ನರೇಗಲ್: ಹೋಬಳಿ ವ್ಯಾಪ್ತಿಯಯಲ್ಲಿ ಮೊದಲೇ ಹಾಳಾಗಿದ್ದ ರಸ್ತೆಗಳು ಈಗ ಸತತವಾಗಿ ಸುರಿಯುತ್ತಿರುವ ಮಳೆಗೆ ಮತ್ತಷ್ಟು ಹಾಳಾಗಿದ್ದು  ಅಪಘಾಕ್ಕೆ ಆಹ್ವಾನ ನೀಡುತ್ತಿವೆ. ಬುಧವಾರ ಬೆಳಿಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಟ್ರಾಕ್ಟರ್‌ವೊಂದು ರಸ್ತೆಯಲ್ಲಿ ಆಳವಾಗಿದ್ದ ಗುಂಡಿಯಲ್ಲಿ ಸಿಲುಕಿ ಸ್ವಲ್ಪದರಲ್ಲೆ ಅಪಾಯದಿಂದ ಪಾರಾಗಿವೆ.

ಸುಮಾರು ಮೂರು ತಾಸು ರಸ್ತೆಯನ್ನು ಬ್ಲಾಕ್ ಮಾಡಿದ ಬಸ್ ಹಾಗೂ ಟ್ರಾಕ್ಟರ್ ನಿಂದಾಗಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಇದರಿಂದ ಪ್ರಯಾಣಿಕರು ಪರದಾಡಿ ಜನಪ್ರತಿನಿಧಿಗಳಿಗ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹೋಬಳಿಯ ಎಲ್ಲಾ ರಸ್ತೆಗಳು ಹಾಳಾಗಿವೆ ಅದರಲ್ಲೂ ಪಟ್ಟಣದಿಂದ ಯಲಬುರ್ಗಾ ತಾಲ್ಲೂಕಿನ ಗ್ರಾಮಗಳಿಗೆ ತೆರಳುವ ರಸ್ತೆಯು ಸಂಪೂರ್ಣವಾಗಿ ಕಿತ್ತು ಹೋಗಿದೆ.

ನರೇಗಲ್ ನಿಂದ ಗದಗ ಜಿಲ್ಲಾ ವ್ಯಾಪ್ತಿಯ ರಸ್ತೆಯು 10 ಕಿಮೀ ದೂರದ ವರೆಗಿನ ರಸ್ತೆ ಕೆಸರುಗದ್ದೆಯಂತಾಗಿದೆ.  ಮುಂದೆ ಬರುವ ಕೊಪ್ಪಳ ಜಿಲ್ಲೆಯ ರಸ್ತೆಯು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದೆ. ಆದರೆ ಗದಗ ಜಿಲ್ಲೆಯ ನರೇಗಲ್ ಹೋಬಳಿಯ ರಸ್ತೆಯಲ್ಲಿ ತೆಗ್ಗು, ಗುಂಡಿಯಲ್ಲಿ ಬಿಳುವ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ವಣವಾಗಿದೆ. ಹದಗೆಟ್ಟಿರುವ ರಸ್ತೆಗಳಲ್ಲಿ ಸಂಚರಿಸುವ ಸವಾರರು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಇದೇ ಮಾರ್ಗವನ್ನು ಬಳಕೆ ಮಾಡಿಕೊಂಡು ಪ್ರಯಾಣಿಸುವ ಯಲಬುರ್ಗಾ, ತೊಂಡಿಹಾಳ, ಬಂಡಿಹಾಳ, ದ್ಯಾಂಪುರ, ಕುಕನೂರ ಗ್ರಾಮಗಳ ಜನರಿಗೆ ಹಾಗೂ ನರೇಗಲ್ ಸರಹದ್ದಿನ ಹೊಲಕ್ಕೆ ಹೋಗುವ ರೈತರಿಗೆ ತುಂಬಾನೆ ತೊಂದರೆ ಆಗುತ್ತಿದೆ.

ಪಟ್ಟಣದ ಆಸ್ಪತ್ರೆಗೆ ನಿತ್ಯವೂ ನೂರಾರು ಜನ ಬರುತ್ತಾರೆ.  ವೃದ್ಧರ ಹಾಗೂ ಆಸ್ಪತ್ರೆಗೆ ಬರುವ ಗರ್ಭಿಣಿ ಮಹಿಳೆಯರ ಪರಿಸ್ಥಿತಿಯಂತ ಹೇಳತಿರದು. ಅನೇಕ ದಿನಗಳಿಂದಲೂ ಇಷ್ಟೆಲ್ಲಾ ಸಮಸ್ಯೆ ಇದ್ದರೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ತಮಗೂ ಇದಕ್ಕೂ ಸಂಬಂಧ ಇಲ್ಲದಂತೆ ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ. ಆದರೆ ಈವರೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ವಿವಿಧ ಗ್ರಾಮಗಳ ಜನರ ಆರೋಪವಾಗಿದೆ.

ರಸ್ತೆಗಳ ಅಭಿವೃದ್ಧಿ ಕೈಗೊಳ್ಳಬೇಕಾದ ಜಿಲ್ಲಾ ಪಂಚಾಯ್ತಿ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮ, ಲೋಕೋಪಯೋಗಿ ಇಲಾಖೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ರಾಷ್ಟ್ರೀಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿವೆ.

ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆ.

ಇದೇ ಮಾರ್ಗದ ರಸ್ತೆಯಲ್ಲಿ ರಸ್ತೆ ಅಪಘಾತದಿಂದ ನಾಲ್ಕು ಸಾವುಗಳು ಸಂಭವಿಸುವೆ. ಇನ್ನೂ ಅಪಘಾತದಿಂದ ಹಲವರು ಗಾಯಗೊಂಡಿದ್ದಾರೆ. ಎರಡು ತಿಂಗಳ ಹಿಂದೆ ಗರ್ಭಿಣಿಯೊಬ್ಬಳನ್ನು ಕರೆದುಕೊಂಡು ಆಸ್ಪತ್ರೆಗೆ ಬರುತ್ತಿದ್ದ ಕಾರು ರಸ್ತೆಯ ಗುಂಡಿಯಲ್ಲಿ ಸಿಲುಕಿ ತೊಂದರೆ ಅನುಭವಿಸಿದಾಗ, 108 ವಾಹನವನ್ನು ಕರೆಯಿಸಿ ಕಳುಹಿಸಲಾಗಿದೆ. ಆದರೆ ಆ ವಾಹನವೂ ಸಹ ಅಪಘಾತದಿಂದ ಸ್ವಲ್ಪದರಲ್ಲಿಯೇ ಪಾರಾಗಿದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಅಧಿಕಾರಿಗಳು ಮಾತ್ರ ಇದಕ್ಕೆ ನಮಗೆ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆ.

ನಿಂಗನಗೌಡ ಲಕ್ಕನಗೌಡ್ರ, ಸ್ಥಳೀಯರು

ರಸ್ತೆಗಳ ನಿರ್ವಹಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿದ್ದರೂ ರಸ್ತೆ ದುಸ್ಥಿತಿಯನ್ನು ಕಂಡೂ ಕಾಣದಂತಿದ್ದಾರೆ. ಸಂಸದರ, ಶಾಸಕರ ಇಚ್ಛಾಶಕ್ತಿ ಕೊರತೆಯಿಂದಾಗಿ ರಸ್ತೆ ಕಾಮಗಾರಿ ಪ್ರಾರಂಭವಾಗಿಲ್ಲ. ಈ ಧೋರಣೆ ಹೀಗೆ ಮುಂದುವರೆದರೆ ಇಲ್ಲಿ ನಡೆಯುವ ಸಾವುನೋವುಗಳಿಗೆ ಶಾಸಕರು, ಅಧಿಕಾರಿಗಳು ನೇರ ಹೊಣೆಗಾರರಾಗುತ್ತಾರೆ ಹಾಗೂ ರಸ್ತೆ ಅಭಿವೃದ್ಧಿಗಾಗಿ ಉಗ್ರವಾದ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಉದಯ ಕಳಕೊಣ್ಣವರ, ಮಂಜುನಾಥ ಯಲಬುರ್ಗಾ, ಭೀಮಪ್ಪ ಹೂಗಾರ, ಶರಣಪ್ಪ ಹಡಪದ, ಹನುಮಂತ ಮಾದರ, ಕುಮಾರ ಚಲವಾದಿ ಎಚ್ಚರಿಸಿದರು.

Leave a Reply

Your email address will not be published. Required fields are marked *

You May Also Like

“ತಿಳಿಗೊಳ”ಅಭಿನಂದನ ಗ್ರಂಥದ ಲೋಕಾರ್ಪಣೆ ಹಾಗೂ ಗುರುವಂದನ ಕಾರ್ಯಕ್ರಮ”

ಉತ್ತರಪ್ರಭ ರಾಯಬಾಗ: ತಾಲ್ಲೂಕಿನ ಹಾರೂಗೇರಿಯ ಬಿ.ಆರ್. ದರೂರ ಪ್ರಥಮದರ್ಜೆ ಕಾಲೇಜಿನ ವಿಶ್ರಾಂತ ಪ್ರಾಚಾರ್ಯರು, ಕನ್ನಡ ಪ್ರಾಧ್ಯಾಪಕರು,…

ಕೊರೊನಾದಿಂದಾಗಿ ಸಪ್ತಪದಿ ಸಮಯ ಬದಲಿಸಿದ ಸರ್ಕಾರ!

ಬೆಂಗಳೂರು : ಕೊರೊನಾದ ಹಾವಳಿಯ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯ ಎ ದರ್ಜೆಯ ದೇವಸ್ಥಾನಗಳ ವತಿಯಿಂದ ಸಾಮೂಹಿಕ ವಿವಾಹ ಏರ್ಪಡಿಸುವ ಸರ್ಕಾರದ ಸಪ್ತಪದಿ ಯೋಜನೆಗೆ ಮುಂದೂಡಿದೆ.

ಗದಗ ಜಿಲ್ಲೆಯಲ್ಲಿ ಇಂದು ಇಬ್ಬರಿಗೆ ಕೊರೊನಾ ಪಾಸಿಟಿವ್..!

ಗದಗ: ಜಿಲ್ಲೆಯಲ್ಲಿಂದು ಇಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕು ತಗುಲಿದವರ ಸಂಖ್ಯೆ…