ಉತ್ತರಪ್ರಭ ಸುದ್ದಿ
ಆಲಮಟ್ಟಿ:
ಮುಸುಕು ಮುಸುಕು.ಕೂಲ್ ಥಂಢಾ ಸಂಭ್ರಮದ ವಾತಾವರಣ. ಹೂ, ಸಸ್ಯ ಗುಚ್ಚುಗಳ ಸೊಬಗು. ತಳಿರು ತೋರಣದ ಸುವಾಸನೆಯ ಘಮಲು.ಶೃಂಗಾರಮಯ ಸ್ಪರ್ಶಕ್ಕೆ ಒಳಗಾದ ರಸ್ತೆ, ವೃತ್ತ, ಉದ್ಯಾನವನಗಳು. ಕೃಷ್ಣೆಯ ಒಡಲಲ್ಲಿ ಮಿನುಗುತ್ತಿದ್ದ ತಿಳಿ ನೀಲಾಕಾರದ ಅಪಾರ ಜಲರಾಶಿ.ಈ ಮಧ್ಯೆ ಕೃಷ್ಣೆಗೆ ಒದಗಿತ್ತು ಗಂಗಾಪೂಜೆ, ಬಾಗಿನ ಸೌಭಾಗ್ಯ…!

ಶುಭ ಶುಕ್ರವಾರ ಮುಂಜಾನೆ ಆಲಮಟ್ಟಿಯಲ್ಲಿ ಕಂಡು ಬಂದ ವೈಭವೋಪೇತ ಆಕರ್ಷಣೀಯ ಚಿತ್ತಾರಗಳಿವು! ಉತ್ತರ ಕರ್ನಾಟಕದ ಜೀವ ನದಿ ಕೃಷ್ಣೆಯ ಜಲಧಿಯಲ್ಲಿಂದು ಪೂಜಾ ಕೈಂಕರ್ಯದ ಸಡಗರ ಸಂಭ್ರಮ ತೇಲಿ ಮೈಳೇಸಿತ್ತು! ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮುಂಜಾವಿನ ವೇಳೆಗೆ ಇಲ್ಲಿನ ಕೃಷ್ಣೆಯ ಒಡಲಲ್ಲಿ ಶೇಖರಿಸಿಕೊಂಡಿದ್ದ ಭರಪೂರ ಪ್ರಮಾಣದ ಪವಿತ್ರ ಜಲಧಿಗೆ ಬಾಗಿನ ಅಪಿ೯ಸಿ ಭಕ್ತಿ ನಮನದ ಗೌರವ ಸಲ್ಲಿಸಿದರು.

ಕೃಷ್ಣೆ ಅಂಗಳದ ಪರಿಸರ ಇಂದು ನವ ನಾವೀನ್ಯತೆಯ ನೋಟಕ್ಕೆ ಸಾಕ್ಷಿಯಾಗಿತ್ತು.ಫಳಫಳಾ ಹೊಳೆಯುತ್ತಿದ್ದ ದೃಶ್ಯ ವೈಭವದಿಂದ ಕಣ್ಮನ ಕೊರೆಯಿತು. ಭಾಗಶಃ ಉದ್ಯಾನವನಗಳು ಚೈತನ್ಯದ ಚಿಲುಮೆಯಲ್ಲಿ ಸ್ಪೂರ್ತಿಯ ಸಿಂಚನ ಗರಿಗೈದವು. ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದ ಅವರಣ ನಿಜಕ್ಕೂ ಹಬ್ಬದ ಸೊಜಿಗಲಲ್ಲಿ ಮಿಂದಿತ್ತು. ಜಲಾಶಯದ ಬಳಿ ಸಿಎಂ.ಬಸವರಾಜ ಬೊಮ್ಮಾಯಿ ಕೃಷ್ಣೆಗೆ ಸಾಂಪ್ರದಾಯಿಕ ಧಾಮೀ೯ಕ ವಿಧಿವಿಧಾನಗಳಂತೆ ಗಂಗಾ ಪೂಜೆ ಸಲ್ಲಿಸಿದ ಬಳಿಕ ಶೃಧ್ಧೆಯಿಂದ ಬಾಗಿನ ಅಪಿ೯ಸಿ ಧನ್ಯತೆ ಮೆರೆದರು.

ಸೀರೆ, ಕುಪ್ಪಸ, ಹಣ್ಣು, ಹೂವು, ತೆಂಗಿನಕಾಯಿ ಸೇರಿದಂತೆ ಹಲ ನಾನಾ ರೂಜೆ ಮತ್ತು ಉಡಿ ತುಂಬುವ ಸಾಮಗ್ರಿಗಳನ್ನು ಕೃಷ್ಣೆಯ ಜಲಧಿಗೆ ಸಿಎಂ. ಸಮಪಿ೯ಸಿದರು. ಹೆಲಿಕಾಪ್ಟರ್ ಮೂಲಕ ಬೆಳಿಗ್ಗೆ 10 ಗಂಟೆ ಸುಮಾರಿಗೆ ಹುಬ್ಬಳ್ಳಿಯಿಂದ ಆಲಮಟ್ಟಿಗೆ ಬಂದಿಳಿದ ಮುಖ್ಯಮುಂತ್ರಿಗಳು ನೇರವಾಗಿ ಮೊದಲು ಜಲಾಶಯ ಬಾಗಿನ ಸ್ಥಳಕ್ಕೆ ತೆರಳಿ ಗಂಗಾ ಪೂಜೆ ಸಲ್ಲಿಸಿ ಬಾಗಿನ ಸಮಪಿ೯ಸಿದರು.

ಈ ಮುನ್ನ ರೇಷ್ಮೆ ಪೇಟಾ ಸುತ್ತಿ ಸಿಎಂ ಗೆ ಸ್ವಾಗತಿಸಿ ಜನಪ್ರತಿನಿಧಿಗಳು,ಅಧಿಕಾರಿಗಳು ಬರಮಾಡಿಕೊಂಡರು. ಬಾಗಿನ ಸ್ಥಳ ನಾನಾ ಹೂವು,ಸಸ್ಯ ಶ್ಯಾಮಲೆ,ಬಾಳೆಕಂಬು ತಳಿರು ತೋರಣ ದಿಂದ ವರ್ಣರಂಜಿತವಾಗಿ ರಾರಾಜಿಸಿ ಕಂಗೊಳಿಸಿತು. ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿ ಮನ ತಣಿಸಿದವು. ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ, ಶಾಸಕರಾದ ಶಿವಾನಂದ ಪಾಟೀಲ, ಸೋಮನಗೌಡ ಪಾಟೀಲ, ವೀರಣ್ಣ ಚರಂತಿಮಠ, ಎ.ಎಸ್.ಪಾಟೀಲ ನಡಹಳ್ಳಿ ಸೇರಿದಂತೆ ಕನಾ೯ಟಕ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ, ಗ್ರಾಪಂ ಅದ್ಯಕ್ಷ ಮಂಜುನಾಥ್ ಹಿರೇಮಠ ಮೊದಲಾದವರಿದ್ದರು.

ಯಲಗೂರದ ಗೋಪಾಲಾಚಾರ್ಯ ಹಿಪ್ಪರಗಿ ನೇತೃತ್ವದಲ್ಲಿ ನಾಲ್ವರು ವೈಧಿಕರು ಗಂಗಾಪೂಜೆ,ಬಾಗಿನ ಪೂಜಾ ಕೈಂಕರ್ಯ ನೆರವೇರಿಸಿದರು. ಜಲ ಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ,ಕಾರ್ಯದರ್ಶಿ ಕೆ.ಬಿ.ಕುಲಕರ್ಣಿ, ಕೃಷ್ಣಾ ಭಾಗ್ಯ ಜಲ ನಿಗಮದ ಎಂ.ಡಿ.ಬಿ.ಎಸ್.ಶಿವಕುಮಾರ್, ಮುಖ್ಯ ಎಂಜಿನಿಯರ್ ಎಚ್.ಸುರೇಶ ಇತರರಿದ್ದರು. ಇದೇ ಸಂದರ್ಭದಲ್ಲಿ ಸಿಎಂ.ಬಸವರಾಜ ಬೊಮ್ಮಾಯಿ ಇಲ್ಲಿ 14.5 ಕೋಟಿ ವೆಚ್ಚದ ನೂತನ ಪ್ರವಾಸಿ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಿದರು.

Leave a Reply

Your email address will not be published. Required fields are marked *

You May Also Like

ಶೀಘ್ರವೇ ಅಂಗನವಾಡಿ ಬಾಗಿಲು ತೆರೆಯಲು ಸರ್ಕಾರ ನಿರ್ಧಾರ

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಬಂದ್ ಆಗಿದ್ದ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ರೋಣ ತಾಲೂಕು ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷ ಮೀಸಲಾತಿ ಪ್ರಕಟ

ರೋಣ: ತಾಲೂಕಿನ 24 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಆಯ್ಕೆ ಪ್ರಕ್ರಿಯೆ ವೀರಭದ್ರೇಶ್ವರ ಕಲ್ಯಾಣ…

ಗದಗ ಜಿಲ್ಲೆಯಲ್ಲಿ ಬೀಗರ ಬುತ್ತಿಯಿಂದ ಕೊರೊನಾ ಭಯ..!

ಗದಗ: ಕೊರೊನಾ ಹೆಮ್ಮಾರಿ ಪ್ಯಾಟ್ಯಾಗಷ್ಟ ಗಿರಿಕಿ ಹೊಡೆಯುತ್ತಿತ್ತ. ಈಗ ಹಳ್ಳಿಗೂ ಬಂದು ಹಳ್ಳಿ ಜನ್ರಿಗೆ ಹಳಹಳಿ…

ತೋಂಟದಾರ್ಯ ಇಂಜನೀಯರಿಂಗ್ ಕಾಲೇಜ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಾಧನೆ

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ(KSCST) ಪ್ರಕಟಿಸಿದ ಈ ವರ್ಷದ (2019-20) ಫಲಿತಾಂಶದಲ್ಲಿ, ನಗರದ ಪ್ರತಿಷ್ಠಿತ ತೋಂಟದಾರ್ಯ ಇಂಜಿನೀಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಗೈದಿದ್ದಾರೆ.