮನಿ ಸೇರಿದ್ ಮಂದಿಗೆ ಸ್ವಲ್ಪ ಮನಸ್ ಬಿಚ್ಚಿ ನಗುವಂಗ ಮಾಡೈತಿ.

Leave a Reply

Your email address will not be published. Required fields are marked *

You May Also Like

ರಜೌರಿ ; ಜಿಲ್ಲೆಯ ಹೆದ್ದಾರಿಯಲ್ಲಿ ಅನುಮಾನಾಸ್ಪದ ವಸ್ತು ಪತ್ತೆ

ಕೇಂದ್ರಾಡಳಿತ ಪ್ರದೇಶ ಕಾಶ್ಮೀರಕ್ಕೆ ವಿದೇಶಿ ಪ್ರತಿನಿಧಿಗಳ ನಿಯೋಗದ ಭೇಟಿಯ ಬೆನ್ನಲ್ಲೆ ಕಣಿವೆಯಲ್ಲಿ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿ ಆತಂಕ ಹುಟ್ಟಿಸಿದೆ.

ಗೆಳೆಯನೊಂದಿಗೆ ಅಪ್ರಾಪ್ತೆಯ ಸೆಕ್ಸ್ – ನೋಡಿದ್ದಕ್ಕೆ ಅಜ್ಜಿಯ ಕೊಲೆ!

ಲಕ್ನೋ: ಅಪ್ರಾಪ್ತ ಬಾಲಕಿ ತನ್ನ ಪ್ರಿಯಕರನ ಜೊತೆ ಸೆಕ್ಸ್ ಮಾಡುತ್ತಿರುವುದನ್ನು ಸಾಕು ಅಜ್ಜಿ ನೋಡಿದ್ದಾರೆ ಎಂಬ…

ಕೋರ್ಟ್ ಸೂಚನೆ ಪಾಲಿಸದಿದ್ದರೆ ಶಿಕ್ಷೆ!

ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ಮೇಲ್ವಿಚಾರಣ ಸಮಿತಿ ನೀಡಿರುವ ಸಲಹೆ ಮತ್ತು ಸೂಚನೆಗಳನ್ನು ಉಲ್ಲಂಘಿಸಿದರೆ ಕಾನೂನು ರೀತಿ ಕ್ರಮ ಜರಗಿಸಲಾಗುವುದು ಎಂದು ಕೋರ್ಟ್‌ ಸಿಬಂದಿಗೆ ಹೈಕೋರ್ಟ್‌ ಎಚ್ಚರಿಕೆ ನೀಡಿದೆ.

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಎಷ್ಟು..?

ಬೆಂಗಳೂರು: ಜಗತ್ತಿನ ಆತಂಕಕ್ಕೆ ಕಾರಣವಾಗಿರುವ ಕೊರೊನಾ ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಮುಂದುವರೆಸಿದೆ. ಸದ್ಯ ಕೊರೊನಾಗೆ…