ಉತ್ತರಪ್ರಭ
ದೇಶದ ಸರ್ವಶ್ರೇಷ್ಠ ಸಂವಿಧಾನಕ್ಕೆ ವಿಶ್ವವೇ ಬೆರಗು – ಕೋಟ್ಯಾಳ
ಆಲಮಟ್ಟಿ:
ನಮ್ಮ ದೇಶದ ಪವಿತ್ರ ಕಣದಲ್ಲಿ ರಚಿತಗೊಂಡ ಸರ್ವೋಚ್ಚ ಶ್ರೇಷ್ಠ ಭಾರತೀಯ ಬಲಿಷ್ಠ ಸಂವಿಧಾನಕ್ಕೆ ಇಡೀ ವಿಶ್ವವೇ ಬೆರಗುಗೊಂಡು ನೋಡಿದೆ. ಅಂಥ ಅದ್ಬುತ ಮೌಲ್ಯಯುತ ಶಕ್ತಿ ಸಂವಿಧಾನದಲ್ಲಿ ಹುದುಗಿದೆ ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಅಭಿಪ್ರಾಯಿಸಿದರು.


ಸ್ಥಳೀಯ ಅವರು, ಸಾಕಷ್ಟು ವಿಭಿನ್ನತೆಯಲ್ಲಿಯೇ ಏಕತೆ ಸಾಧಿಸಿ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿರುವ ವಿಶೇಷ ಅಪರೂಪದ ದೇಶ ನಮ್ಮದಾಗಿದೆ ಎಂದರು.
ದೇಶದ ಸಾರ್ವಭೌಮತ್ವ ಉತ್ಕಾಯ ಮಟ್ಟದಲ್ಲಿದೆ. ಅದಕ್ಕೆ ಕಾರಣ ಅಂಬೇಡ್ಕರ್ ಅವರು ನೀಡಿರುವ ಸರ್ವಶ್ರೇಷ್ಠ ಸಂವಿಧಾನ. ಈ ಗ್ರಂಥದಲ್ಲಿ ಉಲ್ಲೇಖಿಸಿರುವ ಆಶಯಗಳನ್ನು ಪ್ರತಿಯೊಬ್ಬರು ಪಾಲಿಸಿ ಇನ್ನಷ್ಟು ಬಲಾಢ್ಯಯುತ ಭಾರತ ನವ ನಿಮಾ೯ಣಕ್ಕೆ ಪಣ ತೋಡಗಬೇಕು. ಪ್ರತಿಯೊಬ್ಬರೂ ಸವಾ೯ಂಗೀಣ ವಿಕಸನದತ್ ಹೆಜ್ಜೆ ಇರಿಸಿದರೆ ದೇಶದ ಪ್ರಗತಿ ಬಲು ಎತ್ತರ ಮಟ್ಟಿಗೆ ಕೊಂಡೊಯ್ಯಲು ಸಾಧ್ಯ.ಆ ದಿಸೆಯಲ್ಲಿ ಯುವ ಜನತೆ ಸಂವಿಧಾನ ಮಾರ್ಗ ಅನುಸರಿಸಬೇಕು. ಸಂವಿಧಾನದ ಆದರ್ಶ ತತ್ವಗಳನ್ನು ಪರಿಪಾಲಿಸಬೇಕು. ಪ್ರಜಾಸತ್ತಾತ್ಮಕ ಭಾರತೀಯ ಪರಂಪರೆಯ ವೈವಿಧ್ಯತೆ ಉಳಿಸಿ ಬೆಳೆಸಬೇಕು. ಭವ್ಯ ರಾಷ್ಟ್ರದ ಉಜ್ವಲತೆಗೆ ಕೈ ಜೋಡಿಬೇಕು. ಹಿರಿಯ ಜೀವಗಳನ್ನು ಗೌರವಿಸುವ ಗುಣ ಹೊಂದಬೇಕು ಎಂದರು.
ಇಂದಿನ ಯುವಜನತೆಯ ಕೈಯಲ್ಲಿ ಭವಿಷ್ಯತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ದೇಶದ ಭದ್ರತೆ, ಸುಸ್ಥಿರ ಪ್ರಗತಿಗೆ ಪೂರಕ ಮಾರ್ಗದಶಿ೯ ಸೂತ್ರಗಳು ನಮ್ಮ ಸಂವಿಧಾನದಲ್ಲಿವೆ.ಇವುಗಳನ್ನು ನಾವೆಲ್ಲರೂ ಅಥೈ೯ಸಿಕೊಂಡು ಸಾಗಬೇಕಾಗಿದೆ ಎಂದರು.
ಎಂ.ಎಚ್.ಎಂ.ಆಂಗ್ಲ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ತನುಜಾ ಪೂಜಾರಿ, ಸಹ ಶಿಕ್ಷಕಿಯರಾದ ಸಿದ್ದಮ್ಮ ಅಂಗಡಿ, ಸರೋಜಾ ಕಬ್ಬೂರ, ಕವಿತಾ ಮರಡಿ, ಕಾಂಚನಾ ಕುಂದರಗಿ, ಶಾಹೀನ ಬಾಗಲಕೋಟ, ಮಂಜುಳಾ ಸಂಗಾಪೂರ, ಶಂಕ್ರಮ್ಮ ಗುಳೇದಗುಡ್ಡ ಹಾಗೂ ಸುನೀತಾ ಮಹೇಂದ್ರಕರ, ಸುಮಾ ಕಟ್ಟಿಮನಿ, ಶೇಖರ ಲಮಾಣಿ ಹಾಗೂ ಹಳಕಟ್ಟಿ ಶಾಲೆಯ ಆರ್.ಎಂ.ರಾಠೋಡ, ಜಿ.ಆರ್.ಜಾಧವ, ಅನಿತಾ ರಾಠೋಡ, ಪಲ್ಲವಿ ಸಜ್ಜನ, ಕವಿತಾ ಮಠದ, ವಿದ್ಯಾ ಮಹೇಂದ್ರಕರ, ರೇಣುಕಾ ಶಿವಣಗಿ, ದಾನಾಬಾಯಿ ಲಮಾಣಿ, ಗೋಪಾಲ ಬಂಡಿವಡ್ಡರ ಇತರರಿದ್ದರು.
ಗಾಂಧೀಜಿ, ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜಿಸಲಾಯಿತು. ಶಾಲಾಂಗಳದಲ್ಲಿ ಗಣತಂತ್ರ ಹಬ್ಬದ ಕಲರವ ಜೋರಾಗಿತ್ತು. ಮಕ್ಕಳು ತ್ರಿವರ್ಣ ಬಣ್ಣದ ಉಡುಪು ಧರಿಸಿ ಸಂಭ್ರೋಲ್ಲಾಸದಿಂದ ನಲಿದರು. ಪುಟಾಣಿ ಮಕ್ಕಳ ಮೊಗದಲ್ಲಿ ಸಂತಸ ಕಳೆಗಟ್ಟಿತ್ತು.
ಎಂ.ಎಚ್.ಎಂ.ಆಂಗ್ಲ ಪ್ರಾಥಮಿಕ ಶಾಲೆಯ ಚಿಣ್ಣರು ಹಾಗೂ ಹಳಕಟ್ಟಿ ಪ್ರೌಢಶಾಲೆಯ ಮಕ್ಕಳು ಆಕರ್ಷಕ ಡಿಸ್ ಪ್ಲೇ ಚಟುವಟಿಕೆ ನಡೆಸಿಕೊಟ್ಟರು ಹಾಗೂ ಪಥಸಂಚಲನ ಶಿಸ್ತು ಬದ್ಧವಾಗಿ ನಿರ್ವಹಿಸಿದರು. ಹಿರಿಯ ಶಿಕ್ಷಕ ಎನ್.ಎಸ್.ಬಿರಾದಾರ ಸ್ವಾಗತಿಸಿದರು. ಎಸ್.ಎಚ್.ನಾಗಣಿ ನಿರೂಪಿಸಿದರು.

Leave a Reply

Your email address will not be published. Required fields are marked *

You May Also Like

ಲಿಂ.ತೋಂಟದ ಸಿದ್ದಲಿಂಗ ಶ್ರೀಗಳವರ “ಆಲಮಟ್ಟಿ ಪ್ರೇಮ ಕಾವ್ಯಭಾವ” ಅನನ್ಯ !!!

ಬರಹ : ಗುಲಾಬಚಂದ ಆರ್.ಜಾಧವ. ಆಲಮಟ್ಟಿಆಲಮಟ್ಟಿ (ವಿಜಯಪುರ ಜಿಲ್ಲೆ) : ಮನದಾಳದಿಂದ ಹೊರಡುವ ನಿಷ್ಕಲ್ಮಶ,ನಿಸ್ವಾರ್ಥವುಳ್ಳ ಪ್ರೀತಿ…

ಆಲಮಟ್ಟಿ: 75 ರ ಉತ್ಸವ ಚಿಣ್ಣರ ಸಂಭ್ರಮ..!

ಆಲಮಟ್ಟಿ: ಈಗ ದೇಶಭಕ್ತಿಯ ಪ್ರೇಮಾಂಕುರದಲ್ಲಿ ಪುಟಾಣಿ ಚಿಣ್ಣರು ಸಹ ಮಿಂದೆದ್ದು ಉಲ್ಲಾಸದಿಂದ ಸಂಭ್ರಮಿಸುತ್ತಿದ್ದಾರೆ. 75 ನೇ…

ಗರಿಷ್ಠ ಮಟ್ಟದಲ್ಲಿ ನೀರು ಸಂಗ್ರಹ: ಒಂದು ವರ್ಷ ಕಾಲ ಕುಡಿಯುವ ನೀರಿಗೆ ಸಮಸ್ಯೆ ಅಗದು- ಸಚಿವ ಸಿ.ಸಿ.ಪಾಟೀಲ

ಆಲಮಟ್ಟಿ: ಆಲಮಟ್ಟಿ ಜಲಾಶಯದಲ್ಲಿಗ ಕಳೆದ ವರ್ಷಕ್ಕಿಂತಲೂ ಈ ಬಾರಿ ಈ ವೇಳೆ ಗರಿಷ್ಠ ಮಟ್ಟದಲ್ಲಿ ನೀರು…