ತಬ್ಲಿಘಿ ಪರ ಮಾತನಾಡಿದ ಐಎಎಸ್ ಅಧಿಕಾರಿಗೆ ಸರ್ಕಾರ ಏನು ಹೇಳಿತು?

ಬೆಂಗಳೂರು : ತಬ್ಲಿಘಿ ಪರ ಮಾತನಾಡಿದ ಐಎಎಸ್ ಅಧಿಕಾರಿಯೊಬ್ಬರಿಗೆ ರಾಜ್ಯ ಸರ್ಕಾರ ಶೋಕಾಸ್ ನೊಟೀಸ್ ನೀಡಿದೆ.

ತಬ್ಲಿಘಿಗಳ ಪರ ಮಾತನಾಡಿದ ಅಧಿಕಾರಿಯೊಬ್ಬರು ಪೇಚಿಗೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಸ್ಪಷ್ಟೀಕರಣ ನೀಡುವಂತೆ ರಾಜ್ಯ ಸರ್ಕಾರ ಶೋಕಾಸ್ ನೊಟೀಸ್ ನೀಡಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮೊಹಮ್ಮದ್ ಮೊಹ್‌ ಸಿನ್‌ ಅವರು ಸದ್ಯ ನೊಟೀಸ್ ಪಡೆದ ಅಧಿಕಾರಿ. ಅವರು ಇತ್ತೀಚೆಗೆ ದೆಹಲಿಯ 300ಕ್ಕೂ ಹೆಚ್ಚು ತಬ್ಲಿಘಿ ಹಿರೋಗಳು ದೇಶದ ಏಳಿಗೆಗಾಗಿ ಪ್ಲಾಸ್ಮಾ ದಾನ ಮಾಡುತ್ತಿದ್ದಾರೆ. ಆದರೆ ಗೋದಿ ಮೀಡಿಯಾ ಇಂತಹ ಹಿರೋಗಳು ಮಾಡಿದ ಮಾನವೀಯ ಕೆಲಸವನ್ನು ಯಾವತ್ತು ತೋರಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಗಮನಿಸಿದ ರಾಜ್ಯ ಸರ್ಕಾರ, ಸ್ಪಷ್ಟನೆ ನೀಡುವಂತೆ ನೊಟೀಸ್‌ ನೀಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಅಲ್ಲದೇ, ಐದು ದಿನಗಳ ಒಳಗಾಗಿ ಪತ್ರದ ಮೂಲಕ ಸ್ಪಷ್ಟನೆ ನೀಡುವಂತೆ ತಿಳಿಸಿದೆ.

Leave a Reply

Your email address will not be published. Required fields are marked *

You May Also Like

ಜಿಲ್ಲಾ ಪಂಚಾಯಿತಿ; ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

ಜಿಲ್ಲಾ ಪಂಚಾಯಿತಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆದಿದೆ. ಆಸಕ್ತ ಅಭ್ಯರ್ಥಿಗಳು ಖುದ್ದಾಗಿ ಅರ್ಜಿಗಳನ್ನು ಸಲ್ಲಿಸಲು 25/3/2021ರ ಸಂಜೆ 5 ಗಂಟೆ ಕೊನೆಯ ದಿನವಾಗಿದೆ.

ಗ್ರಾಮೀಣ ಭಾಗಕ್ಕೂ ಬಂದೇ ಬಿಟ್ಟಿತು ಕೊರೊನಾ!

ಬೆಳಗಾವಿ: ಇಲ್ಲಿಯವರೆಗೂ ನಗರ ಪ್ರದೇಶದ ಜನರ ಆತಂಕಕ್ಕೆ ಕಾರಣವಾಗಿದ್ದ ಕೊರೊನಾ ಮಹಾಮಾರಿ ಸದ್ಯ ಹಳ್ಳಿಗರ ನಿದ್ದೆಗೆಡಿಸಿದೆ.…

ನಟ ಪುನೀತ್ ರಾಜ್ ಕುಮಾರ್ ತೀವ್ರ ಅಸ್ವಸ್ಥ:ವಿಕ್ರಮ್ ಆಸ್ಪತ್ರೆಯತ್ತ ಗಣ್ಯರ ದೌಡು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ದಾಖಿಸಲಾಗಿದೆ.