ಬರಹ : ಗುಲಾಬಚಂದ ಆರ್.ಜಾಧವ. ಆಲಮಟ್ಟಿ
ಆಲಮಟ್ಟಿ (ವಿಜಯಪುರ ಜಿಲ್ಲೆ) : ಮನದಾಳದಿಂದ ಹೊರಡುವ ನಿಷ್ಕಲ್ಮಶ,ನಿಸ್ವಾರ್ಥವುಳ್ಳ ಪ್ರೀತಿ ಒಂಥರಾ ಪವಿತ್ರ ಮಾಯೇ.ಅಂತಹ ನಿರ್ಮಲಭಾವದ ಮನ ಲಿಂ,ತೋಂಟದ ಸಿದ್ದಲಿಂಗ ಶ್ರೀ ಅಪ್ಪಗೊಳು ಜಂಗಮರ ನೆಲೆ ಆಲಮಟ್ಟಿ ಮೇಲೆ ಬೀರಿದ್ದಾರೆ.ಸಖತ್ ಪ್ಯಾರ್ ತೋರಿದ್ದಾರೆ. ಪರಿಣಾಮ ಪರಿಮಳಯುತ್ ವಿದ್ಯಾ ಶಿಕ್ಷಣ ಸಂಸ್ಥೆಗಳು ಇಲ್ಲಿಂದು ಹಸಿರು ತೋರಣದಲ್ಲಿ ತೆಲೆಯತ್ತಿ ಘಮಘಮಿಸುತ್ತಿದೆ. ಪೂಜ್ಯರ ಪ್ಯಾರ್ ಶೈಕ್ಷಣಿಕ,ಗಿಡಮರಗಳ ಪ್ಯಾರ್ ಅಗಿದೆ. ಗುಣಮಟ್ಟದ ಶಿಕ್ಷಣಕ್ಕಾಗಿ ಹೈಟೆಕ್ ಶಾಲಾ,ಕಾಲೇಜು ಕಟ್ಟಡಗಳನ್ನು ನಿಮಿ೯ಸಿ ಜ್ಞಾನೋಪಾಸನೆಗೆ ಗ್ರಾಮೀಣ ಮಕ್ಕಳಿಗೆ ಅನುವು ಮಾಡಿಕೊಟ್ಟಿದ್ದಾರೆ.


ಬಸವ ನಾಡಿನ ಪ್ರವಾಸಿ ತಾಣ ಆಲಮಟ್ಟಿ ಎಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ, ಅಕ್ಕರೆ ! ಈ ಸಂಪ್ರೀತಿಯ ಬೆಸುಗೆ ಬಾಂಧವ್ಯ ಸಿಂಚನದಿಂದಲೇ ಅಮೋಘ ಒಡನಾಟ ! ಮಮತೆ,ಗೌರವ ಭಾವದ ಸಿರಿತನ ಪೂಜ್ಯರು ಇಲ್ಲಿ ಮೆರೆದಿದ್ದಾರೆ !
ಹೌದು ! ಜಂಗಮರ ನೆಲೆಯೊಂದಿಗಿನ ಶ್ರೀಗಳವರ ಅವಿನಾಭಾವಮೇಳ ಸಂಗಮ ನಿಜಕ್ಕೂ ಅಪರೂಪಮಯ,ಅಪಾರಮಯ,ಅನನ್ಯಮಯ, ವರ್ಣನಾತೀತ ! ಆಲಮಟ್ಟಿ ಪ್ರೀತಿ ಎರಡಕ್ಷರಲ್ಲಿ ಮುಗಿಯದು. ಅದೊಂದು ಕಾದಂಬರಿಯಾಗಬಲ್ಲದು. ಬರೆದಷ್ಟು ಬಗೆದಷ್ಟು ಆಲಮಟ್ಟಿ ಪ್ರೇಮ ರಸಕಾವ್ಯ ಹೆಮ್ಮರವಾಗಿ ಅರಳಬಲ್ಲದು. ಅಂಥ ಒಂದು ಪವಿತ್ರ ಅವ್ಯಕ್ತ ಭಾವ ಶ್ರೀಗಳು ಹೊಂದಿದ್ದರು. ಆ ಕಾರಣದಿಂದಲೇ ಕನಾ೯ಟಕದ ಗಾಂಧಿ ಶರಣ ಮಂಜಪ್ಪ ಹಡೇ೯ಕರ ಅವರ ಸಮಾಧಿಯು ಕೃಷ್ಣೆಯ ಜಲದಲ್ಲಿ ಕಣ್ಮರೆಯಾಗುತ್ತಿದ್ದಾಗ ಅದನ್ನು ಸಂರಕ್ಷಿಸಿ ಸಮಾಧಿ ಸ್ಥಳಾಂತರಗೊಳಿಸಿ ತಮ್ಮ ಪ್ರೇಮಭಾವದ ಕಳಕಳಿ ಮೆರೆದಿದ್ದಾರೆ. ಪ್ರೀತಿಗೆ ಹಲರೂಪ,ಮುಖಗಳಿವೆ.ನಿಸರ್ಗ,ಪರಿಸರ,ಅನ್ನ ದಾಸೋಹ,ಅಕ್ಷರ ದಾಸೋಹ,ವಾತ್ಸಲ್ಯ,ಸಾಮರಸ್ಯ ದಂತಹ ಪ್ರೇಮಾಂಕುರದಲ್ಲಿ ಸಿದ್ದಲಿಂಗ ಶ್ರೀಗಳವರು ಮಿಂದಿದ್ದಾರೆ.
ಅವರ ಹಲಬಗೆಯ ನಾವೀನ್ಯತೆ ಪ್ರೀತಿ ಸಮಾಜಕ್ಕಾಗಿ ಮಿಡಿದಿದೆ. ಅದು ಪ್ರೇರೇಪಿಸುವ ಶಕ್ತಿಯಾಗಿ ಮಾರ್ಪಟ್ಟಿದೆ. ತಾಯಿನಾಡಿನ ಪ್ರೀತಿ ಆಧ್ಯಾತ್ಮಿಕ ಒಲವಿನಿಂದ ಬೆಸೆದಿರುವ ಪ್ರಕೃತಿ ವರಪುತ್ರ ತೋಂಟದ ಸಿದ್ದಲಿಂಗ ಶ್ರೀ ಭಗವಂತನ ಪ್ರೇಮ ಸ್ವರೂಪಿಯಾಗಿ ಮರೆಯಾಗಿದ್ದಾರೆ. ಅವರೊಳಗಿನ ಶಕ್ತಿ ಈಗ ಭಗವಂತನ ಸಾಕ್ಷಾತ್ಕಾರದಲ್ಲಿ ಆವಿತುಕೊಂಡಿದೆ. ಅದಕ್ಕೆ ಪ್ರೀತಿಯಲ್ಲಿ ದೇವರಿದ್ದಾನೆ.ನಮ್ಮೊಳಗೆ ಸಿದ್ದಲಿಂಗ ದೇವರನ್ನು ಕಾಣಬಹುದೆಂದು !
ತೋಂಟದ ಸಿದ್ದಲಿಂಗ ಶ್ರೀಗಳವರ ನಾಮ ಒಂಥರ ವಿದ್ಯುತ್ ಪ್ರವಾಹ ಇದ್ದಂತೆ. ನಾಮ ಬಲದ ದಿವ್ಯ ಜ್ಞಾನ ಶಕ್ತಿ ಎಂದು ಮರೆಯಲಾಗದ ಆ ನಗು ಮೊಗ ಭಾವ. ಶ್ರೀಗಳು ಗೈದ ಸಮಾಜಮುಖಿ ಕಾರ್ಯಗಳು ಅದೆಷ್ಟೋ ಮನಗಳಲ್ಲಿ ಪ್ರಸರಣಗೊಂಡಿವೆ. ಅವರ ಚೇತನ ಭರಿತ ಮುಖ ಪ್ರೀತಿ,ಅಂತಃಕರಣ ಜಾಗಕ್ಕೆ ಕರೆದೊಯ್ಯುತ್ತವೆ. ತೇಜಸ್ ಭಾವ, ನಡೆ,ನುಡಿ,ಆಚಾರ,ವಿಚಾರ,ತೀಕ್ಷ್ಣ ದೃಷ್ಟಿ ಎಲ್ಲವೂ ಆಕರ್ಷಣೀಯ. ಅವರ ಪವಿತ್ರ ಭಾವ ದಿವ್ಯಾನುಭೂತಿ ನೀಡುತ್ತದೆ.
ಆಲಮಟ್ಟಿ ಆಣೆಕಟ್ಟು ನಿಮಾ೯ಣ ಕಾರ್ಯ ಆರಂಭದಿಂದಲೂ ನಂದನವನ ಚಿನ್ನದ ಆಲಮಟ್ಟಿ ಪ್ರಪುಲವಾಗಿ ಭವಿಷ್ಯತ್ತಿನ ದಿನಗಳಲ್ಲಿ ಅರಳುವ ಹೊಂಗನಸ್ಸು ಕಂಡಂಥ ದೂರದೃಷ್ಟಿಯುಳ್ಳ ಮೇಧಾವಿ ಸ್ವಾಮೀಜಿಯವರು ! ಆ ಕಾಲದ ಶ್ರೀಗಳವರ ಸಿಹಿಗನಸ್ಸು ಇಂದು ನನಸ್ಸಾಗಿದೆ, ನನಸ್ಸಾಗುತ್ತಲ್ಲಿದೆ !


ಲಿಂಗೈಕ್ಯ ಪೂಜ್ಯ ಶ್ರೀ ತೋಂಟದ ಡಾ.ಸಿದ್ದಲಿಂಗ ಮಹಾಸ್ವಾಮಿಗಳು ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ,ಡಂಬಳದ ಪೀಠಾಧಿಪತಿಗಳಾಗಿ ,ಜತೋವಿಪಿ ಶಿಕ್ಷಣ ಸಂಸ್ಥೆಗಳ ಹಾಗು ಆಲಮಟ್ಟಿಯ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ದ ಘನ ಅಧ್ಯಕ್ಷರಾಗಿ ಗೈದಂಥ ಸಮಾಜಮುಖಿಯುತ್ ಸೇವಾ ಮಜಲು ಮನೋಜ್ಞವಾಗಿವೆ ! ಶ್ರೀಗಳವರು ಸಕಲ ಕ್ಷೇತ್ರದಲ್ಲಿ ಅವಿರತ ಸೇವಾ ಕೈಂಕರ್ಯದೊಂದಿಗೆ ಮೂಡಿಸಿರುವ ಛಾಫು ಅಪಾರವಾದದ್ದು, ಆದರ್ಶವಾದದ್ದು, ಅನುಪಮವಾದದ್ದು ಹಾಗು ಅನುಕರಣೀಯವಾದದ್ದು !


ತ್ರಿವಿಧ ದಾಸೋಹಿಯಾಗಿ ನಾಡಿನಲ್ಲಿ ನಡೆದಾಡುವ ದೇವರೆಂದೇ ಪ್ರಸಿದ್ಧಿಯನ್ನು ಪಡೆದ ಲಿಂ, ಸಿದ್ದಲಿಂಗ ಶ್ರೀಗಳು ಸರ್ವಜನಾಂಗದ ಶಾಂತಿಯ ತೋಟ ಕನವರಿಸುವಂಥ ದಿಟ್ಟ ಸ್ವಾಮೀಜಿಗಳಾಗಿದ್ದರು.ನೂರಾರು ಪ್ರಶಸ್ತಿ, ಪುರಸ್ಕಾರಕ್ಕೆ ಪಾತ್ರರಾಗಿದ್ದವರು.ಅದರಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ಕೋಮು ಸೌಹಾರ್ದತೆ ಪ್ರಶಸ್ತಿಯು ಶ್ರೀಗಳವರ ಮುಡಿಗೆ ಸಂಧ ಸುಗಂಧ ದಿಂದ ಸಂಸ್ಥೆಯ ಹಾಗು ಮಠಕ್ಕೆ ಹಿರಿಮೆ ಗರಿಮೆ ಗರಿಮೂಡಿಸುವಂಥದ್ದು !


ನದಿ ಮೂಲ,ಗುರು ಮೂಲ,ಸ್ತ್ರೀ ಮೂಲ ಕೇಳಬಾರದೆಂಬ ಹಿತೋಪ್ತಿಯಂತೆ ಪೂಜ್ಯರ ಜೀವನಾದರ್ಶ ಸದಾಕಾಲಕ್ಕೂ ಸ್ಮರಣೀಯವಾಗಿದೆ.
ಇದ್ದುದನ್ನು ಇದ್ದಾಗೆ ನಿಭಿ೯ಡೆಯಿಂದ ಯಾರ ಮುಲಾಜಿಲ್ಲದೇ ತಮ್ಮ ವಾಗ್ಜರಿ ಹರಿಬಿಡುವ ನೇರಾನೇರ ಸ್ವಭಾವ ಶ್ರೀಗಳದ್ದು. ಅವರ ಹರಿತ ಮಾತು ಆಲಿಸುವದೆಂದರೆ ಭಕ್ತಾಭಿಮಾನಿಗಳಿಗೆ ಎಲ್ಲಲ್ಲಿದ ಖುಷಿ. ಅಂತೆಯೇ ಮೂಢಾಚಾರ್ಯ,ಕಂದಾಚಾರ್ಯ,ಶೋಷಣೆ,ಅನ್ಯಾಯದ ವಿರುದ್ಧ ತಮ್ಮ ನುಡಿಮುತ್ತಗಳಲ್ಲಿ ಹರಿಹಾಯ್ದು ಪ್ರಭಲವಾಗಿ ಖಂಡಿಸುತ್ತಿದ್ದರು. ವ್ಯವಸ್ಥೆ ಲೋಪ ಗೈಯುವವರ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡುವಂಥ ದಿಟ್ಟ ಸ್ವಭಾವದ ಸ್ವಾಮೀಜಿಯವರಾಗಿದ್ದರು. ಪೂಜ್ಯರ ಮಾತುಗಳನ್ನು ಸೂಕ್ಷ್ಮವಾಗಿ ಕೇಳಿದವರು ಬೂಲೇಟ್ ಸ್ವಾಮೀಜಿಯವರು ಅಂತಾ ಹೆಮ್ಮೆಯಿಂದ ಪ್ರಶಂಸೆ ವ್ಯಕ್ತಪಡಿಸುತ್ತಿದಿದ್ದು ಅಂದಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲಡೆಗೂ ಪ್ರತಿಧ್ವನಿಸುತ್ತಿತ್ತು !
ಹುಲಿ ಗರ್ಜನೆಯ ಪೂಜ್ಯ ಸಿದ್ದಲಿಂಗ ಸ್ವಾಮೀಜಿಯವರ ಆಗಮನ, ಅವರ ಆದರ್ಶ, ಅವರ ತತ್ವಗಳ ಝೇಂಕಾರ, ಅವರ ಭಾಷಣ, ನಾಡಿನ ಜನರ ಮನ ಪರಿವರ್ತನೆ ಮಾಡಿವೆ. ಅವರು ಐಕ್ಯರಾದರೂ ಅವರ ಪರೋಪಕಾರದ ಬೋಧನೆಗಳು, ತತ್ವಗಳು, ಆದರ್ಶವಾಗಿ ಇಂದಿಗೂ ಜನಮನದಲ್ಲಿ ಹಸಿರಾಗಿವೆ !
ಶ್ರೀಗಳವರ ಆಲಮಟ್ಟಿ ನಂಟು ! ಪೂಜ್ಯ ತೋಂಟದ ಲಿಂ, ಸಿದ್ದಲಿಂಗ ಮಹಾಸ್ವಾಮಿಗಳು ಆಲಮಟ್ಟಿ ಪ್ರಾಕೃತಿಕ ಪರಿಸರದ ಸೊಬಗನ್ನು ಮೆಚ್ಚಿ ಅಪ್ಪಿಕೊಂಡ ಸ್ವಾಮೀಜಿಯವರು ! ಆಲಮಟ್ಟಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಇಲ್ಲಿನ ಎಸ್.ವಿ.ವಿ.ಸಂಸ್ಥೆಯ ಅಧ್ಯಕ್ಷರಾಗಿ ವಿದ್ಯಾ ಪ್ರಸಾರದ ಜೊತೆಗೆ ಅನೇಕ ಅಭಿವೃದ್ಧಿ ಪರ ವಿಷಯಗಳ ಗುಚ್ಚು ಮನಸ್ಸಿನಲ್ಲಿರಿಸಿಕೊಂಡು ಪ್ರಗತಿಗಾಗಿ ಪ್ರಯತ್ನಿಸುತ್ತಿದ್ದರು. ಆದರೆ ಆಕಸ್ಮಿಕವಾಗಿ ಅವರನ್ನು ದೇವರು ತಮ್ಮಡೆಗೆ ಸೆಳೆದುಕೊಂಡು ಹೋಗಿದ್ದು ದೊಡ್ಡ ದುರಂತವೇ ಸರಿ !
ಲಿಂ,ಸಿದ್ದಲಿಂಗ ಶ್ರೀಗಳವರ ಕೃಪಾಶೀವಾ೯ದದಿಂದ ಹಾಗು ಈಗಿನ ಪೀಠಾಧಿಪತಿಗಳಾದ ತೋಂಟದ ಡಾ, ಸಿದ್ದರಾಮ ಪೂಜ್ಯರ ಮಾರ್ಗದರ್ಶನದಲ್ಲಿ ತಾಕಿ೯ಕ ವಿಚಾರ ಧಾರೆಗಳೊಂದಿಗೆ ನಡೆಯುವ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟರ ಅವರ ಕಾಯಕ ನಿಷ್ಟೆ, ಲವಲವಿಕೆಯ ಸೇಭಾಭಾವ ಕಾರ್ಯ ಅಪರೂಪವಾದದ್ದು ! ಏಕೆಂದರೆ ಉಭಯ ಪೂಜ್ಯರವರ ಸಮಾಜಮುಖಿ ತತ್ವಾದರ್ಶದ ಕಾರ್ಯಗಳನ್ನು ಮುಂದಿಟ್ಟುಕೊಂಡು ಪೂರ್ಣಗೊಳಿಸುತ್ತಿರುವ ಯಶೋಗಾಥೆ ಅಭೂತಪೂರ್ವವಾಗಿವೆ. ಆಲಮಟ್ಟಿಯಲ್ಲಿ ತಪೋವನ,ಪ್ರಕೃತಿ ಚಿಕಿತ್ಸೆ,ಉನ್ನತ ಮಟ್ಟದ ವಿದ್ಯಾ ಕೇಂದ್ರ, ಕೋರ್ಸುಗಳನ್ನು ತೆರೆಯುವ ಬಗೆಗೆ ಸೇರಿದಂತೆ ಶಾಲಾ ಕಾಲೇಜು ಸಂಪೂರ್ಣ ಹಸಿರಿಕರಣದ ಕನಸು ಲಿಂ, ಸಿದ್ದಲಿಂಗ ಮಹಾಸ್ವಾಮಿಗಳವರದ್ದಾಗಿತ್ತು. ನಮ್ಮೆಲ್ಲರ ಸ್ಪೂರ್ತಿದಾಯಕದ ಚೇತನ ಮೂತಿ೯ಗಳಾಗಿರುವ ಪೂಜ್ಯ ತೋಂಟದ ಡಾ, ಸಿದ್ದರಾಮ ಶ್ರೀಗಳವರು ಹಾಗು ಕಾರ್ಯದರ್ಶಿಗಳಾದ ಶಿವಾನಂದ ಪಟ್ಟಣಶೆಟ್ಟರ ಗುರುಗಳು ಇನ್ನೂ ಅನೇಕ ಶಿಕ್ಷಣ ಸಂಸ್ಥೆಗಳ ವಿಭಾಗಗಳನ್ನು ಸ್ಥಾಪನೆ ಮಾಡಿ ಲಿಂ, ಸಿದ್ದಲಿಂಗ ಶ್ರೀಗಳವರು ಕಂಡ ಕನಸು ಸಾಕಾರಗೊಳಿಸುತ್ತಾರೆಂಬ ನಂಬುಗೆಯ ಭರವಸೆ ಇಲ್ಲಿನ ಶಿಕ್ಷಣ ಪ್ರೇಮಿ,ಅಭಿಮಾನಿಗಳದ್ದಾಗಿದೆ. ಆಲಮಟ್ಟಿ ಅಲ್ಲದೇ ರಾಜ್ಯದ ವಿವಿಧೆಡೆ ನೂರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಎಲ್ಲ ಸಮೂದಾಯದ ಮಕ್ಕಳಿಗೆ ಜ್ಞಾನ ದಾಸೋಹ ಉಣ ಬಡಿಸಿದ್ದು ಜಗಕ್ಕೆ ಗೊತ್ತು ! ಗ್ರಾಮೀಣ ಪ್ರದೇಶಗಳಲ್ಲಿಯೇ ಹೆಚ್ಚು ವಿದ್ಯಾ ಸಂಸ್ಥೆಗಳನ್ನು ತೆರೆದು ಹಿಂದುಳಿದ ಮಕ್ಕಳಿಗೆ ಜ್ಞಾನಾರ್ಜನೆಯ ಅನುಕೂಲ ಕಲ್ಪಿಸಿಕೊಟ್ಟ ಪುಸ್ತಕ ಪ್ರೇಮಿ ಸ್ವಾಮೀಜಿಗಳಾಗಿ ಖ್ಯಾತಿ ಪಡೆದಿರುವ ಶ್ರೀಗಳು ಈ ಮೂಲಕ ನೂರಾರು ಹಳ್ಳಿಗಳನ್ನು ವಿದ್ಯಾ-ಧರ್ಮ ದಡಿಯಲ್ಲಿ ಅಪೋಷಣ ಮೀಡಿದ್ದಾರೆ. ಸಿದ್ದಲಿಂಗ ಪೂಜ್ಯರ ಹೆಜ್ಜೆ ಗುರುತುಗಳು ತರ್ಕಕ್ಕೆ ನಿಲುಕುದಂಥವು. ಪ್ರತಿಯೊಂದು ಸಮಾಜಮುಖಿ ಸೇವಾ ಪಯಣದ ದಾರಿಗಳು ಅಷ್ಟೊಂದು ಸತ್ವಭರಿತ,ಪರಿಮಳದ ಮಾರ್ಗದಲ್ಲಿ ಸಾಗಿ ಬಂದಿವೆ. ಅವು ವಿಶೇಷಮಯವಾಗಿ ಜಗಕ್ಕೆಲ್ಲ ಮಾದರಿಯಾಗಿ ಬಿಂಬಿವೆ ! ಜೀವಿತಾವಧಿಯ ಕಟ್ಟಕಡೆಯ ದಿನಗಳವರೆಗೆ ಸಮಾಜದ ಋಣಭಾರ ನಿಷ್ಟೆಯಿಂದ ಗೈದು ಶ್ರೀ ಸಾಮಾನ್ಯರ ಸ್ವಾಮೀಜಿಯಾಗಿ ಅಪರೂಪದ ಸ್ವಾಮೀಜಿಯವರಾಗಿ ತಮ್ಮ ಕ್ಷಕಿರಣ ಸೂರ್ಯನಂತೆ ಪ್ರಕಾಶಿಸಿ ಭೂವೋಡಲಿನಿಂದ ಮರೆಯಾಗಿದ್ದಾರೆ .


ಮಂಜಪ್ಪನವರ ಸಮಾಧಿ ಸ್ಥಳಾಂತರ ಒಂದು ರೋಚಕ ಐತಿಹ್ಯ ! ಕರುನಾಡು ಗಾಂಧಿ, ಮಹಾ ಶರಣ ಮಂಜಪ್ಪ ಹಡೇ೯ಕರ ಅವರ ಬಗೆಗೆ ತೋಂಟದ ಲಿಂ, ಡಾ.ಸಿದ್ದಲಿಂಗ ಶ್ರೀಗಳವರ ಮನದಲ್ಲಿ ಹುದುಕಿ ಅವಿತುಕೊಂಡಿದ್ದ ಅಭಿಮಾನಪೂರ್ವಕ ಪ್ರೀತಿ ಎಂಥದ್ದು ಎಂಬುದನ್ನು ಮಂಜಪ್ಪನವರ ಸಮಾಧಿ ಸ್ಥಳಾಂತರದ ಅಂದಿನ ಯಶೋಗಾಥೆ ಹಾಗು ಶರಣನ ಹೆಸರಿನ ಮೇಲೆ ಈಗ ತಲೆಯತ್ತಿ ಭವ್ಯವಾಗಿ ಕಂಗೋಳಿಸುತ್ತಿರುವ ಮಂಜಪ್ಪನವರ ಸ್ಮಾರಕ ಭವನದ ಕಥೆಯೊಮ್ಮೆ ಕೇಳಿದರೆ ಸಾಕು !
ಎಲ್ಲಿಯ ಸಮುದ್ರಷ್ಟು ಎಲ್ಲಿಯ ನೆಲ್ಲಿಕಾಯಿ ! “ಎತ್ತಣ ಕಡೆಯತ್ತಣ ಸಂಬಂಧವಯ್ಯಾ” ಎಂಬ ನಾನ್ನುಡಿಯಂತೆ ಎಲ್ಲಿಯ ಬನವಾಸಿ ಎಲ್ಲಿಯ ಆಲಮಟ್ಟಿ !
ಹಸಿರು ಕಣದ ಸೊಬಗಿನ ಬನವಾಸಿಯಲ್ಲಿ ಜನಿಸಿ ಭರಪೂರ ಬರದ ನಾಡು,ಅಣ್ಣ ಬಸವಣ್ಣನ ಕರ್ಮಭೂಮಿಯಲ್ಲಿ ಸದ್ಭರಿತ ಸೇವೆಯೊಂದಿಗೆ ಜೀವ ಸೆವೆದು ತೆದ ಆಜ್ಞಾತ ಮಹಾತ್ಮ ಮಂಜಪ್ಪನವರು ಸಾಧನೆಯ ಮೈಲಿಗಲ್ಲು ಬೆಂಕಿಯಲ್ಲಿ ಅರಳಿದ ಹೂವಿನಂತಿದೆ. ಕಷ್ಟ ಕಾರ್ಪಣ್ಯದ ಮಧ್ಯೆ ಮಿಂದು ಬೆಂದು ಅಗೋಚರ ಕೆಲಸ,ಕಾರ್ಯಗಳೊಂದಿಗೆ ಸಮಾಜ ಸೇವೆಗಾಗಿ ಇಡೀ ತಮ್ಮ ಜೀವನ,ಪ್ರತಿಕ್ಷಣದ ಉಸಿರು ಮೀಸಲಿರಿಸಿ ಅವಿರತ ಶ್ರಮಿಸಿ ಅಗಲಿದ್ದಾರೆ. ಆದರೆ ಇನ್ನೂ ಸಮಾಜದಲ್ಲಿ ಅವರು ಅಜ್ಞಾತರಾಗಿಯೇ ಉಳಿದಿರುವುದು ದುರಂತ ! ಗುರುತಿಸದಿರುವುದು ದುರದೃಷ್ಟಕರ ! ಇಂಥ ಮನದಾಳದ ಅಭಿಮತವನ್ನು ತೋಂಟದ ಲಿಂ,ಸಿದ್ದಲಿಂಗ ಶ್ರೀಗಳವರು ಅಗಾಗ ತೀವ್ರ ನೋವಿನಿಂದ ಹೇಳುತ್ತಿದ್ದರು.
ಬಸವ ನಾಡಿನ ಆಲಮಟ್ಟಿ ಸೇವಾ ಕ್ಷೇತ್ರವನ್ನಾಗಿ ಮಾಡಿಕೊಂಡು ಜನಪರ ಸೇವೆಗಿಳಿದ ಮಂಜಪ್ಪನವರು ಸಮಾಜ ಸೇವೆಯೇ ಜಗದೀಶನ ಸೇವೆ ಎಂದು ಭಾವಿಸಿ ಹತ್ತು ಹಲವಾರು ರಂಗುಗಳಲ್ಲಿ ಆರ್ಹನಿಸಿ ನಿಷ್ಟೆಯಿಂದ ದುಡಿದು ಮಿನುಗಿದ್ದಾರೆ. ಈ ಪುಣ್ಯ ಭೂಮಿಯ ನೆಲದಲ್ಲಿಯೇ ಕರ್ಮದ ಫಲವನ್ನು ಯಥೇಚ್ಛವಾಗಿ ಬಿತ್ತಿ ಸದ್ಗತಿಯ ರೂಪ ಧಾರಣ ಮಾಡಿದ್ದಾರೆ ಮಹಾನ ಚೇತನ ಹಡೇ೯ಕರ ಮಂಜಪ್ಪನವರು !
ಮಂಜಪ್ಪನವರ ಸಮಾಧಿ ಸ್ಥಳಾಂತರಕ್ಕಿಂತ ಮುಂಚೆ ಇದ್ದ ಹಳೆ ಆಲಮಟ್ಟಿಯಲ್ಲಿ ಎಸ್.ವಿ.ವಿ.ಸಂಸ್ಥೆಯಿಂದ ಗೋಳಗುಮ್ಮಟ ಖ್ಯಾತಿಯ ಜ್ಞಾನ ಗುಮ್ಮಟ ಎಂದು ಪ್ರಸಿದ್ಧಿರಾದ ರಾವಬಹದ್ದೂರ ಫ.ಗು.ಹಳಕಟ್ಟಿ ಅವರ ಹೆಸರಿನಿಂದ ಆರ್‌.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯೊಂದು ನಡೆಯುತ್ತಿತ್ತು. ಜೊತೆಗೆ ಉಚಿತ ಪ್ರಸಾದನಿಲಯಗಳು ಸಹ ಇದ್ದವು. ಈ ಶಾಲೆ ಬಸವನ ಬಾಗೇವಾಡಿ ತಾಲೂಕಿನ ಮೊದಲ ಪ್ರೌಢಶಾಲೆ ಅಂತಾನೂ ಹೇಳಲಾಗುತ್ತಿದೆ. ಹೀಗಾಗಿ ಇಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ,ವಸತಿ ಭೋಜನದ ಸೌಲಭ್ಯಗಳು ನಿಖರವಾಗಿ ದೊರೆಯುತ್ತಿದ್ದವು.
ಆಲಮಟ್ಟಿ ಆಣೆಕಟ್ಟಿನ ಸ್ಥಾಪನೆ ಕಾರಣ ಹಳೆ ಆಲಮಟ್ಟಿಯಿಂದ ಶಾಲೆ ಬೇರೆಬೇರೆ ಕಡೆಗಳಲ್ಲಿ ಸ್ಥಳಾಂತರಗೊಂಡಿತು. ಈಗ ಈ ಸಂಸ್ಥೆಯು ಹೆಮ್ಮರವಾಗಿ ಬೆಳೆದು ಪೂರ್ವ ಪ್ರಾಥಮಿಕ ಶಾಲೆಯಿಂದ ಹೈಸ್ಕೂಲ್, ಪಿಯುಸಿ, ಪದವಿ, ಕಾಲೇಜುಗಳನ್ನು ಹೊಂದಿ ಉತ್ತಮ ರೀತಿಯಲ್ಲಿ ದಾಪುಗಾಲು ಇರಿಸುತ್ತಿದೆ.
ಸಾಕಷ್ಟು ಸಿಬ್ಬಂದಿಗಳಿಗೆ ಜೀವನಾಧಾರವಾಗಿ, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾ ನಿಕೇತನವಾಗಿ ಮುನ್ನಡೆಯುವ ದಿವ್ಯ ಶಕ್ತಿ ,ಉಜ್ವಲ ಭವಿಷ್ಯ ಹೊಂದಿದೆ .
ಮುಳಗಡೆ ಪೂರ್ವ ಹಳೆ ಆಲಮಟ್ಟಿಯಲ್ಲಿ ಮಂಜಪ್ಪನವರ ಸಮಾಧಿ ಸಹ ಇತ್ತು. ಡ್ಯಾಂ ನಿಮಾ೯ಣದ ಹಿನ್ನೆಲೆಯಲ್ಲಿ ಹಳೆ ಆಲಮಟ್ಟಿ ಸಂಪೂರ್ಣ ನೀರಿಗೆ ಹೋಮವಾಗಿ ಮುಳಗಡೆಗೊಂಡಿತ್ತು. ಶರಣ ಮಂಜಪ್ಪನವರ ಸಮಾಧಿಯು ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದ ಕೃಷ್ಣೆಯ ಹಿನ್ನೀರಿನಲ್ಲಿ ಶಾಶ್ವತವಾಗಿ ಮರೆಯಾಗಿ ಹೋಗುವಂಥ ಪರಿಸ್ಥಿತಿ ಉಂಟಾಗಿತ್ತು. ಆದರೆ ಮಂಜಪ್ಪನವರ ಬಗ್ಗೆ ಅಪಾರ ಗೌರವಾಭಿಮಾನಯುಳ್ಳ ಲಿಂ,ಸಿದ್ದಲಿಂಗ ಶ್ರೀಗಳವರ ಆಸ್ಥೆಯಿಂದ ಕಾಲಗರ್ಭದಲ್ಲಿ ನಶಿಸಿ ಹೋಗುತ್ತಿದ್ದ ಹಡೇ೯ಕರ ಅವರ ಸಮಾಧಿ ಹಾಗಾಗಲು ಬಿಡದೇ ಅದಕ್ಕೆ ಮರುಜೀವ ನೀಡಿದರು ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳವರು.
ದಿಕ್ಸೂಚಿಯಾಗಿ ನಿಂತರು ತೋಂಟದಾರ್ಯ ಅಪ್ಪನವರು! ಈ ಐತಿಹ್ಯ ಕಾರ್ಯಕ್ಕೆ ಟೊಂಕುಕಟ್ಚಿ ಸಿದ್ದಲಿಂಗ ಶ್ರೀಗಳವರು ನಿಂತ ಪರಿಣಾಮವೇ ನೀರಿನಲ್ಲಿ ಮುಳುಗು ಹೋಗುತ್ತಿದ್ದ ಕನಾ೯ಟಕದ ಗಾಂಧಿ ಮಂಜಪ್ಪ ಹಡೇ೯ಕರ ಅವರ ಸಮಾಧಿ ಪುನರುಜ್ಜೀವನ ಪಡೆದಿದೆ. ಜನಮಾನಸದಲ್ಲಿ ಮಂಜಪ್ಪನವರು ಉಳಿಯುವಂತೆ ಐತಿಹಾಸಿಕ ಕಾರ್ಯ ನಿರ್ವಹಿಸಿ ಸಮಾಜ ಎಂದು ಮರೆಯದ ಹಾಗೆ ಮಾಡಿದ್ದಾರೆ ತೋಂಟದ ಪೂಜ್ಯರು.
ಸಮಾಧಿ ಸ್ಥಳಾಂತರದ ಪೂರ್ವ ಸಿದ್ದತೆ… !
ತೋಂಟದ ಲಿಂ, ಸಿದ್ದಲಿಂಗ ಶ್ರೀಗಳವರ ಅಪೇಕ್ಷೆಯಂತೆ ಇಲ್ಲಿ ಮಂಜಪ್ಪನವರ ಸಮಾಧಿ ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ದೊರೆಯಿತು.ಈ ಮಹತ್ವಪೂರ್ಣ ಕಾರ್ಯಕ್ಕೆ ಒಂಟಿನಿಂತು ಎಲ್ಲ ಬಳಗವನ್ನು ಕರೆದುಕೊಂಡು ಯಾವುದೇ ರೀತಿಯಿಂದ ಚ್ಯುತಿ ಬರದ ಹಾಗೆ ಸಂಸ್ಥೆಯ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟರ ರವರ ಮಾರ್ಗದರ್ಶನದಲ್ಲಿ
” ನಭೋತೋ ನಭವಿಷತಿ ” ಎಂಬಂತೆ ಅಂದು ನಿವಿ೯ಘ್ನವಾಗಿ ನೆರವೇರಿತು.


ಮರೆಯಲಾಗದ ಸನ್ನಿವೇಶ ! ಮಂಜಪ್ಪನವರ ಸಮಾಧಿ ಸ್ಥಳಾಂತರ ವೇಳೆ ಹಿನ್ನೀರಿನಲ್ಲಿದ್ದ ಸಮಾಧಿ ಅಗೆದಾಗ ಶರಣನ ದೇಹದ ಆಸ್ತಿಗಳನ್ನು ಒಂದೊಂದಾಗಿ ಸ್ವತಃ ಸಿದ್ದಲಿಂಗ ಶ್ರೀಗಳು ಕೈಗೆತ್ತಿಕೊಂಡರು. ತೋಂಟದ ಶ್ರೀಗಳ ನೇತೃತ್ವದಲ್ಲಿ ಇಲಕಲ್ಲಿನ ಶ್ರೀ ಮಹಾಂತ ಶಿವಯೋಗಿಗಳು ಸೇರಿದಂತೆ ನಾಡಿನ ಹಲವಾರು ಮಠಾಧೀಶರು,ಸ್ಥಳೀಯ ಹಾಗೂ ವಿವಿಧೆಡೆಯಿಂದ ಆಗಮಿಸಿದ್ದ ಧುರೀಣರು,ಅಭಿಮಾನಿಗಳ ಸಮ್ಮುಖದಲ್ಲಿ ಮಂಜಪ್ಪನವರ ಸಮಾಧಿ ತೆರವು ಕಾರ್ಯಚರಣೆ ಐತಿಹಾಸಿಕ ರೂಪ ಪಡೆದಿತ್ತು. ಧಾಮಿ೯ಕ ವಿಧಿ ವಿಧಾನಗಳ ಸಂಪ್ರದಾಯದಂತೆ ಗೋಳಾಕೃತಿಯಲ್ಲಿದ್ದ ಗುಹೆಯ ನೆಲದಲ್ಲಿ ಹೂಗಿಯಲಾಗಿದ್ದ ಮಂಜಪ್ಪನವರ ಸಮಾಧಿಯನ್ನು ಅವರ ಜಯಂತಿ ದಿನವೇ ವ್ಯವಸ್ಥಿತವಾಗಿ ನಸುಕಿನ ಶುಭ ಮೂಹರ್ತದಲ್ಲಿ ಗುದ್ಗಲಿ,ಸನಿಕೆ ಪೂಜೆಯೊಂದಿಗೆ ಅಗೆದು ಒಂದೊಂದು ಆಸ್ತಿಗಳನ್ನು ರಕ್ಷಿಸಿ ಮಂಜಪ್ಪನವರ ನೆನಹು ಸಮಾಜದಲ್ಲಿ ಸದಾ ಅಮರಾಗಿರುವಂತೆ ಸಿದ್ದಲಿಂಗ ಮಹಾಸ್ವಾಮಿಗಳು ಮಾಡಿರುವುದು ಸಹ ಅಮರವಾಗಿದೆ ! ಭರತ ಖಂಡದಲ್ಲೇ ಮಹಾನ ಶರಣರ ಸಮಾಧಿ ಸ್ಥಳಾಂತರಗೊಂಡಿರುವುದು ಕೇವಲ ಎರಡು. ಅದರಲ್ಲಿ ಮಂಜಪ್ಪ ಹಡೇ೯ಕರ ಅವರ ಸಮಾಧಿ ಕೂಡಾ ಒಂದು ಎಂಬುದು ಗಮನಾರ್ಹ !


ಮಂಜಪ್ಪನವರ ಆಸ್ತಿಯ ಭವ್ಯ ಮೆರವಣಿಗೆ ಅಂದು ಸಮಾಧಿ ಅಗೆದು ಹೊರ ತಗೆಯಲಾದ ಮಂಜಪ್ಪನವರ ಆಸ್ಥಿಯ ಮೆರವಣಿಗೆ ಐತಿಹಾಸಿಕವಾಗಿತ್ತು. ಇತಿಹಾಸದ ಪುಟಗಳಲ್ಲಿ ಸೇರಿದ ಆ ಮೆರವಣಿಗೆ ದೃಶ್ಯ ವೈಭವ ಮರೆಯುವಂತಿಲ್ಲ. ತೋಂಟದ ಲಿಂ, ಸಿದ್ದಲಿಂಗ ಶ್ರೀಗಳವರ ಮುಂದಾಳತ್ವದಲ್ಲಿ ಸಮಾಧಿ ಸ್ಥಳದಿಂದ ವಿಜೃಂಭಣೆಯಿಂದ ಸಾಗಿದ ಮೆರವಣಿಗೆ ಆಲಮಟ್ಟಿ ಗ್ರಾಮದಲ್ಲಿ ಸಂಚರಿಸಿ ಈಗಿನ ಮಂಜಪ್ಪನವರ ಸ್ಮಾರಕ ಭವನ ನವ ಸಮಾಧಿ ಸ್ಥಳದವರೆಗೆ ಸಹಸ್ರಾರು ದೈವಗಳ ಭಕ್ತಿ ಆರಾಧನೆಯಲ್ಲಿ ಅತ್ಯೋತ್ಸಾಹದಿಂದ ಸಾಗಿತ್ತು. ಆ ಐತಿಹ್ಯ ಮೆರವಣಿಗೆ ಸ್ಮರಣೀಯ.
ಸ್ಮಾರಕ ಭವನ ಕನಸು ಕಂಡ ಶ್ರೀಮಂಜಪ್ಪನವರ ಸಮಾಧಿ ಸ್ಥಳಾಂತರದ ನಂತರ ತೋಂಟದ ಶ್ರೀಗಳ ಚಿತ್ತ ಶರಣ ಜೀವಿಯ ಸ್ಮಾರಕ ನಿಮಿ೯ಸುವತ್ತ ಹೊರಳಿತು. ಮಂಜಪ್ಪನವರ ಸ್ಮಾರಕ ನಿಮಾ೯ಣಕ್ಕೆ ಅವಿರತ ಪರಿಶ್ರಮ ಪಟ್ಟರು. ಅದಕ್ಕೆ ಕ್ರಿಯಾಶೀಲ ಸಂಸ್ಥೆಯ ಕಾರ್ಯದರ್ಶಿಗಳಾದ ಶಿವಾನಂದ ಪಟ್ಟಣಶೆಟ್ಟರ ಸಾಥ್ ನೀಡಿದರು.‌ ಸಮಯೋಚಿತ ಕಾರ್ಯ ಚಟುವಟಿಕೆ, ಯೋಜನೆ,ಯೋಚನೆ,ನಿಧೀಷ್ಟ ಗೊತ್ತು ಗುರಿಯೊಂದಿಗೆ ಸ್ಮಾರಕ ನಿಮಾ೯ಣ ಕಾರ್ಯ ಕೈಗೊಂಡು ಸಫಲತೆಯ ಭಾವ ತೋರಿದಂಥ ಸಮಾಜಮುಖಿ ಜೀವಗಳೆರಡು ಅವು !
ಸಿದ್ದಲಿಂಗ ಮಹಾಸ್ವಾಮಿಗಳು ಅಂದಿನ ರಾಜ್ಯ ಸಕಾ೯ರವನ್ನು ಸಂಪಕಿ೯ಸಿ ಕೃಷ್ಣೆಯ ತಟದಲ್ಲಿ ಮಂಜಪ್ಪನವರ ಭವ್ಯ ಸ್ಮಾರಕ ಭವನ ತಲೆ ಎತ್ತಿ ಮಿನುಗಲು ಶ್ರಮಿಸಿದ್ದಾರೆ. ಜೊತೆಗೆ ಅಪರೂಪದ ,ಆಕರ್ಷಣೀಯ ಮಂಜಪ್ಪನವರ ಕಂಚಿನ ಪುತ್ಥಳಿ ಪ್ರತಿಷ್ಟಾಪನೆ ಮಾಡಿ ಈ ಭಾಗದ ಸುಂದರ ಯಾತ್ರಾ ಸ್ಥಳವನ್ನಾಗಿ ಪರಿವರ್ತಿಸಿ ಹೊಸ ಸ್ಪೂರ್ತಿಯ ಸ್ಪರ್ಶ ನೀಡಿದ್ದಾರೆ. ಸ್ಮಾರಕ ಭವನ ನಿಮಾ೯ಣದ ಕಾರ್ಯದಲ್ಲಿ ಜಾಮದಾರ ಸಾಹೇಬರ ಕೊಡುಗೆಯೂ ಹುದುಗಿದೆ. ಒಳ್ಳೆಯ ಮನಸ್ಸುಗಳ ಸಂಕಲ್ಪದಿಂದ ಇಂದು ಮಂಜಪ್ಪನವರು ವಿಶಾಲಮಯ ಹೃದಯಗಳಲ್ಲಿ ನೆಲೆಯೂರಿ ಆಜರಾಮರಾಗಿದ್ದಾರೆ. ಭವಿಷ್ಯತ್ತಿನ ದಿನಗಳಲ್ಲಿ ಇನ್ನೂ ಹೆಚ್ಚು ನಕ್ಷತ್ರದಂತೆ ಮಂಜಪ್ಪನವರನ್ನು ಗುರುತಿಸುವ ಕಾರ್ಯವಾಗಲಿ. ಸಕಾ೯ರ ಮಂಜಪ್ಪ ಹಡೇ೯ಕರ ರವರ ಉತ್ಸವ ಆಚರಿಸಲಿ. ಈ ಅಜ್ಞಾತ ಮಹಾತ್ಮನನ್ನು ಸುಜ್ಞಾನಿಗಳು ಎಂದು ಮರೆಯದಿರಲಿ ಎನ್ನುತ್ತಾರೆ ಸಂಸ್ಥೆಯ ಕಾರ್ಯದರ್ಶಿ ಪ್ರಾ.ಎಸ್.ಎಸ್.ಪಟ್ಟಣಶೆಟ್ಟರ.

Leave a Reply

Your email address will not be published. Required fields are marked *

You May Also Like

ಪಾಕ್ ನಂತೆ ಚೀನಾ ರಾಷ್ಟ್ರವು ಗಡಿಯಲ್ಲಿ ಉದ್ಧಟತನ ಮೆರೆಯುತ್ತಿದೆ – ರಾಜನಾಥ್ ಸಿಂಗ್!

ನವದೆಹಲಿ : ಗಡಿ ರೇಖೆಯ ಬಳಿ ಪಾಕ್ ನಂತೆ ಚೀನಾ ಕೂಡ ವಿವಾದ ಸೃಷ್ಟಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ.

ಕೊರೋನಾ ಕಾವ್ಯ-4

ಇವತ್ತಿನ ಕೊರೋನಾ ಕಾವ್ಯ ಸರಿಣಿಗೆ ಕವನ ಕಳುಹಿಸಿದವರು ಮಂಗಳಗೌರಿ ಹಿರೇಮಠ, ಮಂಗಳಗೌರಿ ಹಿರೇಮಠ ಇವರು ಗದಗನ ಬಸವೇಶ್ವರ ನಗರದವರು, ಸಾಹಿತ್ತಿಕವಾಗಿ ಅಭಿರುಚಿ ಉಳ್ಳ ಮಂಗಳಗೌರಿ ಅವರು ಸಾಕಷ್ಟು ಕವತೆಗಳನ್ನು ರಚಿಸಿದ್ದಾರೆ. ಊಹಿಸದೇ ಬಂದ ಘಳಿಗೆಯನ್ನು ಕೊರೋನಾದ ಈ ಸಂಕಷ್ಟ ಕಾಲದಲ್ಲಿ ಹದವಾಗಿ ಕಟ್ಟಿಕೊಟ್ಟಿದ್ದಾರೆ.

ಬಂದ ಮತ್ತೊಬ್ಬ ಬಂಗಾರದ ಬಾಬಾ: ಈತನ ಚಿನ್ನದ ಮಾಸ್ಕ ರೇಟು 3.5 ಲಕ್ಷ ರೂ!

ಪುಣೆಯಲ್ಲಿ ಶಂಕರ್ ಕುರಾಡೆ ಎನ್ನುವಾತ 2.80 ಲಕ್ಷ ರೂ. ಮೌಲ್ಯದ ಚಿನ್ನದ ಮಾಸ್ಕ್ ಧರಿಸಿದ್ದನ್ನು ನೋಡಿ ಪ್ರೇರಣೆ ಪಡೆದ ಒರಿಸ್ಸಾದ ಚಿನ್ನ ಪ್ರಿಯನೊಬ್ಬ 3.6 ಲಕ್ಷ ರೂ ಮಾಸ್ಕ್ ಮಾಡಿಸಿಕೊಂಡಿದ್ದಾನೆ.

ನಾಳೆ ಗದಗಿಗೆ ಬರಲಿದೆ ಮುಂಬೈ ಎಕ್ಸಪ್ರೆಸ್

ಗದಗ: ನಾಳೆ ಗದಗ ನಗರಕ್ಕೆ ಮುಂಬೈ-ಗದಗ ಎಕ್ಸ್‌ಪ್ರೆಸ್‌ ರೈಲು ಆಗಮಿಸಲಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ…