ಗದಗ: ಸಾವರ್ಕರ್ ಹೆಸರಿಡದೇ, ರಾಹುಲ್ ಗಾಂಧಿ, ಸೋನಿಯಾಗಾಂಧಿ ಹೆಸರಿಡಬೇಕಾ? ಸಾವರ್ಕರ್ ತ್ಯಾಗ ಬಲಿದಾನ, ಕಾಲಾಪಾನಿ ಶಿಕ್ಷೆ, ಸೆಲ್ಯುಲಾರ್ ಜೈಲುವಾಸದ ಬಗ್ಗೆ ಕಾಂಗ್ರೆಸ್ ನವರು ತಿಳಿಯಲಿ ಎಂದು ಗದಗನಲ್ಲಿ ಗಣಿ‌ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ವೀರ ಸಾವರ್ಕರದ ಬಗ್ಗೆ ಮಾತಾಡುವ ಯೋಗ್ಯತೆ ಒಬ್ಬ ಕಾಂಗ್ರೆಸ್ಸಿಗರಿಗೂ ಇಲ್ಲ
ಕಾಂಗ್ರೆಸ್ ನವರಿಗೆ ನೆಹರೂ ಸಂಸ್ಕ್ರತಿಯ ಮಾತ್ರ ಗೊತ್ತಿದೆ. ತ್ಯಾಗ ಬಲಿದಾನ ಮಾಡಿದ ಸುಭಾಷ್ ಚಂದ್ರಬೋಸ್, ವೀರ ಸಾವರ್ಕರ್, ಸರ್ದಾರ್ ವಲ್ಲಭಬಾಯಿ ಪಟೇಲ್, ಲೋಜಮಾನ್ಯ ತಿಲಕ ಇವರು ಯಾರೂ ಕಾಂಗ್ರೆಸ್ಸಿಗರಿಗೆ ಗೊತ್ತಿಲ್ಲ.
ಸಾವರ್ಕರ್ ಬಿಜೆಪಿಯವರಾ? ಅಥವಾ ಆ ಸಂದರ್ಭದಲ್ಲಿ ಬಿಜೆಪಿ ಇತ್ತಾ? ರಾಜೀವ್ ಗಾಂಧಿ ಮೆಡಿಕಲ್ ಕಾಲೇಜ್ ರಾಜೀವ್ ಗಾಂಧಿ ರೋಡ್ ಅಂತೆಲ್ಲಾ ಇದೆ. ಎಲ್ಲಾದ್ರೂ ನರೇಂದ್ರ ಮೋದಿ ರೋಡ್, ಯಡಿಯೂರಪ್ಪ ರೋಡ್ ಅಂತ ಇದೆಯಾ? ದೇಶವನ್ನು ಕಾಂಗ್ರೆಸ್ ನವರೇವ ಕಟ್ಟಿ ಬೆಳೆಸಿ ಉತ್ತುಂಗಕ್ಕೆ ತಂದ್ರಾ.? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನವರು ಹೇಳೋದು ಆಚಾರ ತಿನ್ನೋದು ಮಾತ್ರ ಬದನೆಕಾಯಿ ಎಂದು ಕುಟುಕಿದರು.

3 comments
  1. ಅಯ್ಯೊ ಸಿ ಸಿ ಪಾಟಿಲ್ರ ಮೊದಲು ಗದಗ ಮುಂಡರಗಿ ತುಂಗಭದ್ರಾ ನದಿಯಲ್ಲಿ ನಡೆಯುವ ಅಕ್ರಮ ಮರಳು ದಂದೆಗೆ ನಿಮ್ಮ ಹೆಸರು ಬರುತ್ತಿದೆ ಅದನ್ನ ಕ್ಲಿಯರ್ ಮಾಡಿ ಆ ಮೆಲೆ ಕಾಂಗ್ರೇಸ್ ಬಗ್ಗೆ ಮಾತಾಡುವಂತೆ

  2. ನಿಮ್ಮ ಕಣ್ಣಿ ಗೆ ಕರ್ನಾಟಕದವರು ಯಾರು ಕಾಣಲ್ಲವೇ. ಉತ್ತರ ಭಾರತದ ಕೋತಿಗಳೇ ಬೇಕೇ ನಿಮಗೆ. ಸಾವರ್ಕರ್
    ಏನು ಮಾಡಿದನೇ, ಇಲ್ಲ ಸೋನಿಯಾ ಅಥವಾ ರಾಹುಲ್ ಏನು ಮಾಡಿದ್ದಾರೆ

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು ಮತ್ತೆ 69 ಕೊರೋನಾ ಕೇಸ್..!

ಇಂದು ಸಂಜೆ ಬಿಡುಗಡೆ ಮಾಡಿದ ಹೆಲ್ಥ್ ಬುಲಿಟಿನ್ ನಲ್ಲಿ ರಾಜ್ಯದಲ್ಲಿ ಇಂದು ಮತ್ತೆ 69 ಕೇಸ್ ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ 1056ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ದೇಶದಲ್ಲಿ 131 ಕೋಟಿ ಜನಸಂಖ್ಯೆಯಲ್ಲಿ 1 ಕೋಟಿ ಕೊರೋನಾ ಟೆಸ್ಟ್!

ನವದೆಹಲಿ: ಒಂದೇ ದಿನ ದೇಶದಲ್ಲಿ 24,248 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೇ, ಮಹಾಮಾರಿಗೆ 425 ಜನರು…

ಅ.25ರಂದು ನೀಲಾನಗರ ದುರ್ಗಾದೇವಿ ಜಾತ್ರೆ ಸರಳವಾಗಿ ಆಚರಣೆ

ಸಮೀಪ ನೀಲಾನಗರದ ದುರ್ಗಾದೇವಿ ಜಾತ್ರೆಯನ್ನು ಸರಳವಾಗಿ ಆಚರಣೆ ಮಾಡಲಾಗುವುದು ಎಂದು ಬಂಜಾರ ಪೀಠಾಧಿಪತಿ ಕುಮಾರ ಮಹಾರಾಜ ತಿಳಿಸಿದರು.

ರಾಜ್ಯದಲ್ಲಿಂದು 337 ಕೊರೊನಾ ಪಾಸಿಟಿವ್, ಮೃತ ಪಟ್ಟವರ ಸಂಖ್ಯೆ 10 : ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 337 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 8281…