ಚಿತ್ರ ಬರಹ : ಗುಲಾಬಚಂದ ಜಾಧವ
ವಿಜಯಪುರ : ಚಿತ್ರಕಲೆ ನಮ್ಮ ಸಂಸ್ಕೃತಿಗಳ ಜೀವನಾಡಿ.ಅದು ಜೀವನದ ಒಂದು ಅವಿಭಾಜ್ಯ ಅಂಗ ಭಾಗ. ಕಲೆಗೆ ಭಾಷೆ ಇಲ್ಲ.ಅದರೂ ಎಲ್ಲ ಭಾಷೆಗಳ ಅರಳಿಸುವ ಹೂರಣ ಮೆತ್ತಿಕೊಂಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿದೇ೯ಶಕ ಉಮೇಶ ಶಿರಹಟ್ಟಿಮಠ ಅಭಿಪ್ರಾಯಿಸಿದರು.

ನಗರದ ಬಂಜಾರಾ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರ ಆಶ್ರಯದಲ್ಲಿ ಜಿಲ್ಲೆಯ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಒಂದು ದಿನದ ಕಾಯಾ೯ಗಾರದಲ್ಲಿ ಮಾತನಾಡಿದ ಅವರು, ಭಾವನೆಗಳಿಗೆ ಮೋಟಿವೇಷನ್ ಕೊಡುವಂಥ ಚಿತ್ರಕಲೆಯ ರಸಕಾವ್ಯ ಆಸ್ವಾದಿಸುವುದೇ ಸೌಭಾಗ್ಯ. ಮನಸ್ಸಿಗೆ ಒಂದು ರೀತಿಯ ವಿನೂತನ ಥ್ರೀಲ್ ಆನಂದ ಕೊಡುತ್ತದೆ ಎಂದರು.
ಚಿತ್ರಕಲೆಯಲ್ಲಿ ಮುಗ್ದತೆ,ಪ್ರಸನ್ನತೆ ಇದೆ. ಅಥೈ೯ಸಿಕೊಳ್ಳಲಾರದಂಥ ಭಾವನಾತ್ಮಕ ಬುದ್ಧಿವಂತಿಕೆಯ ಕೌಶಲ್ಯಗಳಿವೆ. ಭಿನ್ನಭಿನ್ನ ವೆರೈಟಿ ಚಿತ್ರಗಳ ಫೋಕಸ್ ಮುದ ನೀಡುತ್ತವೆ. ಕಲೆ ಖುಷಿಯಲ್ಲಿ ತೇಲಿಸುತ್ತದೆ. ಆ ಕಾರಣ ಚಿತ್ರಕಲಾ ಶಿಕ್ಷಕರು ಸದಾ “ಆಟ್೯ ಟಚ್” ನಲ್ಲಿರಬೇಕು. ವೃತ್ತಿ ಪ್ರೀತಿ, ಕಲಾ ಪ್ರೋತ್ಸಾಹ ಮನಃಪೂರ್ವಕವಾಗಿ ತೋರಿಸಬೇಕು. ಆ ಮೂಲಕ ಚಿತ್ರಕಲೆಯ ಜೀವಂತಿಕೆ ಇರಿಸಿಕೊಳ್ಳಲು ಪ್ರಯತ್ತಿಸಬೇಕು ಎಂದರು.

ಕಲಾವಿದರು, ಶಿಕ್ಷಕರು ಸೀಮಿತ ಸ್ಥಿತಿಯಲ್ಲಿರದಿರಿ. ನಿಮ್ಮಲ್ಲಿ ಆಟ್೯ ಒಲವು ನಿರಂತರಾಗಿರಲಿ. ಆಸಕ್ತಿಯಿಂದ ಮಕ್ಕಳಿಗೆ ಉತ್ತೇಜಿಸಿ. ಖುಷಿ,ಸಂತಸ ಕೊಡುವ ಕಲಾ ಹವ್ಯಾಸ ರುಚಿ ಬೆಳಿಸಿ. ಮಕ್ಕಳಲ್ಲಿ ಹೊಸತನ,ನವತನದ ನವ್ಯತೆ ಭಾವ ಮೂಡಿಸಿ. ವೃತ್ತಿಪರ ಬದ್ದತೆ ಪ್ರಾಮುಖ್ಯತೆಯಿಂದ ಸಾಗಿಸಿ. ವೃತ್ತಿಗೆ ನ್ಯಾಯ ಕೊಡುವ ಪ್ರಾಮಾಣಿಕತೆ ಕೆಲಸದಲ್ಲಿ ನೆಮ್ಮದಿ ಇರುತ್ತದೆ ಎಂದರು.

ಮನಸ್ಸನ್ನು ಎಷ್ಟು ತರಬೇತಿಗೊಳಿಸುತ್ತೆವೆಯೋ ಅಷ್ಟು ನವಚೇತನಕ್ಕೆ ಒಳಪಡುತ್ತದೆ. ಲನಿ೯ಂಗ್ ಪ್ರೋಫೇಶನಲ್ ಉತ್ಕಟವಾಗಿರಲಿ. ಆಟಿ೯ಸ್ಟ್ ಸ್ಕೀಲ್ ಬೆಳಿಸಿಕೊಳ್ಳಿ. ಕಲಾವಿದರಿಗೆ ಎಂದು ಸಾವಿಲ್ಲ.ಬೇರೆ ರೂಪದಲ್ಲಿ ಸದಾ ಜೀವಂತಿಕೆಯಲ್ಲಿರುತ್ತಾರೆ. ಚಿತ್ರಕಲೆ ಬಹಳಷ್ಟು ಪ್ರಭಾವವುಳ್ಳ ವಿಷಯ. ಕಲೆಗೆ ಮೀತಿ ಹಾಕುವುದು ಬೇಡ. ಚಿತ್ರರೂಪ ಎಲ್ಲ ವ್ಯಾಖ್ಯಾನ ಹೇಳಬಲ್ಲದು. ಗ್ರಾಫಿಕ್ಸ್ ಯುಗದಲ್ಲಿಂದು ನೈಜ ಚಿತ್ರಕಲೆ ಸೋಲುತ್ತಿದೆ. ನಿಧಾನ ಮಾಯವಾಗುತ್ತಿದೆ. ಮಾನವ ಕೆಲಸ ಹಿಂದುಳಿಯುತ್ತಿದೆ. ಯಂತ್ರದ ಕೆಲಸಗಳು ಮೀತಿಯಿಲ್ಲದೇ ವೇಗ ಪಡೆದುಕೊಂಡಿವೆ. ಇದು ವಾಸ್ತವಿಕ ಮೌಲ್ಯದ ನೈಜ ಕಲೆ ಕಣ್ಮರೆಗೆ ಮೂಲ ಕಾರಣವಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.
ಸೌಂದರ್ಯದ ಆರಾಧಕರಾಗಿರುವ ಕಲಾ ಶಿಕ್ಷಕರು ಈ ಕಾಯಾ೯ಗಾರದಲ್ಲಿ ಮೂಡಿಬಂದ ಅಂಶಗಳ ಕಿಕ್ ತಪ್ಪದೇ ಮಸ್ತಕದಲ್ಲಿರಿಸಿಕೊಳ್ಳಬೇಕು. ನಿಮ್ಮೊಳಗಿರುವ ಕಲೆ ನಿಮ್ಮ ಮನಸ್ಸಿನಲ್ಲೇ ಕಮರಿಸಿಕೊಳ್ಳಬೇಡಿ.ಶೇರ್ ಮಾಡಿ ಸಮಾಜಕ್ಕೆ,ಮಕ್ಕಳಿಗೆ ನೀಡಿ. ತಾವು ಕೂಡಾ ಚಿತ್ರಕಲಾವೋಪಾಸಕರು. ಕಲಾ ಪ್ರೀತಿ ನೋಡುವರ ದೃಷ್ಟಿ ಮೇಲಿದೆ. ಮಾಡನ್೯ ಲೈಫ್ ನಲ್ಲಿ ಕಲೆ ಮರೆಯಬಾರದು. ಚಿತ್ರಕಲೆ ಅಥೈ೯ಸಿಕೊಳ್ಳಲಾರದಷ್ಟು ಬಹಳಷ್ಟು ಗಂಭೀರತೆ ಪರಿಣಾಮ ಬೀರುತ್ತದೆ. ಮನಸ್ಸಿನ ಭಾವನೆಗಳ ಅಭಿವ್ಯಕ್ತ ಪಡಿಸುವ ಚಿತ್ರಕಲೆ ವಿಷಯ ಮಹತ್ತರವಾಗಿದೆ ಎಂದು ಉಮೇಶ ಶಿರಹಟ್ಟಿಮಠ ಅಭಿಪ್ರಾಯಪಟ್ಟರು.
ಚಿತ್ರಕಲಾ ವಿಷಯ ಜಿಲ್ಲಾ ನೋಡಲ್ ಅಧಿಕಾರಿ ಮಂಜುನಾಥ ಮಾನೆ ಮಾತನಾಡಿ, ಶೈಕ್ಷಣಿಕ ಚಿಂತನೆಗಳ ಆವಲೋಕನಕ್ಕೆ ಇಂಥ ಕಾಯಾ೯ಗಾರಗಳು ಪೂರಕವಾಗಿವೆ. ವೃತ್ತಿ ಬಾಂದವರು ತಮ್ಮ ಕಷ್ಟ,ಸುಖಗಳನ್ನು ಇಲ್ಲಿ ಹಂಚಿಕೊಂಡು ವಿಷಯ ಕ್ಲಿಷ್ಟತೆ ಪರಿಹರಿಸಿಕೊಳ್ಳಲು ಅನುಕೂಲ ಕಲ್ಪಿಸುತ್ತದೆ ಎಂದರು.
ವಿಷಯ ಸಂಪನ್ಮೂಲ ವ್ಯಕ್ತಿ ಸಿದ್ದನಾಥ ಪ್ರೌಢಶಾಲೆಯ ಎಚ್.ಸಿ.ಹೂಗಾರ, ಕೋಲಾಜ್ ಕಲೆಯ ಪ್ರಾತ್ಯಕ್ಷಿಕೆ ನೀಡಿ ಕ್ರಿಯಾತ್ಮಕ ಶಕ್ತಿ ಕ್ರಿಯಾಶೀಲತೆಯಿಂದ ಅನುವರಣಗೊಳ್ಳಲು ಚಿತ್ರಕಲೆ ಸಹಕಾರಿಯಾಗಿದೆ. ಕೋಲಾಜ್ ಕಲೆ ಮಕ್ಕಳಲ್ಲಿ ವಿಶೇಷ ಚೇತನ ತುಂಬುತ್ತದೆ.ಇದು ಕೌಶಲ್ಯ ಮೂಡಿಸುವ ಚಟುವಟಿಕೆಯಾಗಿದೆ ಎಂದರು. ಕತ್ತರಿಸುವುದು,ಅಂಟಿಸುವುದು ಕಟ್ ಆ್ಯಂಡ್ ಪೇಸ್ಟ್ ಕೋಲಾಜ್ ಕಲೆ ವಿಶಿಷ್ಟವಾಗಿ ಮಕ್ಕಳಿಗೆ ಆಕಷಿ೯ಸುತ್ತದೆ. ಬಣ್ಣದ ಪೇಪರ್, ಪ್ಲಾಸ್ಟಿಕ್,ಬಟ್ಟೆಯ ತುಂಡುಗಳು ಇವೆಲ್ಲವೂ ವಿಂಗಡಿಸಿ ಪಕ್ಷಿ,ಪ್ರಾಣಿ,ಪ್ರಾಕೃತಿಕ ನಿಸರ್ಗದ ಸುಂದರ ಚಿತ್ರಗಳನ್ನು ರಚಿಸಬಹುದು. ಈ ಕಲೆ ಯುರೋಪ್ ದೇಶದಿಂದ ಮೊದಲು ಪ್ರಜ್ವಲಿಸಿದ್ದು ಅಲ್ಲಿನ ಜಾಗ್ರಸ್ ಪ್ರಾ ಎಂಬ ಕಲಾವಿದ ಈ ಕಲೆ 1918 ರಲ್ಲಿ ಕಂಡು ಹಿಡಿದಿದ್ದಾರೆ ಎಂದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಪಿಡಿಜೆ ಪ್ರೌಢಶಾಲೆಯ ಸಂಜಯ ಕುಲಕರ್ಣಿ ಮಾತನಾಡಿ, ನೋಡಲ್ ಅಧಿಕಾರಿ,ಲೇಖಕ ಮಂಜುನಾಥ ಮಾನೆ ಅವರ ಮಾನೆ ಕ್ರಿಯೇಷನ್ಸ್ ದಿಂದ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಕಟಿತ ಚಿತ್ರಕಲಾ ಶಿಕ್ಷಣದ ಪಠ್ಯ ಪುಸ್ತಕ ಪರಿಚಯಿಸಿದರು.
ಎನ್ ಸಿ ಎಫ್-2005 ಪಠ್ಯ ವಸ್ತು, ಎನ್ ಇ ಪಿ- 2020 ಆಧಾರಿತ 8 ನೇ ತರಗತಿಯ ಚಿತ್ರ ಚೇತರಿಕೆ, 9 ನೇ ತರಗತಿಯ ಚಿತ್ರ ಚೇತನ,10 ನೇ ತರಗತಿಯ ಚಿತ್ರ ಸ್ಪೂರ್ತಿ ಚಿತ್ರಕಲಾ ಶಿಕ್ಷಣದ ಅಭ್ಯಾಸ ಪಠ್ಯ ಪುಸ್ತಕಗಳ ವಿಶೇಷತೆ ವಿವರಿಸಿದರು. ಕೌಶಲ್ಯ, ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಹಾಗೂ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಪಾಠ ಗೈಯಲು,ಕಲೆಯ ಜ್ಞಾನ ಇನ್ನಷ್ಟು ಉತ್ಕ್ರಟವಾಗಿ ಹಂಚಿಕೊಳ್ಳಲು ಮಾನೆಯರ ರಚಿತ ಪಠ್ಯ ಪುಸ್ತಕಗಳು ಉಪಯುಕ್ತವಾಗಿವೆ ಎಂದರು.
ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿಶ್ವೇಶ್ವರಯ್ಯ ಮಠಪತಿ,ಬಂಜಾರಾ ಶಾಲೆ ಮುಖ್ಯ ಶಿಕ್ಷಕ ವಿ.ಡಿ.ಲಮಾಣಿ ವೇದಿಕೆ ಮೇಲಿದ್ದರು.ಜಿಲ್ಲೆಯ ವಿವಿಧ ಪ್ರೌಢಶಾಲೆಗಳಿಂದ 116 ಕ್ಕೂ ಹೆಚ್ಚು ಚಿತ್ರಕಲಾ ಶಿಕ್ಷಕರು ಕಾಯಾ೯ಗಾರದಲ್ಲಿ ಪಾಲ್ಗೊಂಡಿದ್ದರು.