ಬೆಂಗಳೂರು: ಇಂದು ಸಂಜೆ ಬಿಡುಗಡೆ ಮಾಡಿದ ಹೆಲ್ಥ್ ಬುಲಿಟಿನ್ ನಲ್ಲಿ ರಾಜ್ಯದಲ್ಲಿ ಇಂದು ಮತ್ತೆ 69 ಕೇಸ್ ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ 1056ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.
ಈಗಾಗಲೇ 480 ಜನರು ಡಿಸ್ಚಾರ್ಜ್ ಆಗಿದ್ದು, 539 ಕೇಸ್ ಚಾಲ್ತಿಯಲ್ಲಿವೆ. ದಕ್ಷಿಣ ಕನ್ನಡ-15, ಮಂಡ್ಯ-13, ಬೆಂಗಳೂರು-11, ಬೀದರ್-7, ಚಿತ್ರದುರ್ಗ-2, ಕಲಬುರಗಿ-3, ಉಡುಪಿ-4, ಹಾಸನ-4 ಹಾಗೂ ಉತ್ತರ ಕನ್ನಡ, ಶಿವಮೊಗ್ಗ, ಕೋಲಾರ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿವೆ. ಈಗಾಗಲೇ ರಾಜ್ಯದಲ್ಲಿ 539 ಪ್ರಕರಣ ಚಾಲ್ತಿಯಲ್ಲಿದ್ದು 480 ಕೇಸ್ ಡಿಸ್ಚಾರ್ಜ್ ಆಗಿದ್ದಾರೆ. 35 ಜನರು ಸಾವನ್ನಪ್ಪಿದ್ದರು ಎಂದು ಸಂಜೆಯ ಹೆಲ್ತ್ ಬುಲಿಟಿನ್ ನಲ್ಲಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Leave a Reply

Your email address will not be published. Required fields are marked *

You May Also Like

ನಟ ಚಿರು ಸಮಾಧಿಗೆ ಕುಟುಂಬಸ್ಥರಿಂದ ಪೂಜೆ

ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿ ಹಿನ್ನಲೆಯಲ್ಲಿ ಕುಟುಂಬಸ್ಥರು ಬೆಂಗಳೂರಿನ ಹೊರವಲಯ ಕನಕಪುರದಲ್ಲಿರುವ ಧ್ರುವ ಸರ್ಜಾ ಫಾರ್ಮ್ ಹೌಸ್ಗೆ ತೆರಳಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

ನಿಮ್ಮ ಜಿಲ್ಲೆ ಯಾವ ಝೋನ್ ನಲ್ಲಿದೆ ಅಂತ ತಿಳಿದುಕೊಳ್ಳಿ

ಮೇ.3ರ ನಂತರ ರಾಜ್ಯದ 6 ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳನ್ನು ಗ್ರೀನ್ ಹಾಗೂ ಯಲ್ಲೋ ಝೋನ್ ಗಳಾಗಿ ವಿಂಗಡಿಸಲಾಗಿದೆ. ರೆಡ್ ಮತ್ತು ಯಲ್ಲೋ ಝೋನ್ ಗಳಲ್ಲಿ ಮೇ.3ರ ನಂತರ ಲಾಕ್ ಡೌನ್ ಸ್ವಲ್ಪ ಸಡಿಲಗೊಳ್ಳುವ ಸಾದ್ಯತೆ ಇದೆ. ಯಾವ ಜಿಲ್ಲೆ ಯಾವ ಝೋನ್ ನಲ್ಲಿದೆ ಎನ್ನುವ ಮಾಹಿತಿ ಇಲ್ಲಿದೆ..

ಪತ್ರ ಚಳುವಳಿಗೆ ಕರೆ ನೀಡಿದ ಭೋವಿ ಶ್ರೀಗಳು

ಚಿತ್ರದುರ್ಗ: ಭೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ವಿಚಾರ ಈ ಸಮುದಾಯಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ರಾಜ್ಯ ಸರ್ಕಾರದ ವಿವರಣೆ ಹೀಗಿದೆ: “ಭೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ವಿಚಾರವಾಗಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ, ‘ಸೂಕ್ತ ಪ್ರಾಧಿಕಾರದ (NCSC) ಮುಂದೆ ಹಾಜರಾಗಲು’ ಸೂಚನೆ ನೀಡಿ, ಸರ್ವೋಚ್ಛ ನ್ಯಾಯಾಲಯ ಸದರಿ ಅರ್ಜಿಯನ್ನು 14-2-2020ರಂದು ವಿಲೇವಾರಿ ಮಾಡಿದೆ” ಎಂದು ಹೇಳಲಾಗಿದೆ. ಜೊತೆಗೆ, “ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ, ದೆಹಲಿ, ಇವರ ಅರ್ಜಿಯನ್ನು ಸ್ವೀಕರಿಸಿ, NCSC ಇಂದ, ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ, ಬೆಂಗಳೂರು. ಇವರಿಗೆ ಬರೆದ ಪತ್ರ ಸಂಖ್ಯೆ 36/inclusion & exclusion-3/2020/ssw ದಿನಾಂಕ:12-3-2020ರಲ್ಲಿ ಎಲ್ಲಿಯೂ ಕರ್ನಾಟಕ ರಾಜ್ಯದ ಭೋವಿ, ಲಂಬಾಣಿ, ಕೊರಮ ಹಾಗೂ ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಟ್ಟಿರುವ ಬಗ್ಗೆ ತಿಳಿಸಿಲ್ಲ” ಎಂದು ಹೇಳಿದೆ.

ಶೀಘ್ರವಾಗಿ ಎ.ಪಿ.ಎಂ.ಸಿ ಮಾರುಕಟ್ಟೆ ಪ್ರಾರಂಭಿಸಿಲು: ಮನವಿ

ಶಿರಹಟ್ಟಿ ಪಟ್ಟಣವು ತಾಲ್ಲೂಕು ಕೇಂದ್ರವಾಗಿದ್ದು, ಸ್ಥಳೀಯವಾಗಿ ಎಪಿಎಂಸಿ ಸ್ಥಾಪನೆ ಮಾಡಬೇಕೆಂದು ಮಂಗಳವಾರ ತಹಶಿಲ್ದಾರ ಮೂಲಕ ಕರ್ನಾಟಕ ಪ್ರಜಾಪರ ವೇದಿಕೆ ತಾಲೂಕ ಘಟಕದ ವತಿಯಿಂದ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.