Browsing Tag
President
30 posts
ಕಳಸಾಪೂರ ಬಸವಕೇಂದ್ರ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಅವರಿಂದ ಉಪಹಾರ ಸೇವೆ
ಕಳೆದ 50 ದಿನಗಳಿಂದ ರಾಜ್ಯಾದ್ಯಂತ ಲಾಕ್‌ಡೌನ ಕಾರಣ ದಿನಗೂಲಿ ಕಾರ್ಮಿಕರು, ಬಡವರು, ನಿರ್ಗತಿಕರು ತುಂಬಾ ಸಂಕಷ್ಟದಲ್ಲಿದ್ದು ಈ ಕಾರಣದಿಂದ ಕಳಸಾಪೂರ ಬಸವಕೇಂದ್ರ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಗ. ಖಂಡಮ್ಮನವರ ವತಿಯಿಂದ ನಗರದ ಹೆರಿಗೆ ಆಸ್ಪತ್ರೆ ಆವರಣ, ಬೆಟಗೇರಿ ರಂಗಪ್ಪಜ್ಜನ ಮಠದ ಆವರಣ, ನಗರಸಭೆ ಹತ್ತಿರ, ಹೆಲ್ಥಕ್ಯಾಂಪ್‌ನಲ್ಲಿ ಉಪಹಾರ ಸೇವೆ ಮಾಡಲಾಯಿತು.
ಕನ್ನಡ ಸಾಹಿತ್ಯ ಸಮ್ಮೇಳನ ತಾಲೂಕಾಧ್ಯಕ್ಷರಾಗಿ ಸಿದ್ದು ಆಯ್ಕೆ.
ನವಲಿ ರಸ್ತೆಯ ಸರಕಾರಿ ಪದವಿ ಪೂರ್ವ ಕಾಲೇಜು ಆವರಣಲ್ಲಿ ಮಾ.7 ರಂದು ನಡೆಯಲಿರುವ ಪ್ರಪ್ರಥಮ ತಾಲೂಕಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಇಂಗ್ಲಿಷ್ ಪ್ರಾಧ್ಯಾಪಕ, ಪ್ರಗತಿ ಪರ ಬರಹಗಾರ ಹಾಗೂ ಗದುಗಿನ ಕನಕದಾಸ ಶಿಕ್ಷಣ ಸಮಿತಿಯ ಪದವಿ ಪೂರ್ವ ಕಾಲೇಜ್‌ನ ಪ್ರಾಚಾರ್ಯ, ಗೌರವ ಸಂಪಾದಕ ಪ್ರೊ.ಸಿದ್ದು ಯಾಪಲಪರವಿ ಆಯ್ಕೆಯಾಗಿದ್ದಾರೆ.
ಬಾಲೆಹೊಸೂರು ಗ್ರಾಪಂ ಅಧ್ಯಕ್ಷ ಚುನಾವಣೆ: ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ
ಬಾಳೆಹೊಸೂರು ಗ್ರಾಮ ಪಂಚಾಯತಿಗೆ ಇಂದು ನಡೆಯಲಿರುವ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದ್ದು ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿಯಿಂದ ಬಾಲೆಹೊಸೂರು ಗ್ರಾಮ ಪಂಚಾಯತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.