ಆಲಮಟ್ಟಿ: ಈಗ ದೇಶಭಕ್ತಿಯ ಪ್ರೇಮಾಂಕುರದಲ್ಲಿ ಪುಟಾಣಿ ಚಿಣ್ಣರು ಸಹ ಮಿಂದೆದ್ದು ಉಲ್ಲಾಸದಿಂದ ಸಂಭ್ರಮಿಸುತ್ತಿದ್ದಾರೆ. 75 ನೇ ಸ್ವಾತಂತ್ರ್ಯ ಅಮೃತೋತ್ಸವ ಉತ್ಸಾಹ ಭರಿತವಾಗಿ ಮೈದೇಳಿ ಮನೆ ಮನಗಳಲ್ಲೂ ರಾರಾಜಿಸುತ್ತಿದೆ. ಎಲ್ಲೆಲ್ಲೂ ದೇಶ ಪ್ರೇಮ ಚಟುವಟಿಕೆಗಳ ಭಾವ ಅನಾವರಣಗೊಂಡು ಸಂಪನ್ನಗೊಳಿಸುತ್ತಿವೆ.





75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಇಲ್ಲಿನ ಎಂ.ಎಚ್.ಎಂ.ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಪುಟ್ಟ ಮಕ್ಕಳು 75 ರ ಸಂಖ್ಯಾ ಆಕೃತಿಯಲ್ಲಿ ಕುಳಿತು ದೇಶಾಭಿಮಾನದ ಪ್ರೀತಿ ಮೆರೆದರು. ಆಕರ್ಷಣೀಯ ಈ ತಿರಂಗ ಉತ್ಸವದ ನೋಟ ಗಮನ ಸೆಳೆಯಿತು. ಮುಖ್ಯ ಗುರುಮಾತೆ ತನುಜಾ ಪೂಜಾರಿ, ಸಹ ಶಿಕ್ಷಕಿಯರಾದ ಸಿದ್ದಮ್ಮ ಅಂಗಡಿ,ಕವಿತಾ ಮರಡಿ,ಸರೋಜಾ ಕಬ್ಬೂರ,ಕಾಂಚನಾ ಕುಂದರಗಿ,ಶೈನಾಬಾನು ಬಾಗಲಕೋಟ, ಮಂಜುಳಾ ಸಂಗಾಪುರ,ಶಂಕ್ರಮ್ಮ ಗುಳೇದಗುಡ್ಡ, ಸುನೀತಾ ಮಹೇಂದ್ರಕರ ಮೊದಲಾದವರಿದ್ದರು.

ಹಳಕಟ್ಟಿ ಶಾಲೆಯಲ್ಲಿ ಸಡಗರ : ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ಶನಿವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಶಾಲಾ ಮಕ್ಕಳು,ಶಿಕ್ಷಕರು ಭಾಗಿಯಾಗಿದ್ದರು.