ಮೈಸೂರು: ಲಾಕ್ ಡೌನ್ ನಿಂದ ಬಡವರ ಬದುಕು ಬೀದಿಗೆ ಬಂದು ನಿಂತಿದೆ. ಜಿಲ್ಲೆಯ ಬಣ್ಣಾರಿ ಸಕ್ಕರೆ ಕಾರ್ಖಾನೆಯ 350ಕ್ಕೂ ಹೆಚ್ಚು ಕಾರ್ಮಿಕರು ಸದ್ಯ ಇದರಿಂದಾಗಿ ಬೀದಿಗೆ ಬಂದಿದ್ದಾರೆ. ಹಲವು ದಿನದಿಂದ ಸಕ್ಕರೆ ಕಾರ್ಖಾನೆ ಆವರಣದಲ್ಲಿಯೇ ಇದ್ದ ಉತ್ತರ ಭಾರತ ಮೂಲದ ಈ ಕಾರ್ಮಿಕರೀಗ ತಮ್ಮನ್ನು ತವರಿಗೆ ಕಳುಹಿಸಿ ಕೊಡಿ ಎಂದು ನಂಜನಗೂಡು ತಹಶೀಲ್ದಾರ್‌ಗೆ ದುಂಬಾಲು ಬಿದ್ದಿದ್ದಾರೆ.

ತಮಗೆ ಕಳೆದ ಎರಡು ತಿಂಗಳಿಂದ ಸಂಬಳ ನೀಡಿಲ್ಲ. ಹಲವು ದಿನದಿಂದ ಊಟಕ್ಕೂ ಕಷ್ಟಪಡುತ್ತಿದ್ದೇವೆ ಎಂದು ಕಾರ್ಮಿಕರು ನೋವು ವ್ಯಕ್ತಪಡಿಸುತ್ತಿದ್ದಾರೆ. ಉತ್ತರಾಂಚಲ, ಜಾರ್ಖಂಡ್, ಬಿಹಾರದ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

ಚೆಟ್ಟಿನಾಡು ಎಂಬ ಗುತ್ತಿಗೆ ಸಂಸ್ಥೆ ಇವರನ್ನೆಲ್ಲ ಬಿಹಾರ ಮತ್ತು ಉತ್ತರ ಪ್ರದೇಶದಿಂದ ಕರೆ ತಂದಿತ್ತು. ಆದರೆ ಒಂದು ತಿಂಗಳಿಂದ ಚೆಟ್ಟಿನಾಡು ಗುತ್ತಿಗೆ ಸಂಸ್ಥೆಯ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂಬುದಾಗಿ ಕಾರ್ಮಿಕರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿಂದು 116 ಕೊರೊನಾ ಪಾಸಿಟಿವ್!

ಜಿಲ್ಲೆಯಲ್ಲಿಂದು 116 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3894 ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಗುಣಮುಖರಾಗಿ ಇಂದು 121 ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈ ಮೂಲಕ ಒಟ್ಟು ಬಿಡುಗಡೆ ಹೊಂದಿದವರ ಸಂಖ್ಯೆ 2756.

ಗದಗ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ನಡೆಯುವ ಗ್ರಾಪಂ ಚುನಾವಣೆ ವಿವರ

ರಾಜ್ಯ ಚುನಾವಣಾ ಆಯೋಗವು ರಾಜ್ಯದ 30 ಜಿಲ್ಲೆಗಳಲ್ಲಿನ ಒಟ್ಟು 6004 ಗ್ರಾಮ ಪಂಚಾಯತಿಗಳಲ್ಲಿ ಅವಧಿ ಮುಕ್ತಾಯವಾಗದ 162 ಗ್ರಾಮ ಪಂಚಾಯತಿಗಳು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವ 6 ಗ್ರಾಮ ಪಂಚಾಯತಿಗಳು ಮತ್ತು 33 ಗ್ರಾಮ ಪಂಚಾಯತಿಗಳು ಪೂರ್ಣವಾಗಿ ಹಾಗೂ 41 ಗ್ರಾಮ ಪಂಚಾಯತಿಗಳು ಬಹುಶಃ ನಗರ ಸ್ಥಳೀಯ ಸಂಸ್ಥೆಗೆ ಸೇರ್ಪಡೆಯಾಗಿರುವುದರಿಂದ ಒಟ್ಟು 74 ಗ್ರಾಮ ಪಂಚಾಯತಿಗಳು ಒಟ್ಟಾರೆ 242 ಗ್ರಾಮ ಪಂಚಾಯತಿಗಳನ್ನು ಹೊರತು ಪಡೆಸಿ ಉಳಿದ ಎಲ್ಲ 5762 ಗ್ರಾಮ ಪಂಚಾಯತಿಗಳ 35,884 ಕ್ಷೇತ್ರಗಳಿಂದ ಒಟ್ಟು 92121 ಸ್ಥಾನಗಳಿಗೆ ಈ ಕೆಳಕಂಡ ವೇಳಾ ಪಟ್ಟಿಯಂತೆ ಚುನಾವಣೆ ನಡೆಸಲಾಗುವುದು.

ಲವ್ ಜಿಹಾದ್ ಪ್ರಕರಣ ಕ್ರಮಕ್ಕೆ ಒತ್ತಾಯಿಸಿ ಲಕ್ಷ್ಮೇಶ್ವರದಲ್ಲಿ ಮನವಿ

ಪಟ್ಟಣದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ.

ಗದಗ ನಗರ ಸಭೆ ಮತ ಎಣಿಕೆ ಮುಕ್ತಾಯ :15 ಕಾಂಗ್ರೇಸ್,18 ಬಿಜೆಪಿ 2 ಪಕ್ಷೇತರರು

ಗದಗ: ನಗರ ಸಭೆ ಮತ ಎಣಿಕೆ ಮುಕ್ತಾಯ ವಾಗಿದ್ದು ಒಟ್ಟು 15 ಕಾಂಗ್ರೇಸ್  18  ಬಿಜೆಪಿ …