ಬೆಂಗಳೂರು: ರಾಜ್ಯದಲ್ಲಿಂದು 337 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 8281 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 230. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 5210 ಕೇಸ್ ಗಳು. ರಾಜ್ಯದಲ್ಲಿ 2943 ಸಕ್ರೀಯ ಪ್ರಕರಣಗಳಿವೆ.
ಇಂದು ಕೊರೊನಾ ಸೋಂಕಿನಿಂದ 10 ಜನರು ಮೃತಪಟ್ಟಿದ್ದು, ಮೃತರ ಸಂಖ್ಯೆ 124 ಕ್ಕೆ ಏರಿಕೆಯಾಗಿದೆ. ಇಂದು ದೃಢಪಟ್ಟ ಸೋಂಕಿತರಲ್ಲಿ 93 ಕೇಸ್ ಗಳಿಗೆ ಅಂತರಾಜ್ಯ ಪ್ರವಾಸದ ಹಿನ್ನೆಲೆ ಇದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲಿಟಿನ್ ನಲ್ಲಿ ತಿಳಿಸಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು.?
ಬೆಂಗಳೂರು ನಗರ- 138
ಕಲಬುರಗಿ- 52
ಬಳ್ಳಾರಿ- 37
ಹಾಸನ- 18
ದಕ್ಷಿಣ ಕನ್ನಡ- 13
ದಾವಣಗೆರೆ- 12
ಉಡುಪಿ- 11
ಬೀದರ್- 10
ಮೈಸೂರು- 06
ಕೊಪ್ಪಳ- 06
ಯಾದಗಿರಿ- 04
ಕೋಲಾರ- 04
ಬೆಂಗಳೂರು ಗ್ರಾಮಾಂತರ- 04
ಮಂಡ್ಯ-03
ಧಾರವಾಡ- 03
ಚಿಕ್ಕಬಳ್ಳಾಪುರ- 03
ಬಾಗಲಕೋಟೆ- 03
ರಾಮನಗರ- 03
ತುಮಕೂರು- 02
ಚಿಕ್ಕಮಗಳೂರು- 02
ಬೆಳಗಾವಿ- 01
ಉತ್ತರ ಕನ್ನಡ- 01
ಶಿವಮೊಗ್ಗ- 01

Leave a Reply

Your email address will not be published. Required fields are marked *

You May Also Like

ಒಂದೆ ಬೀದಿಯಲ್ಲಿ 42 ಕೊರೋನಾ ಪಾಸಿಟಿವ್

ಇಲ್ಲಿಯ ಬೀದಿಯೊಂದರಲ್ಲಿಯೇ ದಾಖಲೆಯ 42 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.ಟಿ, ಕಾಫಿ ಮತ್ತಿತರ ಸ್ನ್ಯಾಕ್ಸ್ ವಿತರಿಸುತ್ತಿದ್ದ ಇಬ್ಬರಲ್ಲಿ ಕೊರೊನಾ ದೃಢಪಟ್ಟಿತ್ತು. ಆನಂತರ ಇಡೀ ಬೀದಿಗೆ ಅಂಟಿಕೊಂಡಿದೆ.

ಲಕ್ಷ್ಮೇಶ್ವರದಲ್ಲಿ ಆಹಾರ ಕಿಟ್ ವಿತರಿಸಿದ ಶಾಸಕ ಲಮಾಣಿ

ಲಕ್ಷ್ಮೇಶ್ವರ: ಶಾಸಕ ರಾಮಣ್ಣ ಲಮಾಣಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ಸೋಂಕಿತರು ಬೇಗ ಗುಣಮುಖರಾಗಲೆಂದು ಪೌಷ್ಟಿಕ ಆಹಾರ ಕಿಟ್ ಹಾಗೂ ಮಾಸ್ಕ್ ವಿತರಣೆ ಮಾಡಿದರು.

ಮನೆ ಬಾಗಿಲಿಗೆ ಬರಲಿದೆ ಅಯ್ಯಪ್ಪಸ್ವಾಮಿ ಪ್ರಸಾದ

450 ರೂಪಾಯಿ ಪಾವತಿಸಿದರೆ ಮನೆಬಾಗಿಲಿಗೆ ಅಯ್ಯಪ್ಪ ಸ್ವಾಮಿ ಪ್ರಸಾದ ತಲುಪಿಸಲಾಗುತ್ತದೆ. ಭಾರತೀಯ ಅಂಚೆ ಇಲಾಖೆ ತಿರುವಾಂಕೂರು ದೇವಸ್ಥಾನ ಮಂಡಳಿಯೊಂದಿಗೆ ಈ ಬಗ್ಗೆ ಒಪ್ಪಂದ ಮಾಡಿಕೊಂಡಿದೆ.