ಶಿರಹಟ್ಟಿ: ತಾಲೂಕಿನ 14 ಗ್ರಾಮ ಪಂಚಾಯತಿಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಸೋಮವಾರ ನಿಗದಿಪಡಿಸಿದ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಜರುಗಿತು.

ಬನ್ನಿಕೊಪ್ಪ ಗ್ರಾಪಂ ಅಧ್ಯಕ್ಷರಾಗಿ ಸಿದ್ದಲಿಂಗಯ್ಯ ಹೊಂಬಾಳಿಮಠ, ಉಪಾಧ್ಯಕ್ಷರಾಗಿ ರಕ್ಷಾ ವರ್ಣೇಕರ ಅವಿರೋಧವಾಗಿ ಆಯ್ಕೆಯಾದರು. ಬೆಳ್ಳಟ್ಟಿ ಗ್ರಾಪಂದ ಅಧ್ಯಕ್ಷರಾಗಿ ನೇತ್ರಾ ಮಲ್ಲೇಶ ಸಜ್ಜನರ, ಉಪಾಧ್ಯಕ್ಷರಾಗಿ ಮಲ್ಲಯ್ಯ ನಿರಂಜನಯ್ಯ ಶಿಲವಂತಮಠ ಆಯ್ಕೆಯಾಗಿದ್ದಾರೆ. ಛಬ್ಬಿ ಗ್ರಾಪಂದ ಅಧ್ಯಕ್ಷರಾಗಿ ಭಾರತಿ ನಿಂಗರಾಜ ತಾರಿಕೊಪ್ಪ, ಉಪಾಧ್ಯಕ್ಷರಾಗಿ ಸುವರ್ಣ ದೇವಪ್ಪ ಅರಿ ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ. ಹೆಬ್ಬಾಳ ಗ್ರಾಪಂ ಅಧ್ಯಕ್ಷರಾಗಿ ಹೆಮಕ್ಕ ಹಿರೇಮಠ, ಉಪಾಧ್ಯಕ್ಷರಾಗಿ ಫಕ್ಕಿರಪ್ಪ ನರಸಮ್ಮನವರ ಅವಿರೋಧವಾಗಿ ಆಯ್ಕೆಯಾದರು.

ಇಟಗಿ ಗ್ರಾಪಂ ಅಧ್ಯಕ್ಷರಾಗಿ ವಿಜಯಲಕ್ಷ್ಮಿ ಕೆಂಚರಡ್ಡಿ, ಉಪಾಧ್ಯಕ್ಷರಾಗಿ ಗಂಗಾ ಬಸವರಾಜ ಹುಲ್ಲೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಡಕೋಳ ಗ್ರಾಪಂ ಅಧ್ಯಕ್ಷರಾಗಿ ಬಸವ್ವ ಮಲ್ಲಪ್ಪ ಮಾದರ, ಉಪಾಧ್ಯಕ್ಷರಾಗಿ ಜಯವ್ವ ಉಪ್ಪಾರ ಅವಿರೋಧವಾಗಿ ಆಯ್ಕೆಯಾದರು. ಕೊಗನೂರ ಗ್ರಾಪಂ ಅಧ್ಯಕ್ಷರಾಗಿ ಜಡಿಯಪ್ಪ ಹೊನ್ನಪ್ಪನವರ, ಉಪಾಧ್ಯಕ್ಷರಾಗಿ ತಿರಕವ್ವ ಹರಿಜನ ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ.

ಕೊಂಚಿಗೇರಿ ಗ್ರಾಪಂ ಅಧ್ಯಕ್ಷರಾಗಿ ನಿಂಬವ್ವ ಚಳಕೇರಿ, ಉಪಾಧ್ಯಕ್ಷರಾಗಿ ನೀಲಮ್ಮ ಉದಣ್ಣವರ ಚುನಾವಣೆ ಮೂಲಕ ಆಯ್ಕೆಯಾದರು. ಮಾಚೇನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಹನುಮವ್ವ ಪಾಟೀಲ, ಉಪಾಧ್ಯಕ್ಷರಾಗಿ ಫಕ್ಕಿರವ್ವ ಪೂಜಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಗಡಿ ಗ್ರಾಪಂ ಅಧ್ಯಕ್ಷರಾಗಿ ಶಹನಾಜಬೇಗಂ ಬುಡ್ಡೆಸಾಬ, ಉಪಾಧ್ಯಕ್ಷರಾಗಿ ವೀರಯ್ಯ ಮಠಪತಿ ಅವಿರೋಧವಾಗಿ ಆಯ್ಕೆಯಾದರು. ಮಜ್ಜೂರ ಗ್ರಾಪಂ ಅಧ್ಯಕ್ಷರಾಗಿ ಪಾರವ್ವ ಲಮಾಣಿ, ಉಪಾಧ್ಯಕ್ಷರಾಗಿ ಚನಬಸವ್ವ ಗುಡಗೇರಿ ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ. ರಣತೂರ ಗ್ರಾಪಂ ಅಧ್ಯಕ್ಷರಾಗಿ ಅಶೋಕ ಚನ್ನವೀರಪ್ಪ ಬಳ್ಳಾರಿ, ಉಪಾಧ್ಯಕ್ಷರಾಗಿ ವಿಜಯಲಕ್ಷ್ಮಿ ಚವ್ಹಾಣ ಅವಿರೋಧವಾಗಿ ಆಯ್ಕೆಯಾದರು.

ತಾರಿಕೊಪ್ಪ ಗ್ರಾಪಂ ಅಧ್ಯಕ್ಷರಾಗಿ ಭೀಮಪ್ಪ ಲಮಾಣಿ ಉಪಾಧ್ಯಕ್ಷರಾಗಿ ರತ್ನಾ ಮಂಜಪ್ಪ ಈರಗಾರ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಎರಡು ಜನ ಸಮ ಮತ ಪಡೆದಿದ್ದರು. ಚುನಾವಣಾಧಿಕಾರಿ ಲಾಟರಿ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಿದರು. ವಡವಿ ಗ್ರಾಪಂ ಅಧ್ಯಕ್ಷರಾಗಿ ಪರಶುರಾಮ ಗುಡಗೇರಿ, ಉಪಾಧ್ಯಕ್ಷರಾಗಿ ಉಮೇಶಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಲೂಕಿನ 14 ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ 9 ಪಂಚಾಯಿತಿಯಲ್ಲಿ ಅಧಿಕಾರದ ಗದ್ದುಗೆ ಹಿಡಿದಿದ್ದು, ಕಾಂಗ್ರೆಸ್ 5 ಪಂಚಾಯತಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

Leave a Reply

Your email address will not be published. Required fields are marked *

You May Also Like

ಡಿಕೆಸಿ ಅವರಿಗೇಕೆ ಈ ಸಂಶಯ

ಕುಂಬಳಕಾಯಿ ಕಳ್ಳ ಎಂದಕೂಡಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಡಿಕೆಸಿ ಅವರಿಗೆ ಏಕೆ ಈ ಸಂಶಯ ಎಂದು ಬಿಜೆಪಿ ಪಕ್ಷ ತನ್ನ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಪ್ರಶ್ನಿಸಿದೆ.

ಸಿಬಿಎಸ್ ಇ ಪರೀಕ್ಷೆ ಇಲ್ಲ – ಕೇಂದ್ರ ಸ್ಪಷ್ಟನೆ!

ನವದೆಹಲಿ : ಕೊರೊನಾ ಹಿನ್ನೆಲೆಯಲ್ಲಿ ಸಿಬಿಎಸ್ಇ 10ನೇ ತರಗತಿಯ ಪರೀಕ್ಷೆಯನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರ ಆದೇಶ…

ಶಾಸಕ ಬಂಡಿ ಅವ್ರಿಗೆ ಯಾವುದೇ ಅಸಮಾಧಾನ ಇಲ್ಲಂತ, ಸಚಿವ ಸ್ಥಾನ ಕೊಟ್ರ ಬ್ಯಾಡನಲ್ಲಂತ!

ಗದಗ: ಸಚಿವ ಸ್ಥಾನದ ಬಗ್ಗೆ ನನಗೆ ಯಾವುದೇ ಅಸಮಾಧಾನವಿಲ್ಲ. ಆದರೆ ಸಚಿವ ಸ್ಥಾನ ನೀಡಿದರೆ ಬೇಡ…

ಆಂತರಿಕ ಕಚ್ಚಾಟದಿಂದ ಬಿಜೆಪಿ ಸರ್ಕಾರ ಪತನವಾದರೆ ನಾವು ಜವಾಬ್ದಾರರಲ್ಲ-ಸಿದ್ದರಾಮಯ್ಯ

ಕಾಂಗ್ರೆಸ್ ಪಕ್ಷದ ಯಾವ ಶಾಸಕರು ರಾಜಿನಾಮೆ ನೀಡುವುದಿಲ್ಲ. ತಮ್ಮ ಪಕ್ಷದ ಹುಳುಕು ಮುಚ್ಚಿಕೊಳ್ಳಲು ಸಚಿವ ರಮೇಶ್ ಜಾರಕಿಹೊಳಿ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟವೇ ಬಿಜೆಪಿಗೆ ಮುಳುವಾಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.