ಕೊರ್ಲಹಳ್ಳಿ ಬಳಿ ಧರೆಗುರುಳಿದ ಮರ, ಮನೆಗಳು

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಹಲವೆಡೆ ಭಾರಿ ಪ್ರಮಾಣದ ಮಳೆ ಮಿಶ್ರಿತ ಗಾಳಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ರಾಜ್ಯ ಹೆದ್ದಾರಿಗಳಲ್ಲೆ ತಗ್ಗು ದಿನ್ನೆಗಳ ಸಾಮ್ರಾಜ್ಯ

ಫಿರೋಜ ಮೋಮಿನ್ಗಜೇಂದ್ರಗಡ: ಪಟ್ಟಣದಿಂದ ಗದಗ, ಇಲಕಲ್ ಮತ್ತು ರೋಣ ಮಾರ್ಗಗಳಿಗೆ ಸಂಪರ್ಕಿಸುವ ಮೂರು ರಾಜ್ಯ ಹೆದ್ದಾರಿಗಳು…

ಆದರಹಳ್ಳಿಗೆ ಹಾದಿ ಯಾವುದು..? ದೇವಿಹಾಳಕ್ಕೆ ಹೋಗುವ ದಾರಿ ಎಲ್ಲಿ?

ರಸ್ತೆಗಳು ನಿರ್ಮಾಣ ಮಾಡಿದ ಮೇಲೆ ನಿರ್ಮಿಸಿದ ರಸ್ತೆಗಳ ಮೇಲೆ ಇಷ್ಟೆ ಸಾಮಾರ್ಥ್ಯದ ವಾಹನಗಳು ಓಡಾಡಬೇಕು ಎನ್ನುವ ನಿಯಮವಿದೆ. ಆದರೆ ಅದ್ಯಾವ ನಿಉಮವನ್ನು ಪಾಲಿಸದೇ ಇರುವ ಕಾರಣಕ್ಕೆ ರಸ್ತೆಯೊಂದು ಹಳ್ಳ ಹಿಡಿದಿದೆ.

ಉತ್ತರಪ್ರಭ ಫಲಶೃತಿ: ಏನರಾ ಆಗ್ಲಿ ಧೂಳಿಗೆ ತೆರಿಗೆ ಕಟ್ಟೊ ಕಾಟ ತಪ್ಪಿದ್ರ ಸಾಕು..!

ಮನೆ, ಜಾಗೆ, ನೀರು, ಕಟ್ಟಡ ಹೀಗಿಲ್ಲ ತೆರಿಗೆ ಕಟ್ಟುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಅಷ್ಟೆ ಏಕೆ ಸ್ವತಃ ಕಟ್ಟಿದ್ದೇವೆ. ಆದರೆ ಇದ್ಯಾವುದಿದು ಧೂಳಿಗೆ ಕರ ಕಟ್ಟುವುದು ಅಂದ್ಕೊಂಡ್ರಾ?

ಕುಡಿಯೋ ನೀರಿಗೆ ಆದ್ರಳ್ಳಿ ಜನ್ರ ಪರದಾಟ: ಹತ್ತು ದಿನದ್ ಹೊತ್ತಾತು ಬೊಗಸಿ ನೀರು ಬಂಗಾರ ಆಗೈತಿ..!

ನಮ್ಗ ನೀರ್ ಇಲ್ದ ಬಾಳ್ ತೊಂದರಿ ಆಗೈತಿ, ಕಾಲಿಲ್ಲದವ್ರು ನಾವ್, ನೀರ್ ಹ್ಯಾಂಗ್ ತರಬೇಕ್ರಿ, ನಮಗ್ಯಾರು ದಿಕ್ಕಿಲ್ಲ. ನೀರಿನ ಸಮಸ್ಯೆ ಬಗೆಹರಿಸ್ರಿ ಅಂತ ಪಂಚಾಯತಿಗೆ ಹೋಗಿ ಹೇಳಿದ್ರ ಪಂಚಾಯತಿಯವ್ರು ದರಕಾರಕ್ಕ ತುಗೋವಲ್ರು. ಹತ್ತು ದಿನದ್ ಹೊತ್ತಾತು. ಹಿಂಗ್ ಬಾಳ್ ಸರಿ ಮೋಟರ್ ಸುಡತೈತಿ. ಆದ್ರ ಇದಕ್ ಯಾವುದು ಶಾಶ್ವತ ಪರಿಹಾರ ಇಲ್ರಿ. ಹಿಂಗಂತ ಹೇಳಿದ್ದು 70ರ ಆಸುಪಾಸಿನಲ್ಲಿರುವ ಅಜ್ಜಿ.

ವಿವಿಧ ಬೇಡಿಕೆ ಇಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆರ ಮನವಿ

ಮುಖ್ಯವಾಗಿ ಜಿಲ್ಲೆಯಲ್ಲಿನ ಆಯಾ ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗು ಸಹಾಯಕಿಯರು ಎದುರಿಸುತ್ತಿರುವ ಸಮಸ್ಯೆಗಳ ಜೊತೆಗೆ ರಾಜ್ಯಮಟ್ಟದಲ್ಲಿನ ವಿವಿಧ ಬೇಡಿಕೆ ಇಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಜಿಲ್ಲಾ ಸಮಿತಿಯಿಂದ ಸೋಮವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಶಾಸಕರೇ, ಆದರಳ್ಳಿ ಗ್ರಾಮದ ಬಗ್ಗೆ ಇಷ್ಟೇಕೆ ನಿರಾಸಕ್ತಿ?

ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ತಾಲೂಕಿನ ಆದರಹಳ್ಳಿ ಗ್ರಾಮದ ವಡ್ಡರ್ ಪಾಳ್ಯದ ಹಲವು ಮನೆಗಳಿಗೆ ಚರಂಡಿ ನೀರು ನುಗ್ಗಿದೆ.

ರಸ್ತೆ ಗುಂಡಿಯಲ್ಲಿ ಸಿಲುಕಿದ ಬಸ್, 2 ಗಂಟೆ ಸಂಚಾರ ಸ್ಥಗಿತ; ಪ್ರಯಾಣಿಕರ ಪರದಾಟ..!

ಹೋಬಳಿ ವ್ಯಾಪ್ತಿಯಯಲ್ಲಿ ಮೊದಲೇ ಹಾಳಾಗಿದ್ದ ರಸ್ತೆಗಳು ಈಗ ಸತತವಾಗಿ ಸುರಿಯುತ್ತಿರುವ ಮಳೆಗೆ ಮತ್ತಷ್ಟು ಹಾಳಾಗಿದ್ದು ಅಪಘಾಕ್ಕೆ ಆಹ್ವಾನ ನೀಡುತ್ತಿವೆ. ಬುಧವಾರ ಬೆಳಿಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಟ್ರಾಕ್ಟರ್‌ವೊಂದು ರಸ್ತೆಯಲ್ಲಿ ಆಳವಾಗಿದ್ದ ಗುಂಡಿಯಲ್ಲಿ ಸಿಲುಕಿ ಸ್ವಲ್ಪದರಲ್ಲೆ ಅಪಾಯದಿಂದ ಪಾರಾಗಿವೆ.

ಲಕ್ಷ್ಮೇಶ್ವರ: ಕೆಸರು ಗದ್ದೆಯಂತಾದ ರಸ್ತೆಗಳು

ಲಕ್ಷ್ಮೀ ನಗರದ 5 ಮತ್ತು 6 ನೇ ವಾರ್ಡಿನ ರಸ್ತೆಗಳು ಕೆಸರುಗದ್ದೆಯಂತಾಗಿದೆ. ಮಳೆಯಿಂದಾಗಿ ಓಡಾಡುವುದಕ್ಕೆ ತೊಂದರೆ ಆಗುತ್ತಿದೆ. ಮನೆಯಿಂದ ಹೊರಗಡೆ ಬರುವುದಕ್ಕೆ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ವಾಹನ ಸವಾರರ ಗೋಳಂತು ಹೇಳತೀರದು. ರಸ್ತೆಯಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿ ರಸ್ತೆಗಳು ಕೆಸರು ಗದ್ದೆಯಂತಾಗಿವೆ.

ಹುಬ್ಬಳ್ಳಿ :ಕೈಯಲ್ಲಿ ಜೀವ ಹಿಡಿದುಕೊಂಡು ಹೋಗಬೇಕು ಜಯನಗರದಲ್ಲಿ

ಅದು ವಾಣಿಜ್ಯ ನಗರಿ ಹುಬ್ಬಳ್ಳಿಯ ಹೃದಯ ಭಾಗ, ಅಲ್ಲಿ ನೀವು ಏನಾದರೂ ಸಂಚಾರ ಮಾಡಬೇಕು ಎಂದರೆ ಸ್ವಲ್ಪ ಎಚ್ಚರಿಕೆ ಇರಬೇಕು. ಸ್ವಲ್ಪ ಅಪ್ಪ ತಪ್ಪಿದರೆ ಸೊಂಟ,‌ಅಥವಾ ಕೈಕಾಲು ಮುರಿಯುವುದು ಗ್ಯಾರಂಟಿ. ಇದು ನಗರದ ಕಿಮ್ಸ್ ಆಸ್ಪತ್ರೆಯ ಎದುರಿಗಿನ ಜಯನಗರ ರಸ್ತೆ. ಮಳೆಯಾದರೂ ಅಂತೂ ಮಳೆಯ ನೀರು ಮನೆ ತುಂಬೆಲ್ಲಾ ನುಗ್ಗುತ್ತವೆ.

ಮುಂಡರಗಿ ಪುರಸಭೆ ಮುಖ್ಯಾಧಿಕಾರಿ ನಿಮ್ಮ ಓಣಿಯಲ್ಲೂ ಕಸ ಹಾಕಿರಬಹುದು ನೋಡಿ…!

ಮುಂಡರಗಿ: ಯಾವುದಕ್ಕೂ ಒಂಚೂರು ನೀವು ನಿಮ್ಮ ಮನೆಯಿಂದ ಹೊರಗೆ ಬಂದು ನೋಡಿ ಬೀಡಿ. ಯಾಕಂದ್ರೆ ನಿಮ್ಮ…

ಬೀದಿಗೆ ಬಂದ ಕಾರ್ಮಿಕರು…!

ಲಾಕ್ ಡೌನ್ ನಿಂದ ಬಡವರ ಬದುಕು ಬೀದಿಗೆ ಬಂದು ನಿಂತಿದೆ. ಸಕ್ಕರೆ ಕಾರ್ಖಾನೆಯೊಂದರ 350ಕ್ಕೂ ಹೆಚ್ಚು ಕಾರ್ಮಿಕರು ಸದ್ಯ ಇದರಿಂದಾಗಿ ಬೀದಿಗೆ ಬಂದಿದ್ದಾರೆ.