ಬೆಂಗಳೂರು : ವಿಂಡೋ ಸೀಟ್ ಗಾಗಿ ಶೀತಲ್ ಶೆಟ್ಟಿ ನಿರ್ದೇಶಕರ ಕ್ಯಾಪ್ ಹಾಕಿದ್ದು, ಸದ್ಯ ಅಧಿಕೃತ ಪ್ರಕಟಣೆ ಹೊರ ಬಂದಿದೆ.

ವಿಂಡೋ ಸೀಟ್ ಚಿತ್ರದ ಶೂಟಿಂಗ್ ಜನೇವರಿಯಲ್ಲಿ ಪೂರ್ಣಗೊಂಡಿತ್ತು. ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರು ತಿಂಗಳ ನಂತರ ಪ್ರಾರಂಭವಾಗಲಿದೆ. ಸದ್ಯ ಅವರ ಮೊದಲ ನಿರ್ದೇಶನದ ಚಿತ್ರದ ಕುರಿತು ಅಧಿಕೃತ ಪ್ರಕಟಣೆ ಹೊರ ಬಂದಿದೆ.

ಕೆಎಸ್‌ಕೆ ಶೋರೀಲ್ ಸಹಭಾಗಿತ್ವದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ನಿರೂಪ್ ಭಂಡಾರಿ ನಾಯಕನಾಗಿ ನಟಿಸಿರುವ ರೊಮ್ಯಾಂಟಿಕ್ – ಥ್ರಿಲ್ಲರ್ ಚಿತ್ರವನ್ನು ಫ್ಯಾಂಟಮ್ ನಿರ್ಮಾಪಕ ಮಂಜುನಾಥ್ ಗೌಡ ಅಲಿಯಾಸ್ ಜ್ಯಾಕ್ ಮಂಜು ನಿರ್ಮಾಣ ಮಾಡಿದ್ದಾರೆ.

ಶೀತಲ್ ನಿರ್ದೇಶಕರಷ್ಟೆ ಅಲ್ಲದೇ, ಚಿತ್ರಕ್ಕೆ ಕಥೆಯನ್ನೂ ಬರೆದಿದ್ದು ಅಮೃತ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ಚಿತ್ರದ ಪ್ರಧಾನ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ರವಿಶಂಕರ್ ಕೂಡ ಮುಖ್ಯ ಪಾತ್ರದಲ್ಲಿದ್ದು ನಟ ಸೂರಜ್ ಮತ್ತು ನಾಟಕ ಕಲಾವಿದ ಲೇಖಾ ಕೂಡ ತಂಡದ ಭಾಗವಾಗಿದ್ದಾರೆ.

ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ಡಿಒಪಿ ವಿಘ್ನೇಶ್ ರಾಜ್ ಕ್ಯಾಮೆರಾ ವರ್ಕ್ ಹಾಗೂ ರಿತ್ವಿತ್ ಎಡಿಟಿಂಗ್ ವರ್ಕ್ ಕೆಲಸದಲ್ಲಿ ತೊಡಗಿದ್ದಾರೆ.

Leave a Reply

Your email address will not be published. Required fields are marked *

You May Also Like

ಬಿಸಿಯೂಟದ ಬದಲು ಅಹಾರ ನೀಡಿ : ಹೈಕೋರ್ಟ್ ಸೂಚನೆ

ಕೊರೊನಾ ಸೋಂಕು ಮಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟದ ಬದಲಿಗೆ ಅಹಾರ ಧಾನ್ಯ ವಿತರಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಅತಿಥಿ ಉಪನ್ಯಾಸಕ ನೇಮಕಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್

ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 1,835 ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಂತೆ ಸರ್ಕಾರ ಆದೇಶಿಸಿದೆ.

ಕೊರೊನಾ ವಾರಿಯರ್ಸ್ ನಿಜವಾದ ಹಿರೋಗಳು: ಜನಜಾಗೃತಿಯ ಸಂದೇಶ ನೀಡುವ ಚಿತ್ರರಂಗದ ದಿಗ್ಗಜರ ದೃಶ್ಯರೂಪಕ

ಕೊರೊನಾ ಜಾಗೃತಿಗಾಗಿ ಕನ್ನಡ ಚಿತ್ರರಂಗದ ದಿಗ್ಗಜರು ಸಂದೇಶ ನೀಡಿದ ದೃಶ್ಯ ರೂಪಕವನ್ನು ನೀವು ನೋಡಬಹುದು.

ಪತಿಯ ಮೇಲೆಯೇ ಮಟನ್ ಸಾಂಬಾರ್ ಎರಚಿದ ಪತ್ನಿ!

ತುಮಕೂರು: ಪತಿಯ ಮೇಲೆ ಪತ್ನಿಯೇ ಬಿಸಿಯಾದ ಮಟನ್ ಸಾಂಬಾರ್ ಸುರಿದು ಹಲ್ಲೆಗೆ ಯತ್ನಿಸಿದ ಘಟನೆ ತಿಪಟೂರು…