ಒಂದು ಮಶಿನ್ ಹೊತ್ತ ಟ್ರಕ್: ಮಹಾರಾಷ್ಟ್ರದಿಂದ ಕೇರಳ ತಲುಪಲು ಒಂದು ವರ್ಷ!

truck tiruvanantapura keral

ಒಂದು ಮಶಿನ್ ಹೊತ್ತ ಟ್ರಕ್: ಮಹಾರಾಷ್ಟ್ರದಿಂದ ಕೇರಳ ತಲುಪಲು ಒಂದು ವರ್ಷ!

2019ರ ಜುಲೈ 8ರಂದು ಮಹಾರಾಷ್ಟ್ರ ಬಿಟ್ಟ ಈ ಟ್ರಕ್ 2020ರ ಜುಲೈ 19ರಂದು ಕೇರಳ ತಲುಪಿದೆ.

ತಿರುವನಂತಪುರಂ: ‘ಎಷ್ಟೊತ್ತೋ ಬರಾದು? ನಡಕೊಂಡ್ ಬರಾಕ್ ಹತ್ತೀಯನು?’ ಅಂತೀವಲ್ಲ ಹಂಗಾತಿದು. ಕೇರಳದಲ್ಲಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಬೃಹತ್ ಯಂತ್ರವೊಂದನ್ನು ಮಹಾರಾಷ್ಟ್ರದ ನಾಸಿಕ್ ನಲ್ಲಿ ತಯಾರಿಸಲಾಯಿತು.

ಅದರ ತೂಕ, ಎತ್ತರ ಮತ್ತು ಅಗಲದ ಕಾರಣದಿಂದ ಅದನ್ನು ಕೇರಳಕ್ಕೆ ಸಾಗಿಸುವುದೇ ಇಂದು ದೊಡ್ಡ ಸವಾಲಾಗಿತ್ತು. ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಸೂಕ್ಷ್ಮ ಭಾಗಗಳನ್ನು ಒಳಗೊಂಡಿದ್ದರಿಂದ ಹುಷಾರಾಗಿ ಮತ್ತು ನಾಜೂಕಾಗಿ ಅದನ್ನು ಸಾಗಿಸಿ ತರಲಾಗಿದೆ.

70 ಟನ್ ತೂಕ, 7.5 ಮೀ ಎತ್ತರ ಮತ್ತು 6.65 ಮೀಟರ್ ಅಗಲದ ಈ ಬೃಹತ್ ಯಂತ್ರ ಅಂತೂ ಕೇರಳದ ತಿರುವನಂತಪುರ ತಲುಪಿದೆ. 74 ಚಕ್ರಗಳ ಈ ವೊಲ್ವೊ ಟ್ರಕ್ ಸುಮಾರು 1,700 ಕಿಮೀ ಪ್ರಯಾಣಿಸಿದೆ.

ಇದು ‘ಏರೋಸ್ಪೇಸ್ ಹಾರಿಜಂಟಲ್ ಆಟೊಕ್ಲೇವ್’ ಯಂತ್ರವಾಗಿದ್ದು, ಹಗುರ ಪದಾರ್ಥಗಳ ಉತ್ಪಾದನೆಯಲ್ಲಿ ಇದನ್ನು ಬಳಸುತ್ತಾರೆ. ದಿನಕ್ಕೆ 5 ಕಿ.ಮೀ ಪ್ರಯಾಣ ಮಾಡುತ್ತ ನಾಲ್ಕು ರಾಜ್ಯಗಳನ್ನು ಹಾಯ್ದು ತಿರುವನಂತಪುರ ತಲುಪಿದ ಈ ಯಂತ್ರವನ್ನು ಈಗ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಸಂಸ್ಥೆಗೆ ತಲುಪಿಸುವ ಕೆಲಸ ನಡೆದಿದೆ. ಈ ಯಂತ್ರದ ಸಾಗಾಣಿಕೆಗೆ 32 ಸ್ಟಾಫ್ ಒಂದು ವರ್ಷ ಬೆವರು ಹರಿಸಿದ್ದಾರೆ! ಈಗ ಅದನ್ನು 2 ಆಕ್ಸೆಲ್ ಬಳಕೆಯಾಗುವ ಪುಲ್ಲಿಂಗ್ ತಂತ್ರಜ್ಞಾನ ಬಳಸಿ ಕೆಳಕ್ಕೆ ಇಳಿಸಿ ಸ್ಥಾಪಿಸಲಾಗುತ್ತದೆ.

Exit mobile version