ಮುಂಬಯಿ : ಬಾಲಿವುಡ್ ನಟಿ ಊರ್ವಶಿ ಸದ್ಯ ಭಾರೀ ಸುದ್ದಿಯಲ್ಲಿದ್ದಾರೆ. ಇದೀಗ ನಟಿಯ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ನಟಿ ಊರ್ವಶಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ಅವರ ಮದುವೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಊರ್ವಶಿ ಮದುವೆ ಫೋಟೋ ವೈರಲ್ ಆಗಿದೆ. ಇದಕ್ಕೆ ಶಾಕ್ ಆಗಿರುವ ಅಭಿಮಾನಿಗಳು, ನಟ – ನಟಿಯರು ಈ ಸಂದರ್ಭದಲ್ಲಿಯೇ ಮದುವೆಯಾಗುತ್ತಿದ್ದಾರೆಯೇ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಊರ್ವಶಿ ನಿಜ ಜೀವನದಲ್ಲಿ ಮದುವೆಯಾಗಿಲ್ಲ. ಬದಲಾಗಿ ಸಿನಿಮಾದಲ್ಲಿ ವಿವಾಹವಾಗಿದ್ದಾರೆ.
ಗೌತಮ್ ಮತ್ತು ಊರ್ವಶಿ ವರ್ಜಿನ್ ಭಾನುಪ್ರಿಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಇನ್ನೂ ಕೆಲವು ದಿನಗಳಲ್ಲಿ ಓಟಿಟಿ ಪ್ಲಾಟ್ಫಾವರ್ಮ್ ಮೂಲಕ ಬಿಡುಡಗೆಯಾಗಲಿದೆ. ಇದೇ ಸಿನಿಮಾದಲ್ಲಿ ಗೌತಮ್ ಮತ್ತು ಊರ್ವಶಿ ಮದುವೆಯಾಗುವ ದೃಶ್ಯ ಇದೆ. ಆ ಫೋಟೋವನ್ನು ನಟ ಗೌತಮ್ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಇದೊಂದು ಹಾಸ್ಯಮಯ ಸಿನಿಮಾವಾಗಿದ್ದು, ಅಜಯ್ ಲೋಹನ್ ಆಕ್ಷನ್ ಕಟ್ ಹೇಳಿದ್ದಾರೆ. ಯುವಕರು ಮತ್ತು ಅವರ ಕುಟುಂಬದ ನಡುವಿನ ಸಂಬಂಧದ ಬಗ್ಗೆ ಇರುವ ಸಿನಿಮಾವಾಗಿದೆ. ಜುಲೈ 16ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

Leave a Reply

Your email address will not be published. Required fields are marked *

You May Also Like

ಚಿತ್ರಮಂದಿರಗಳಿಗೆ ನಿರ್ಬಂಧ ಬೇಡ : ಪುನೀತ್ ಮನವಿ

ಚಲನಚಿತ್ರ ಮಂದಿರಗಳಲ್ಲಿ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿಕೊಡಬೇಕು ಎಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೊರೊನಾ ವಾರಿಯರ್ಸ್ ನಿಜವಾದ ಹಿರೋಗಳು: ಜನಜಾಗೃತಿಯ ಸಂದೇಶ ನೀಡುವ ಚಿತ್ರರಂಗದ ದಿಗ್ಗಜರ ದೃಶ್ಯರೂಪಕ

ಕೊರೊನಾ ಜಾಗೃತಿಗಾಗಿ ಕನ್ನಡ ಚಿತ್ರರಂಗದ ದಿಗ್ಗಜರು ಸಂದೇಶ ನೀಡಿದ ದೃಶ್ಯ ರೂಪಕವನ್ನು ನೀವು ನೋಡಬಹುದು.

ಹಾಡು ನಿಲ್ಲಿಸಿದ ಸಾವಿರಾರು ಹಾಡುಗಳ ಸರದಾರ ಎಸ್ಪಿಬಿ

ಎದೆ ತುಂಬಿ ಹಾಡುವ ಮೂಲಕ ಜನರ ಮನಗೆದ್ದು ಲಕ್ಷಾಂತರ ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದವರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಎಸ್ಪಿಬಿ ಹಾಡು ಯಾರಿಗೆ ಇಷ್ಟವಿಲ್ಲ ಹೇಳಿ. ಆ ಹೆಸರಲ್ಲಿಯೇ ಒಂದು ಕಂಠವಿದೆ, ರೋಮಾಂಚನವಿದೆ. ಆಕರ್ಶಣೆ ಇದೆ. ಆದರೆ ಇಂದು ತೀವ್ರ ಇಂದು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ ಎನ್ನುವುದು ಅರಗಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.

ಚಿತ್ರಮಂದಿರಗಳಿಗೆ ಬಿಡುಗಡೆಯಾಗದೆ ನೇರವಾಗಿ ನೆಟ್ ಫ್ಲಿಕ್ಸ್ ಗೆ ಬಿಡುಗಡೆಯಾದ ಚಿತ್ರ!

ಜಾನ್ಹವಿ ಕಪೂರ್ ನಟಿಸಿರುವ ಕರಣ್ ಜೋಹಾರ್ ನಿರ್ಮಾಣದ ಗುಂಜಾನ್ ಸಕ್ಸೇನಾ-ದಿ ಕಾರ್ಗಿಲ್ ಗರ್ಲ್ ಸಿನಿಮಾ ಸಾಮಾನ್ಯ ಸಿನಿಮಾಗಳಂತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೆ ನೇರವಾಗಿ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ.