ಗದಗ: ಬಂಡೆಪ್ಪ ಕಾಶಂಪೂರ ಅವರು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಕೃಷಿ ಸಚಿವರಾಗಿ ಅನೇಕ ರೈತಪರ, ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಕುಮಾರಸ್ವಾಮಿ ಮಂತ್ರಿಮಂಡಲದಲ್ಲಿ ಉತ್ಸಾಹಿ ಯುವ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದು ಶ್ಲಾಘನೀಯ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಅಂದಾನಯ್ಯ ಕುರ್ತಕೋಟಿಮಠ ಹೇಳಿದರು.

ಮಾಜಿ ಕೃಷಿ ಸಚಿವ, ಹಾಲಿ ಬೀದರ ದಕ್ಷಿಣ ಕ್ಷೇತ್ರದ ಜನಪ್ರೀಯ ಶಾಸಕ, ರಾಜ್ಯ ಕುರುಬ ಸಮಾಜದ ಮುಖಂಡ, ಜೆಡಿಎಸ್. ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಶಂಪೂರ ಅವರ 57ನೇ ಜನ್ಮ ದಿನಾಚರಣೆಯನ್ನು ಜಿಲ್ಲಾ ಜೆಡಿಎಸ್ ವತಿಯಿಂದ ಬೆಟಗೇರಿ ನಗರದ ಕಚೇರಿಯಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡ ಎಂ.ಆರ್ ಸೋಂಪೂರ, ತಾಲೂಕ ಅಧ್ಯಕ್ಷ ರಾಮಣ್ಣ ಹೂವಣ್ಣವರ, ಸಿ.ಎಸ್ ಪಾಟೀಲ, ಎಂ.ಎಸ್ ಪರ್ವತಗೌಡ್ರ, ಆರ್.ಎನ್ ಪಾಟೀಲ, ರೇಣುಕಾ ಕೆಂದೂರ, ರಮೇಶ ಕಲಬುರ್ಗಿ, ಅಬ್ದುಲ್ ನರಸಾಪೂರ, ರಫೀಕ ನರಗುಂದ, ಅಂದಾನಯ್ಯ ಮುವಳ್ಳಿಮಠ, ಅರುಣ ಹಿಡ್ಕಿಮಠ, ಶಿರಾಜ ಕಲೇಬಾಯಿ, ರೇಣುಕಾ ಚಕ್ರಸಾಲಿ, ಸಂತೋಷ ಪಾಟೀಲ ಹಾಗೂ ಪಕ್ಷದ ಅನೇಕ ಮುಖಂಡರು ಸಿಹಿ ಹಂಚಿ ಸಂಭ್ರಮಿಸಿದರು.

Leave a Reply

Your email address will not be published. Required fields are marked *

You May Also Like

ಪಿಜಿ ಬಾಡಿಗೆ ಹಣ ಕೊಡದಿದ್ದಕ್ಕೆ ಮಾಲಿಕ ಮಾಡಿದ್ದೇನು?

ಪಿಜಿ ಬಾಡಿಗೆ ನೀಡಿಲ್ಲವೆಂಬ ಕಾರಣಕ್ಕೆ ಯುವತಿಯರನ್ನು ಪಿಜಿ ಮಾಲೀಕ ಕೂಡಿ ಹಾಕಿದ ಘಟನೆ ನಗರದ ಕುವೆಂಪುನಗರ ಬಡಾವಣೆಯಲ್ಲಿ ನಡೆದಿದೆ.

ಎರಡನೇ ಪ್ರಿಯಕರನಿಂದ ಮೊದಲನೇ ಪ್ರಿಯಕರನ ಮೇಲಿನ ಸೇಡು ತೀರಿಸಿಕೊಂಡ ಪ್ರೇಯಸಿ!

ಶಿವಮೊಗ್ಗ : ಎರಡನೇ ಪ್ರಿಯಕರನಿಂದ ಮೊದಲ ಪ್ರಿಯಕರನನ್ನು ಪ್ರೇಯಸಿಯೇ ಕೊಲೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ.

ನೌಕರರ ವಲಯದಲ್ಲಿ ನಿರಾಸೆ ಕಾಮೋ೯ಡ ಮೂಡಿಸಿದ ಬಜೆಟ್-ಚಂದ್ರಶೇಖರ ನುಗ್ಲಿ

ಆಲಮಟ್ಟಿ : ಮುಖ್ಯ ಮಂತ್ರಿಗಳು ಇಂದು ಮಂಡಿಸಿದ ಬಜೆಟ್ ರಾಜ್ಯದ ನೌಕರರಿಗೆ ಹಾಗೂ ಶಿಕ್ಷಕರ ಸಮೂಹಕ್ಕೆ…

ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ವಧರ್ಮ, ಜಾತಿಯ ಬೆಂಬಲ

ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಗಾಗಿ ಹಕ್ಕೊತ್ತಾಯಕ್ಕಾಗಿ ಪಟ್ಟಣದಲ್ಲಿ ಬುಧವಾರ ನಡೆದ ಬೃಹತ್ ಹೋರಾಟದ ಮೆರವಣಿಗೆಯಲ್ಲಿ ತಾಲ್ಲೂಕಿನ ಮುಸ್ಲಿಂ, ಜೈನ, ಕ್ರಿಶ್ಚಿಯನ್, ವೀರಶೈವ ಲಿಂಗಾಯತ, ಕುರುಬ, ನಾಯಕ ಸೇರಿ ಎಲ್ಲಾ ಧರ್ಮ, ಜಾತಿಯ ಮುಖಂಡರು ಭಾಗವಹಿಸಿ ದೇವಾಂಗ ಸಮಾಜಕ್ಕೆ ಬೆಂಬಲ ವ್ಯಕ್ತಪಡಿಸಿದರು.