ಮುಂಬಯಿ : ಬಾಲಿವುಡ್ ನಟಿ ಊರ್ವಶಿ ಸದ್ಯ ಭಾರೀ ಸುದ್ದಿಯಲ್ಲಿದ್ದಾರೆ. ಇದೀಗ ನಟಿಯ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ನಟಿ ಊರ್ವಶಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ಅವರ ಮದುವೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಊರ್ವಶಿ ಮದುವೆ ಫೋಟೋ ವೈರಲ್ ಆಗಿದೆ. ಇದಕ್ಕೆ ಶಾಕ್ ಆಗಿರುವ ಅಭಿಮಾನಿಗಳು, ನಟ – ನಟಿಯರು ಈ ಸಂದರ್ಭದಲ್ಲಿಯೇ ಮದುವೆಯಾಗುತ್ತಿದ್ದಾರೆಯೇ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಊರ್ವಶಿ ನಿಜ ಜೀವನದಲ್ಲಿ ಮದುವೆಯಾಗಿಲ್ಲ. ಬದಲಾಗಿ ಸಿನಿಮಾದಲ್ಲಿ ವಿವಾಹವಾಗಿದ್ದಾರೆ.
ಗೌತಮ್ ಮತ್ತು ಊರ್ವಶಿ ವರ್ಜಿನ್ ಭಾನುಪ್ರಿಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಇನ್ನೂ ಕೆಲವು ದಿನಗಳಲ್ಲಿ ಓಟಿಟಿ ಪ್ಲಾಟ್ಫಾವರ್ಮ್ ಮೂಲಕ ಬಿಡುಡಗೆಯಾಗಲಿದೆ. ಇದೇ ಸಿನಿಮಾದಲ್ಲಿ ಗೌತಮ್ ಮತ್ತು ಊರ್ವಶಿ ಮದುವೆಯಾಗುವ ದೃಶ್ಯ ಇದೆ. ಆ ಫೋಟೋವನ್ನು ನಟ ಗೌತಮ್ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಇದೊಂದು ಹಾಸ್ಯಮಯ ಸಿನಿಮಾವಾಗಿದ್ದು, ಅಜಯ್ ಲೋಹನ್ ಆಕ್ಷನ್ ಕಟ್ ಹೇಳಿದ್ದಾರೆ. ಯುವಕರು ಮತ್ತು ಅವರ ಕುಟುಂಬದ ನಡುವಿನ ಸಂಬಂಧದ ಬಗ್ಗೆ ಇರುವ ಸಿನಿಮಾವಾಗಿದೆ. ಜುಲೈ 16ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

Leave a Reply

Your email address will not be published.

You May Also Like

ಮರ್ಯಾದೆಗೇಡು ಹತ್ಯೆ: ಮರ್ಡರ್ ಸಿನಿಮಾ ಪೋಸ್ಟರ್ ರಿಲೀಜ್ ಮಾಡಿದ RGV

ಮರ್ಯಾದೆಗೇಡು ಹತ್ಯೆ ಕುರಿತ ಸಿನಿಮಾ ಮರ್ಡರ್ ನ ಪೋಸ್ಟರ್ ಬಿಡುಗಡೆ ಮಾಡಿದ ರಾಮ್ ಗೋಪಾಲ್ ವರ್ಮಾ.…

ಹೊಸ ಆಯಾಮದ ಕಥೆಯನ್ನು ಹೇಳಲು ಹೊರಟ ಅಂಬರೀಶ್

ಚಂದನವದಲ್ಲಿ ಹೊಸಬರ ಸಿನಿಮಾಗಳು ಸಾಕಷ್ಟು ನಿರೀಕ್ಷೆ ಮೂಡಿಸುತ್ತಿವೆ. ಇದರ ಜೊತೆಗೆ, ಸಿನಿಮಾಗಳಲ್ಲಿ ಹೊಸಹೊಸ ಪ್ರಯೋಗಗಳನ್ನು ನಡೆಸುವ ನಿರ್ದೇಶಕರಿಗೆ ಕನ್ನಡ ಚಿತ್ರರಂಗ ಕಾಲಕಾಲಕ್ಕೆ ವೇದಿಕೆ ಒದಗಿಸುತ್ತಿದೆ.

ಹರ್ನಾಜ್ ಕೌರ್ ಸಂಧು 2021ರ ನೂತನ ವಿಶ್ವ ಸುಂದರಿ!

ಉತ್ತರಪ್ರಭ ದೆಹಲಿ: 2021ರ 70ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್ ಕೌರ್ ಸಂಧು…

ಮಳೆಗಾಲ: ಕೊರೊನಾ ಮಧ್ಯೆ ಆರೋಗ್ಯಕ್ಕಾಗಿ ನಿಮ್ಮ ಆಹಾರ ಪದ್ಧತಿ ಹೀಗಿರಲಿ..!!

ಬೆಂಗಳೂರು: ಈಗ ಮಳೆಗಾಲ ಆರಂಭವಾಗಿದೆ. ಅಲ್ಲದೇ, ಕೊರೊನಾ ಕಾಟ ಕೂಡ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ…