ಗದಗ: ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಸಂಗ್ರಹ ಗೋಡೌನ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಗದಗ ನಗರದಲ್ಲಿ ನಡೆದಿದೆ‌.
ಇಲ್ಲಿನ ಮೂರು ಕಡೆ ಪೊಲೀಸ್ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿ ಈ ರೀತಿ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡ ಅಕ್ರಮ ವೆಸಗುವವರ ದಂಧೆಕೋರರ ನಡೆ ಬಹುತೇಕರು ವಿರೋಧಕ್ಕೆ ಕಾರಣವಾಗಿದೆ‌.

ಇಲ್ಲಿನ ಗದಗ-ಬೆಟಗೇರಿ ನಗರದ ಅಬ್ಬಿಗೇರಿ ಕಂಪೌಂಡ್, ತೀಸ್ ಬಿಲ್ಡಿಂಗ್ ಹಾಗೂ ನಿಸರ್ಗ ಬಡಾವಣೆಯಲ್ಲಿನ ಗೋಡೌನ್ ಗಳಲ್ಲಿ ಅಕ್ರಮ ದಾಸ್ತಾನು ಮಾಡಲಾಗಿದ್ದ ಗೋಡೌನ್ ಗಳ ಮೇಲೆ ದಾಳಿ ನಡೆಸಲಾಯಿತು. ಅಕ್ರಮ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಹಾಗೂ ಎರಡು ಟಾಟಾ ಏಸ್ ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಸಂಗ್ರಹಕಾರರ ವಿರುದ್ದ ಅವಶ್ಯಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲು ಮಾಡುವುದಾಗಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹಾಗೂ ಗದಗ ಎಸ್ಪಿ ಯತೀಶ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಬಿಜೆಪಿಯಿಂದ ಎಂಎಲ್ಸಿ ಆಗಬೇಕಂತಾರಾ ವಾಟಾಳ್ ನಾಗರಾಜ್..?

ನ್ನಡಪರ ಹೋರಾಟಗಾರ, ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಬಿಜೆಪಿ ಸೇರ್ತಾರಾ..? ಹೀಗೊಂದು ಪ್ರಶ್ನೆ ಇದೀಗ ಉದ್ಭವವಾಗಿದೆ.

ಕೊರೊನಾ ಗೆದ್ದ 103ರ ವೃದ್ಧೆ

ಅಮೆರಿಕದ ಮೆಸಾಚ್ಯುಸೆಟ್ಸ್ ನಲ್ಲಿ 103ರ ವೃದ್ಧೆ ಸ್ಟೆಂಜಾ ಕೊರೊನಾ ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾಗಿದ್ದಾರೆ.

ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿ ಅವರಿಗೆ ನೀಡಿದ ಸಲಹೆ ಏನು?

ಗ್ರೀನ್ ಝೋನ್‌ಗಳಲ್ಲಿಯೂ ಕೊರೊನಾ ಪ್ರಕರಣಗಳು ಕಂಡು ಬರುತ್ತಿದ್ದು, ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ವಿಧಿಸಲಾಗಿರುವ ನಿಯಮಗಳೇ ಮೇ 17ರ ನಂತರವೂ ಮುಂದುವರಿಯಲಿ ಎಂದು ಸಿಎಂ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಮಾಜಿ ಭೂಗತ ದೊರೆ ಮುತ್ತಪ್ಪ ರೈ ನಿಧನ

ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ(68) ಇಂದು (ಶುಕ್ರವಾರ) ಬೆಳಿಗ್ಗೆ ನಿಧನರಾಗಿದ್ದಾರೆ. ಇಂದು ಸಂಜೆ 4 ಗಂಟೆಗೆ ರಾಮನಗರ ತಾಲೂಕಿನ ಬಿಡದಿಯಲ್ಲಿರುವ ಫಾರ್ಮ ಹೌಸ್ ನಲ್ಲಿ ಮುತ್ತಪ್ಪ ರೈ ಅವರ ಅಂತ್ಯಕ್ರಿಯೇ ನಡೆಯಲಿದೆ.