ಲವಲವಿಕೆಯ ಹುಡುಗಿ, ಪ್ರಬುದ್ಧ ನಟಿ ನಿತ್ಯಾ ಮೆನನ್ಳ ಒಂದು ಲಿಪ್-ಲಾಕ್ ಫೋಟೊ ನೆಟ್ಟಿಗರಲ್ಲಿ ಸಂಚಲನ ಮೂಡಿಸಿದೆ.

ಬೆಂಗಳೂರು: ನಿತ್ಯಾ ಮೆನನ್ ಕಣ್ಣುಮುಚ್ಚಿ ತನ್ನದೇ ಭಾವಲೋಕದಲ್ಲಿದ್ದಾಳೆ. ಎದುರುಗಿರುವ ಯುವತಿಯೂ ಅಷ್ಟೇ. ತನ್ನೊಳಗಿನ ಕಾಮನೆಯ ಬಿಸಿಯನ್ನು ಆರಿಸಿಕೊಳ್ಳಲು ಎದುರಿನ ಯುವತಿಯ ಮುಖವನ್ನು ಎರಡೂ ಬೊಗಸೆಗಳಲ್ಲಿ ಬಿಗಿಯಾಗಿ ಹಿಡಿದ ನಿತ್ಯಾ ತುಟಿಗೆ ತುಟಿ ಒತ್ತಿ ಸಮ್ಮೋಹಿನಿಯಾಗಿದ್ದಾಳೆ.

ಇದರ ಒಂದು ಫೋಟೊ ಈಗ ಸಾಮಾಜಿಕ ಜಾಲತಾಣದಲ್ಲಿ ಶರವೇಗದಲ್ಲಿ ಶೇರ್ ಆಗುತ್ತಿದೆ. ತಮ್ಮನ್ನೇ ನಿತ್ಯಾ ಚುಂಬಿಸಿದಳು ಎಂಬಂತೆ ಕೆಲವು ಪಡ್ಡೆಗಳು ಭ್ರಮಾಲೋಕದಲ್ಲಿವೆ. ಇನ್ನು ಕೆಲವರು ನಿತ್ಯಾಳ ಚಾಲೆಂಜಿಂಗ್ ವೃತ್ತಿಪರತೆ ಮೆಚ್ಚಿಕೊಂಡಿದ್ದಾರೆ.

ವಾಸ್ತವ ಇಷ್ಟೇ: ಇದು ವೆಬ್ ಸರಣಿಯೊಂದರ ದೃಶ್ಯ. ಇದರಲ್ಲಿ ನಿತ್ಯಾಳದು ಲೆಸ್ಬಿಯನ್ (ಸಲಿಂಗ ಪ್ರೇಮಿ) ಪಾತ್ರ. ಪಾತ್ರಕ್ಕೆ ತಕ್ಕಂತೆ ಆಕೆ ಅಭಿನಯಿಸಿದ್ದಾಳೆ.   ಈ ದೃಶ್ಯದ ಎಪಿಸೋಡ್ ಇನ್ನೂ ಪ್ರಸಾರವಾಗಿಲ್ಲ. ಆ ಫೋಟೊ ಹೇಗೋ ಲೀಕ್ ಆಗಿದೆ. ಕೆಲವು ಸಂದರ್ಭಗಳಲ್ಲಿ ಪ್ರಚಾರ ಪಡೆಯಲು ನಿರ್ಮಾಪಕರೇ ಇಂತಹ ಫೋಟೊ/ದೃಶ್ಯಗಳನ್ನು ಲೀಕ್ ಮಾಡುತ್ತಾರೆ. ಹೀಗೆ ಲೀಕ್ ಆದ ಚಿತ್ರ ನೋಡಿದ ಕೆಲವರು ಇದು ನಿಜ ಜೀವನದ ಕಿಸ್ಸಾ ಎಂದು ಕನ್ಪೂಸನ್ ಆಗಿದ್ದಾರೆ.

ಈಗಿನ ಸಾಮಾಜಿಕ ಜಾಲತಾಣದ ಟ್ರೆಂಡ್ ಹೇಗಿದೆ ಎಂದು ತೋರಿಸಲಷ್ಟೇ ಇದನ್ನು ಪ್ರಕಟಿಸಿದ್ದೇವೆ.

ಬೋಲ್ಡ್ & ಬ್ಯೂಟಿಫುಲ್

ಕನ್ನಡದಲ್ಲಿ ಹಲವು ಚಿತ್ರಗಳ ಮೂಲಕ ನಿತ್ಯಾ ಮೆನನ್ ಗಮನ ಸೆಳೆದಿದ್ದಾಳೆ. ‘ಮೈನಾ’ ಚಿತ್ರದಲ್ಲಿನ ಆಕೆಯ ಪ್ರಬುದ್ಧ ಅಭಿನಯ ಮರೆಯಲು ಸಾಧ್ಯವೇ? ಕೋಟಿಗೊಬ್ಬ-2 ಸಿನಿಮಾದಲ್ಲಿನ ಆಕೆಯ ಕಮರ್ಷಿಯಲ್ ಸಕ್ಸಸ್ ಕೂಡ ಗಮನಾರ್ಹ. ಯಾವುದೇ ಬಗೆಯ ಪಾತ್ರವಿದ್ದರೂ ಅದಕ್ಕೆ ಜೀವ ತುಂಬಬಲ್ಲ ಹುಡುಗಿ ಈಕೆ. ಹಲವು ಪ್ರಯೋಗಾತ್ಮಕ ಚಿತ್ರಗಳಲ್ಲಿ ಪ್ರಬುದ್ಧ ಅಭಿನಯ ನೀಡುವ ಮೂಲಕ ತನ್ನ ಟ್ಯಾಲೆಂಟ್ ಸಾಬೀತು ಮಾಡಿದ್ದಾಳೆ.

ಬ್ರೀತ್: ಇಂಟು ದಿ ಶಾಡೋ ಎಂಬ ವೆಬ್ ಸರಣಿಯ ದೃಶ್ಯದ ಚಿತ್ರವಿದು. ಇದರಲ್ಲಿ ನಿತ್ಯಾಳದು ಲೆಸ್ಬಿಯನ್ ಪಾತ್ರ. ‘ಸಾಕಷ್ಟು ಭಾವನಾತ್ಮಕೆಯಿಂದ ಕೂಡಿದ, ಸಾಮಾಜಿಕವಾಗಿ ಒಪ್ಪಿಗೆಯಾಗದ ೀ ಸವಾಲಿನ ಪಾತ್ರವನ್ನು ನಾನು ಒಪ್ಪಿಕೊಂಡಿದ್ದೇನೆ. ಈ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದೇನೆ’ ಎಂದು ನಿತ್ಯಾ ಹೇಳಿದ್ದಾಳೆ.

Leave a Reply

Your email address will not be published. Required fields are marked *

You May Also Like

ಶಾಶ್ವತ ಚಿರನಿದ್ರೆಗೆ ಜಾರಿದ ಚಿರು..!

ತಮಿಳುನಾಡು ಅಂದ ತಕ್ಷಣವೇ ಕಾವೇರಿ ನದಿ ವಹಿವಾಟೆ ನಮ್ಮ ಕಣ್ಣೆದುರು ಬರುತ್ತದೆ. ಕಾವೇರಿ ಸಮಸ್ಯೆ ತೀವ್ರ ಇದ್ದ 1980ರ ದಶಕದಲ್ಲಿ ಈ ಹುಡುಗ ಹುಟ್ಟುತ್ತಾನೆ. ಬೆಂಗಳೂರಿನಲ್ಲೆ ಬೆಳೆಯುವ ಈ ಹುಡುಗನ ಸಿನಿಮಾ ಹುಚ್ಚಿಗೆ ಅವರ ಮಾವ ನೀರು ಎರೆಯುತ್ತಾರೆ.

ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ರೆ ಎಲ್ಲವನ್ನು ಬರೆದುಕೊಡ್ತಿದ್ದೆ ಅಂತ ನಟ ಶಿವಣ್ಣ ಹೇಳಿದ್ದು ಯಾಕೆ?

ರೈತರು ಬೀದಿಯಲ್ಲಿ ಕೂತು ಊಟ ಮಾಡ್ತಿರೋದು ನೋಡುವಾಗೆಲ್ಲಾ ಹೊಟ್ಟೆ ಉರಿಯುತ್ತೆ. ನಮ್ಮ ಸಮಸ್ಯೆಗಳನ್ನೇ ನಾವು ಪರಿಹಾರ ಪಡಿಸಿಕೊಳ್ಳೋಕೆ ಆಗುತ್ತಿಲ್ಲ. ನಮ್ಮ ಕೈಯಲ್ಲಿ ಏನೂ ಇಲ್ಲ. ರೈತರಿಗೆ ನಮ್ಮ ಬೆಂಬಲ ಖಂಡಿತಾ ಇದ್ದೇ ಇರುತ್ತೆ. ಆದರೆ ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ನನ್ ಕೈಯಲ್ಲಿ ಅಧಿಕಾರ ಇದ್ದಿದ್ರೆ ಎಲ್ಲವನ್ನೂ ಬರೆದುಕೊಡುತ್ತಿದ್ದೆ. ಆದ್ರೆ ಅಧಿಕಾರ ನನ್ನ ಕೈಯಲ್ಲಿ ಇಲ್ವಲ್ಲಾ ಎಂದು ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ ಬೇಸರ ವ್ಯಕ್ತಪಡಿಸಿದ್ದಾರೆ.

ನಟ ಸುಶಾಂತ್ ಪ್ರಕರಣದ ತನಿಖೆ ಕೊನೆಗೊಳಿಸಲು ನಿರ್ಧರಿಸಿದ ಸಿಬಿಐ!

ಮುಂಬಯಿ : ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆಗೆ ಅಂತ್ಯ ಹಾಡಲು ಸಿಬಿಐ ನಿರ್ಧರಿಸಿದೆ.