ಮಸ್ಕಿ: ಸಮೀಪ ನೀಲಾನಗರದ ದುರ್ಗಾದೇವಿ ಜಾತ್ರೆಯನ್ನು ಸರಳವಾಗಿ ಆಚರಣೆ ಮಾಡಲಾಗುವುದು ಎಂದು ಬಂಜಾರ ಪೀಠಾಧಿಪತಿ ಕುಮಾರ ಮಹಾರಾಜ ತಿಳಿಸಿದರು.

ದಸರಾ ಹಬ್ಬದ ನಿಮಿತ್ಯ ಪ್ರತಿ ವರ್ಷ ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತಿತ್ತು, ಈ ಭಾರಿ ಕೊರೊನಾ ಹಿನ್ನೆಲೆಯಲ್ಲಿ ಅ.25ರಂದು ದೇವಿಯ ಮೂರ್ತಿಗೆ ಅಲಂಕರಿಸಿ ಪೂಜೆ ಪುರಸ್ಕಾರ ಅಭಿಷೇಕ ಮಾಡಲಾಗುವುದು.

ಯಾವುದೇ ವೇದಿಕೆ ಕಾರ್ಯಕ್ರಮ, ‌ಸಾಮಾಜಿಕ ನಾಟಕ ಇರುವುದಿಲ್ಲ. ಅಂದಿನ ದಿನ ದೇವಿಯ ದರ್ಶನ ಪಡೆಯಲು ಬರುವ ಭಕ್ತರು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ಜಾತ್ರೆ ಆಚರಣೆ ಮಾಡಬೇಕೆಂದು ಮನವಿ ಮಾಡಿದರು.

ರಾಯಚೂರು, ಯಾದಗಿರಿ ಜಿಲ್ಲೆಯಿಂದ ಬರುವ ಭಕ್ತರು ಜಾತ್ರೆ ಇಲ್ಲ ಎಂದು ಗೊಂದಲಕ್ಕೆ ಒಳಗಾಗಬಾರದು.‌ ದೇವಿಯ ಜಾತ್ರೆ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

You May Also Like

ದಲಿತರು ಕುಡಿದ ಚಹಾ ಕಪ್ ತೊಳೆದ ತಹಶೀಲ್ದಾರ

ಯಾರಿಗೆ ಬಂತು? ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ‍್ಯ, ಸಿದ್ಧಲಿಂಗಯ್ಯನವರ ಈ ಕವಿತೆ ಕೇಳುತ್ತಲೇ ಅನೇಕರ ಯೋಚನೆ ಅಸ್ಪೃಶ್ಯತೆ ಕಡೆಗೆ ಹೊರಳುತ್ತವೆ. ಅಸ್ಪೃಶ್ಯತೆ ಇನ್ನು ಜೀವಂತವಿರುವ ಇಂತಹ ವರ್ತಮಾನದಲ್ಲಿ ತಹಶೀಲ್ದಾರರೊಬ್ಬರು ಅಸ್ಪೃಶ್ಯತೆ ಬಗ್ಗೆ ಜಾಗೃತಿ ಮೂಡಿಸಲು ದಲಿತರು ಕುಡಿದ ಚಹ ಕಪ್ ತೊಳೆದರೆ? ಎಸ್! ಮುಂಡರಗಿ ತಹಶೀಲ್ದಾರ್ ಆಶಪ್ಪ ಪೂಜಾರ್ ಅವರು ಮಾಡಿದ್ದು ಅದನ್ನೇ.

ಕಳ್ಳರ ಕಣ್ಣು ಈಗ ಆಡಿನ ಮ್ಯಾಲೆ…!!! ಸ್ಕಾಪಿ೯ಯೋದಲ್ಲಿ ಬಂದು ಆಡು ಕದ್ದ ಖದೀಮರು?

ಉತ್ತರಪ್ರಭ ಸುದ್ದಿನಿಡಗುಂದಿ: ಕಳ್ಳತನದ ಹಾವಳಿ ಹಾಡುಹಗಲೇ ಶುರುವಾಗಿವೆ. ಜಿಲ್ಲೆಯಲ್ಲಿಗ ಮಕ್ಕಳ ಕಳ್ಳತನದ ಗುಲ್ಲು ಒಂದಡೆ ಆತಂಕ…

ಜ್ವರದಿಂದ ಬಳಲುತ್ತಿದ್ದಾರೆ ಸಿದ್ದರಾಮಯ್ಯ: ಎರಡು ದಿನದ ಕಾರ್ಯಕ್ರಮಗಳು ರದ್ದು

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಅವರು ಎರಡು ದಿನಗಳ ಕಾಲ ವಿಶ್ರಾಂತಿಯಲ್ಲಿ ಇರಲಿದ್ದಾರೆ.

ಕೈಗೆ ಸಿಕ್ಕ ಅಧಿಕಾರಿಗೆ ಟ್ರ‍್ಯಾಕ್ಟರ್ ನಲ್ಲಿ ರಸ್ತೆ ದರ್ಶನ: ಕೆಲವು ತಿಂಗಳಕ್ ಕಿತ್ತು ಹೋಗೈತ್ಯಂತ ದೊಡ್ಡೂರು ರಸ್ತೆ!

ಹೇಳಿ, ಹೇಳಿ ಸಾಕಾಗಿ ಹೋಯ್ತು. ಕಾಮಗಾರಿ ಮುಗಿದ್ ಒಂದ್ ತಿಂಗಳದಾಗ ಮಾಡಿದ್ ರೋಡ್ ಹಳ್ಳಾ ಹಿಡಿದೈತಿ. ಬರ್ರಿ.. ನೀವಾರಾ ನೋಡ್ ಬರ್ರಿ.., ಕೆಲ್ಸಾ ಮಾಡಿದ್ ಗುತ್ತಿಗೆದಾರರಾದ್ರು ಯಾರು? ಹಿಂಗೆಲ್ಲ ಹೇಳಿ ಅಧಿಯಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡ ಘಟನೆ ಲಕ್ಷ್ಮೇಶ್ವರದಲ್ಲಿ ನಡೆಯಿತು.