ಗದಗ: ಮುಖ್ಯವಾಗಿ ಜಿಲ್ಲೆಯಲ್ಲಿನ ಆಯಾ ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗು ಸಹಾಯಕಿಯರು ಎದುರಿಸುತ್ತಿರುವ ಸಮಸ್ಯೆಗಳ ಜೊತೆಗೆ ರಾಜ್ಯಮಟ್ಟದಲ್ಲಿನ ವಿವಿಧ ಬೇಡಿಕೆ ಇಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಜಿಲ್ಲಾ ಸಮಿತಿಯಿಂದ ಸೋಮವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

2017 ರಿಂದ ಮೊಟ್ಟೆ ಮತ್ತು ತರಕಾರಿ ಹಣವನ್ನು ನರಗುಂದ ತಾಲೂಕಿನಲ್ಲಿ ಸಮರ್ಪಕವಾಗಿ ಬಿಡುಗಡೆ ಮಾಡಿರುವುದಿಲ್ಲ. ಇದರಿಂದ ಮೊಟ್ಟೆ ಮತ್ತು ತರಕಾರಿಗಳನ್ನು ಕಾರ್ಯಕರ್ತೆಯರು ಸಾಲಾ ಮಾಡಿ ಖರೀದಿ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಹಾಗು ಮುಂಡರಗಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಹಾಗು ಸಹಾಯಕರಿಗೆ 2018ರಲ್ಲಿ ಹೆಚ್ಚುವರಿಯಾದ ಗೌರವಧನ ಇಲ್ಲಿಯವರೆಗೂ ಬಿಡುಗಡೆಯಾಗಿರುವುದಿಲ್ಲ. ಉಳಿದ ರೋಣ ಹಾಗು ನರಗುಂದ ತಾಲೂಕುಗಳ ಅಂಗನವಾಡಿ ಕಾರ್ಯಕರ್ತೆ ಹಾಗು ಸಹಾಯಕರಿಗೆ ಸಂಪೂರ್ಣ ಹೆಚ್ಚುವರಿ ಗೌರವಧನ ಬಂದಿರುವುದಿಲ್ಲ. ಎರಡು ವರ್ಷಗಳಿಂದ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆ ಹಾಗು ಸಹಾಯಕರಿಗೆ ಎನ್‌ಪಿಎಸ್, ಹಣ ಹಿಡಿಗಂಟು ಬಂದಿರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಬೇಡಿಕೆಗಳು

ಅಂಗನವಾಡಿ ಕೇಂದ್ರದಲ್ಲಿಯೇ ಶಾಲಾ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಬೇಕು. 45-46ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಪಾರಸ್ಸುಗಳಂತೆ ತಿಂಗಳಿಗೆ ಕನಿಷ್ಟ ಕೂಲಿ 21,000ಕ್ಕಿಂತ ಕಡಿಮೆ ಇಲ್ಲದಂತೆ ನಿಗದಿ ಮಾಡಬೇಕು. ಅಂಗನವಾಡಿ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ಸಾಮಾಜಿಕ ಭದ್ರತೆ ಸೌಲಭ್ಯಗಳಾದ ನಿವೃತ್ತಿ ವೇತನ ಸೇರಿದಂತೆ ಪ್ರತಿ ತಿಂಗಳು 10,000 ರೂ ಕಡಿಮೆ ಇಲ್ಲದಂತೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಐಸಿಡಿಎಸ್ ಯೋಜನೆಯನ್ನು ಯಾವುದೇ ಸ್ವರೂಪದ ಖಾಸಗೀಕರಣ ಮಾಡಬಾರದು. ಪ್ರತೀ ವರ್ಷದ ಬಜೆಟ್‌ನಲ್ಲಿ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಸಮರ್ಪಕವಾದ ಅನುದಾನ ನೀಡಬೇಕು. ಕಾರ್ಮಿಕ ವಿರೋಧಿ ಕಾರ್ಮಿಕ ಕಾಯ್ದೆಯ ತಿದ್ದುಪಡಿ ಕೃಢಿಕರಣವನ್ನು ಹಿಂಪಡೆಯಬೇಕು. 2020ರ ನೂತನ ಶಿಕ್ಷಣ ನೀತಿಯಿಂದ ಅಂಗನವಾಡಿ ಕೇಂದ್ರಗಳನ್ನು ರಕ್ಷಿಸಬೇಕು. ಪ್ರಾರಂಭಿಕ ಬಾಲ್ಯಾವಸ್ಥೆಯ ಪಾಲನೆ ಮತ್ತು ಶಿಕ್ಷಣ(ಇಸಿಸಿಇ)ಯನ್ನು ಉಚಿತವಾಗಿ ಮತ್ತು ಕಡ್ಡಾಯವಾಗಿ ಅಂಗನವಾಡಿ ಕೇಂದ್ರಗಳಲ್ಲಿ ಕೊಡಲು ಶಾಸನವನ್ನಾಗಿ ಮಾಡಬೇಕು. ರಾಜ್ಯದಲ್ಲಿ ಈಗಾಗಲೇ ನಿವೃತ್ತರಾದವರಿಗೆ ನಿವೃತ್ತಿ ವೇತನ ಬಿಡುಗಡೆ ಮಾಡಿ ಎನ್‌ಪಿಎಸ್ ಲೇಟ್ ವಂತಿಕೆಯನ್ನು ಶೇ.10ಕ್ಕೇ ಏರಿಸಬೇಕು. ಎಲ್ಲರಿಗೂ ಪಿಂಚನಿ ಒದಗಿಸಿ ಎನ್‌ಪಿಎಸ್ ರದ್ದು ಮಾಡಿ ಹಿಂದಿನ ಪಿಂಚಣಿ ಯೋಜನೆಯನ್ನು ಪುನರ್ ಸ್ಥಾಪಿಸಿ ಅಂಗನವಾಡಿ ಕಾರ್ಯಕರ್ತೆ ಹಾಗು ಸಹಾಯಕರಿಗೆ ಸೇವಾ ಜೇಷ್ಠತೆ ಆಧಾರದಲ್ಲಿ ವೇತನ ನಿಗದಿ ಮಾಡಿ. 2018ರ ಹೆಚ್ಚುವರಿ ಗೌರವಧನ ಬಿಡುಗಡೆಗೆ ಮಾಡಬೇಕು ಎಂದು ಆಗ್ರಹಿಸಿದರು.

ಮಾರುಕಟ್ಟೆಯ ದರಕ್ಕೆ ತಕ್ಕಂತೆ ಮೊಟ್ಟೆ ದರವನ್ನು ಹೆಚ್ಚಿಸಲು ಬಾಕಿ ಇರುವ ಮಾತೃಪೂರ್ಣ, ಮಾತೃ ವಂದನ ಪ್ರೋತ್ಸಾಹ ಹಣ ಬಿಡುಗಡೆ ಮಾಡಬೇಕು. ಮೊಟ್ಟೆ, ತರಕಾರಿ ಬಿಲ್ಲುಗಳ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ವೇಳೆ ಸಂಘಟನೆ ಅಧ್ಯಕ್ಷೆ ದುಂಡಮ್ಮ ಬಳಿಗಾರ, ಉಪಾಧ್ಯಕ್ಷ ಡಿ.ಎಚ್.ರಡ್ಡೇರ್, ಸಾವಿತ್ರಿ ಸಬ್ನೀಸ್, ಮಾರುತಿ ಚಿಟಗಿ, ಮಹೇಶ್ ಹಿರೇಮಠ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಸಂಘಟನೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ಕೊರೊನಾಕ್ಕೆ ಬೆಚ್ಚಿಬಿದ್ದ ಕರುನಾಡು: ಸೋಂಕಿತರ ಸಂಖ್ಯೆ 1267, ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 1267 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 13190…

ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ ಇಂದು ನಿಧನ

ಹಿರಿಯ ಸಾಹಿತಿ, ಖ್ಯಾತ ಕವಿ ಎನ್.ಎಸ್.ಲಕ್ಷ್ಮಿನಾರಾಯಣ ಭಟ್ (85) ಶನಿವಾರ ನಿಧನರಾಗಿದ್ದಾರೆ.