ಗದಗ ಜಿಲ್ಲೆಯಲ್ಲಿ ಹರ್ತಿ, ಮುಂಡರಗಿ/ಇಟಗಿ ಮತ್ತು ಹೊಂಬಳದಲ್ಲಿ ಸಾಕಷ್ಟು ಜನರಿಗೆ ಸೋಂಕು ಹರಡಿಸಿದ ಸುಪರ್ ಸ್ಪ್ರೆಡರ್ಸ್ ಕಂಡು ಬಂದಿದ್ದರು. ಈಗ ಸೀತಾಲಹರಿಯ ಸುಪರ್ ಸ್ಪ್ರೆಡರ್ ಪ್ರಾಥಮಿಕ ಸಂಪರ್ಕದಲ್ಲೇ 11 ಜನರಿಗೆ ಸೋಂಕು ಅಂಟಿಸಿದ್ದಾರೆ.


ಗದಗ:
  ಸುಪರ್ ಸ್ಪ್ರೆಡರ್ ಕುರಿತು ಉತ್ತರಪ್ರಭ ವಾರದ ಹಿಂದೆ ವಿವರವಾಗಿ ಬರೆದಿತ್ತು. ಟ್ರೇಸಿಂಗ್ ಪ್ರಕ್ರಿಯೆಯಲ್ಲಿ (ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದ ಹುಡುಕಾಟ) ಲೋಪದೋಷ ಆಗುತ್ತಿರುವುದಕ್ಕೆ  ಈ ತರಹದ ಸುಪರ್ ಸ್ಪ್ರೆಡರ್ ತಮಗೇ ಅರಿವಿಲ್ಲದಂತೆ ಸೋಂಕನ್ನು ಹರಡಿಸುತ್ತ ಹೋಗುತ್ತಾರೆ.

ಈಗ ಗದಗ ತಾಲೂಕಿನ ಸೀತಾಲಹರಿ ಗ್ರಾಮದ ಪಿ-31130 ಎಂಬ ಕೋವಿಡ್ ರೋಗಿಯಿಂದ ಸದ್ಯಕ್ಕೆ ಅಧಿಕೃತವಾಗಿ 11 ಜನರಿಗೆ ಸೋಂಕು ತಗುಲಿದೆ. (ನಂತರ ಪಿ-31130 ಚಿಕಿತ್ಸೆ ಫಲಿಸದೇ ನಿಧನರಾದರು)

 ಕೊಪ್ಪಳ ಜಿಲ್ಲೆಯಲ್ಲಿ ಸಾರಿಗೆ ಇಲಾಖೆಯಲ್ಲಿ    ಡ್ರೈವರ್-ಕಂ-ಕಂಡಕ್ಟರ್ ಆಗಿದ್ದ ಅವರು, ಸದ್ಯಕ್ಕೆ ಡ್ಯೂಟಿಗೆ ಹಾಕದ ಕಾರಣ ಸೀತಾಲಹರಿಗೆ ಬಂದು ಕೃಷಿಯಲ್ಲಿ ನಿರತರಾಗಿದ್ದರು. ಅವರಿಗೆ ಎದೆ ನೋವು ಕಾಣಿಸಿಕೊಂಡಾಗ, ಕೆಲವರು ಬಾಯಿಯ ಮೂಲಕ ಉಸಿರು ತುಂಬಲು ಯತ್ನಿಸಿದರು ಎನ್ನಲಾಗಿದೆ. ನಂತರ ಆಸ್ಪತ್ರೆಗೆ ದಾಖಲಿಸಿದಾಗ ಅವರಿಗೆ ಕೋವಿಡ್ ಪಾಸಿಟಿವ್ ದೃಢವಾಗಿತ್ತು.

ಈ ಸುಪರ್ ಸ್ಪ್ರೆಡರ್ ಇನ್ನೆಷ್ಟು ಜನರ ಸಂಪರ್ಕಕ್ಕೆ ಬಂದಿದ್ದರೋ ಗೊತ್ತಿಲ್ಲ. ಈಗ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದ 11 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ 11 ಜನರ ಸಂಪರ್ಕಕ್ಕೆ ಬಂದ ದ್ವಿತೀಯ ಸಂಪರ್ಕಿತರು ಎಷ್ಟು ಜನರಿರಬಹುದು?

  ಪ್ರಾಥಮಿಕ ಸಂಪರ್ಕಿತ ಸೋಂಕಿತರು

gdg-351, gdg-352, gdg-353, gdg-354, gdg-356, gdg-361, gdg-362, gdg-363, gdg-364,  gdg-365, gdg-366  ಈಗ  ಪಿ-31130 ಪ್ರಾಥಮಿಕ ಸಂಪರ್ಕದಿಂದ ಸೋಂಕಿತರಾಗಿದ್ದಾರೆ. ಇನ್ನು ದ್ವಿತೀಯ ಸಂಪರ್ಕದ ಕೇಸುಗಳೂ ವರದಿಯಾಗುತ್ತಿವೆ. ಈ ವಿಷಯದಲ್ಲಿ ಜಿಲ್ಲಾಡಳಿತ ಟ್ರೇಸಿಂಗ್ ಚುರುಕುಗೊಳಿಸಬೇಕಿದೆ.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿ ಕೊರೋನಾ ಸೋಂಕು ಪರೀಕ್ಷೆ ನಡೆಸಿದ್ದು ಎಷ್ಟು ಜನರಿಗೆ ಗೊತ್ತೆ?

ಕೊರೋನಾ ಸೋಂಕು ಪತ್ತೆ ಕಾರ್ಯ ಕೂಡ ರಾಜ್ಯದಲ್ಲಿ ತೀವ್ರಗತಿಯಲ್ಲಿ ನಡೆದಿದ್ದು, ಈಗಾಗಲೇ 1 ಲಕ್ಷ ಜನರನ್ನು ಸೋಕು ಪರೀಕ್ಷೆಗೆ ಒಳಪಡಿಸಲಾಗಿದೆ.

ಶ್ರೀ ಜಗದ್ಗುರು ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ನಿಮಿತ್ಯ ತೇರಿನ ಗಾಲಿ ಪೂಜಾ ಕಾರ್ಯಕ್ರಮ

ಉತ್ತರಪ್ರಭ ಗದಗ:ಉತ್ತರ ಕರ್ನಾಟಕದಲ್ಲಿ ಐತಿಹಾಸಿಕ ಮತ್ತು ಪುರಾತನವಾದ ಶ್ರೀ ಜಗದ್ಗುರು ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ…

ಮದ್ಯದಿಂದ ವಂಚಿತರಾದರು ದಾವಣಗೆರೆ ಜನ

ಮದ್ಯದಿಂದ ವಂಚಿತರಾದರು ದಾವಣಗೆರೆ ಜನ ದಾವಣಗೆರೆ : ಮದ್ಯ ಪ್ರಿಯರ ಮನವಿಯಂತೆ ನೀನ್ನೆಯಿಂದ ಬಾರ್ ಗಳು…

ಶಾಲೆಗಳು ಪ್ರಾರಂಭವಾಗಲು ಕೂಡಿ ಬಂದಿದೆಯೇ ಮುಹೂರ್ತ!?

ಬೆಂಗಳೂರು : ಕೊರೊನಾ ಹಾವಳಿಯಿಂದಾಗಿ ರಾಜ್ಯದಲ್ಲಿ ಶಾಲೆಗಳು ಮುಚ್ಚಿವೆ. ಆದರೆ, ಸದ್ಯ ಕೊರೊನಾ ತಗ್ಗುತ್ತಿದ್ದು, ಶಾಲೆಗಳನ್ನು ತೆರೆಯುವ ಕುರಿತು ಚಿಂತನೆ ನಡೆಯುತ್ತಿದೆ.